ರಾಜ್ಯ ಸರ್ಕಾರವು ಅರಣ್ಯವಾಸಿಗಳ ಹಿತಾಸಕ್ತಿಯನ್ನು ರಕ್ಷಿಸುತ್ತಿಲ್ಲ. ರಾಜ್ಯ ಸರ್ಕಾರವು ಕೂಡಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಭರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಅಗ್ರಹಿಸಿದರು.
ಬುಧವಾರದಂದು ಯಡಿಯೂರಪ್ಪನವರು ಜಿಲ್ಲಾ ಭಾಜಪ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅರಣ್ಯವಾಸಿಗಳ ರಕ್ಷಣೆಗೆ ಭಾಜಪವು ಬದ್ಧವಾಗಿದೆ, ಅವರಿಗಾಗಿ ಹೋರಾಡಲು ಸಿದ್ಧ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಸಮರ್ಪಕ ದಾಖಲೆ ಸಲ್ಲಿಸದ ಕಾರಣ, ಸರ್ವೋಚ್ಚ ನ್ಯಾಯಾಲಯವು ಅರಣ್ಯವಾಸಿಗಳ ವಿರುದ್ಧ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಸ್ವಲ್ಪವೂ ವಿಳಂಬ ಮಾಡದೆ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಿ, ಅರಣ್ಯವಾಸಿಗಳ ಹಿತ ರಕ್ಷಿಸಬೇಕು ಎಂದು ಯಡಿಯೂರಪ್ಪ ಅವರು ಆಗ್ರಹಿಸಿದರು.
ಈ ಸಮಯ ಹರತಾಳು ಹಾಲಪ್ಪ, ಕೆ ಎಸ್ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ, ಶಾಸಕರಾದ ಕುಮಾರ್ ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಅಶೋಕ್‌ನಾಯ್ಕ, ಮಾಜಿ ಶಾಸಕ ಸ್ವಾಮಿ ರಾವ್, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಗುರುಮೂರ್ತಿ, ರಾಜಶೇಖರ್ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು.
ಸಭೆಯ ನಂತರ, ರೈತರು ಮತ್ತು ಭಾಜಪ ಮುಖಂಡರು ಕಾರ್ಯಕರ್ತರ ಜೊತೆ ಪಕ್ಷದ ಕಾರ್ಯಾಲಯದಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ವರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿಗೆ ಅರಣ್ಯವಾಸಿಗಳ ಸಮಸ್ಯೆಗಳ ವಿಚಾರವಾಗಿ ಮನವಿ ಸಲ್ಲಿಸಿದರು.
ಸಿಬಿನ್ ಪನಯಲ್ ಸೊಮನ್
ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್
