ಮನಮ: ಒಂಭತ್ತು ವರ್ಷದ ಹುಡುಗ ಸೇರಿದಂತೆ ಮೂವರು ಸದಸ್ಯರ ತಂಡವು ರಸಪ್ರಶ್ನೆ ಸ್ಪರ್ಧೆಯಲ್ಲಿ ಜಯಗಳಿಸಿದೆ. ಈ ಸ್ಪರ್ಧೆಯಲ್ಲಿ ೧೦೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದವು.
ನಿರಂಜನ್ ವಿಶ್ವನಾಥ್ ಅಯ್ಯರ್ ಅವರ ತಾಯಿ ಗಾಯತ್ರಿ ಮತ್ತು ಅಮಿತ್ ಚೌಧರಿ ಅವರಿದ್ದ ‘What’s in a name?’ ತಂಡವು ಇಂಡಿಯನ್ ಡಿಲೈಟ್ಸ್ ಇಂಡಿಯಾ ಕ್ವಿಜ್ ೨೦೧೯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿತು.
ಪ್ರಣವ್ ಕೆ, ಬಾಲಾ ವೈ ಮತ್ತು ಕೃಷ್ಣನ್ ಎಚ್ ಇವರಿದ್ದ ‘ವಿಶ್ವಭಾರತಿ’ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಅಜಯ್ ಜೈಸ್ವಾಲ್, ಮುದಿತ್ ಮಾಥುರ್ ಮತ್ತು ಅನನ್ಯಾ ಅವರಿದ್ದ ‘ದಿ ಕ್ವೆಸ್ಟ್’ ತಂಡವು ಮೂರನೇ ಸ್ಥಾನ ಗಿಟ್ಟಿಸಿತು.
ಭಾರತದ ೭೦ ನೇ ಗಣರಾಜ್ಯೋತ್ಸವದ ಅಂಗವಾಗಿ, ವೆರಿಟಾಸ್ ಪಬ್ಲಿಕ್ ರಿಲೇಶನ್ಸ್ ಮತ್ತು ಬಿಕೆಎಸ್ ಸಹಯೋಗದೊಂದಿಗೆ ಬಹರೇನ್ ಇಂಡಿಯಾ ಎಜುಕೇಷನಲ್ ಅನದ ಕಲ್ಚರಲ್ ಫೋರಮ್ ಈ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತು. ಬಹರೇನ್ ಕೇರಳೀಯ ಸಮಾಜಂ (ಬಿಕೆಎಸ್)ನ ಡೈಮಂಡ್ ಜ್ಯಬಿಲೀ ಹಾಲ್‌ನಲ್ಲಿ ಈ ಈ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಕೊಚ್ಚಿ ಮೆಟ್ರೋ ರೈಲ್ ವ್ಯವಸ್ಥಾಪಕ ನಿರ್ದೇಶಕ ಎ.ಪಿ.ಎಂ ಮೊಹಮ್ಮದ್ ಹನೀಷ್ ಕ್ವಿಜ್ ಮಾಸ್ಟರ್ ಆಗಿದ್ದರು. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಮಾಹಿತಿ ಮತ್ತು ಮುಂದಿನ ಮಾಹಿತಿ ಸಹಾಯಕ ಉಪಕಾರ್ಯದರ್ಶಿ ಡಾ. ಇಬ್ರಾಹಿಂ ಅಲ್ ದೊಸರಿ ಅವರು ಮುಖ್ಯ ಅತಿಥಿಯಾಗಿದ್ದರು.
ಬಿಐಇಐಎಫ್ ಅಧ್ಯಕ್ಷ ಶ್ರೀ ಸೊವಿಸೆನ್ ಚೆನ್ನತ್ತೂಸ್ಸೆರಿ, ಪೋಷಕ ಶ್ರೀ ಸೋಮನ್ ಬೇಬಿ, ಕಾರ್ಯಕ್ರಮದಲ್ಲಿ ಸಂಚಾಲಕ ಕಮಾಲುದ್ದೀನ್ ಮಾತನಾಡಿದರು. ಸಮಾರಂಭದ ಪ್ರಧಾನ ಸಂಚಾಲಕ ಪವಿತ್ರನ್ ನಿಲೇಶ್ವರಂ, ಕಾರ್ಯಕಾರಿ ಸದಸ್ಯರು ಬಾಬು ಕುಂಜೀರಮನ್, ಅಜಿತ್ ಕುಮಾರ್, ಸಮಾರಂಭ ಸಂಯೋಜಕರಾದ ಬಬಿನಾ ಸುನಿಲ್, ಬಿಐಇಸಿಎಫ್ ಮಾಧ್ಯಮ ಸಂಯೋಜಕ ಸುನಿಲ್ ಥಾಮಸ್ ರನ್ನಿಯವರು ಸಭೆಯನ್ನು ಸಂಘಟಿಸಿದರು.
ವೇದಿಕೆ ಸಂಯೋಜಕರಾದ ವಿನಯಚಂದ್ರನ್, ರಾಜೇಶ್ ಚೆರವಾಲ್ಲಿ, ಶೀಜಾ ಪವಿತ್ರನ್ ಅವರು ವೇದಿಕೆ ವ್ಯವಸ್ಥೆಯನ್ನು ನಿರ್ವಹಿಸಿದರು. ಬಹರೇನ್ ಕೇರಳೀಯ ಸಮಾಜಂ ಮಹಿಳಾ ಗುಂಪಿನ ಅಧ್ಯಕ್ಷೆ ಮೊಹಿನಿ ಥಾಮಸ್, ಕಾರ್ಯದರ್ಶಿ ರೆಜಿತ್ ಆನಿ ಮತ್ತು ಮಹಿಳಾ ಗುಂಪಿನ ಸದಸ್ಯರು ರಸಪ್ರಶ್ನೆಗಾಗಿ ನೋಂದಣಿ ಕಾರ್ಯ ನಿರ್ವಹಿಸಿದರು. ಪ್ರಜೋಶ ಆನಂದ್ ಈ ಸಮಾರಂಭವನ್ನು ನಿರ್ವಹಿಸಿದರು. ಜೀವನ್ ಷಾ, ರಾಜೇಶ್ ಕೆ.ಪಿ., ಬಿ. ವೇಣುಗೋಪಾಲ್ ಅಂಪಪಟ್ಟಿಯನ್ನು ನಿರ್ವಹಿಸಿದರು. ಸ್ಥಳದಲ್ಲೇ ಕೇಳಲಾದ ರಸಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಪ್ರೇಕ್ಷಕರು ೩೦ಕ್ಕಿಂತ ಹೆಚ್ಚು ಬಹುಮಾನಗಳನ್ನು ಪಡೆದರು. ಅಜಿತ್ ನಾಯರ್ ನೇತೃತವದ ಕಾನ್ವೆಕ್ಸ್ ಬೆಳಕು ಮತ್ತು ಧ್ವನಿ ವ್ಯವಸ್ಥೆ ಸಜ್ಜುಗೊಳಿಸಿತ್ತು. ನೈನಾ ಮೊಹಮ್ಮದ್ ಶಾಫಿ ಅವರ ನೇತೃತ್ವದಲ್ಲಿ ಲಿಟಲ್ ಸ್ಟಾರ್ ತಂಡವು ಭಾರತ ಮತ್ತು ಬಹರೇನ್ ರಾಷ್ಟ್ರಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ರಾಖಿ ರಾಜೇಶ್ ಅವರು ರಾಷ್ಟ್ರೀಯ ಪ್ರತಿಜ್ಞೆಯಯ ನೇತೃತ್ವ ವಹಿಸಿದರು. ರಸಪ್ರಶ್ನೆಯ ತಾಂತ್ರಿಕ ವ್ಯವಸ್ಥೆಯನ್ನು ಶ್ರೀ ದಿಲ್ಲೇಶ್ ಕುಮಾರ್, ದರ್ಮನ್, ಟೋನಿ ಪೆರುಮಾನರ್ ಅವರಿದ್ದ ಐಟಿ ತಂಡ ನಿರ್ವಹಿಸಿತು. ಶ್ರೀ ಅಜಿ ಪಿ ಜಾಯ್, ಶ್ರೀ ಅನೂಪ್, ಸಿಬಿ ಕೈಥಾರ್ಥ್ ಸ್ವಾಗತಕಾರರ ಮತ್ತು ಸ್ವಯಂಸೇವಕರ ತಂಡಗಳನ್ನು ನಿರ್ವಹಿಸಿದರು.
ರಸಪ್ರಶ್ನೆಯ ನಿರ್ಗಮನ ಸುತ್ತು (elimination round) ಸಂಜೆ ೫:೩೦ಕ್ಕೆ ಆರಂಭವಾಯಿತು.
ನುರಿತ ಕ್ವಿಜ್ ಮಾಸ್ಟರ್ ಶ್ರೀ ಎ ಪಿ ಎಂ ಮೊಹಮ್ಮದ್ ಹನೀಷ್ ಐಎಎಸ್ ಈ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟ್ರು. ಈ ರಸಪ್ರಶ್ನೆಯ ಹಿಂದಿನ ಮೂರು ಆವೃತ್ತಿಗಳನ್ನೂ ಸಹ ಇವರೇ ನಡೆಸಿದರು.
ಡಾ. ಇಬ್ರಾಹಿಂ ಅಲ್ ದೊಸರಿ ತಮ್ಮ ಭಾಷಣದಲ್ಲಿ ಜ್ಞಾನದ ಮಹತ್ವದ ಬಗ್ಗೆ ಒತ್ತು ನೀಡಿದರು. ಜ್ಞಾನವೇ ಶಕ್ತಿ, ಶ್ರೀಮಂತಿಕೆಯು ಹಣ ಗಳಿಕೆಯಿಂದಲ್ಲ, ಜ್ಞಾನ ಸಂಪಾದನೆಯಿಂದ ಎಂಬುದನ್ನು ಉಲ್ಲೇಖಿಸಿದರು.
ಸ್ಪರ್ಧಿಗಳಲ್ಲಿ ತಮ್ಮ ಮಾತೃಭೂಮಿಯ ಬಗ್ಗೆ ತಿಳಿವಳಿಕೆ ಹೆಚ್ಚಿಸುವ ಉದ್ದೇಶದಿಂದ ಭಾರತದ ಬಗ್ಗೆ ಪ್ರಶ್ನೆಗಳ ಸುತ್ತನ್ನು ರಸಪ್ರಶ್ನೆಯು ಒಳಗೊಂಡಿತ್ತು. ಬಹರೇನ್ ಬಗ್ಗೆಯ ಹೊಸ ಸುತ್ತನ್ನೂ ಸಹ ಸೇರಿಸಲಾಯಿತು. ಸ್ಪರ್ಧಿಗಳು ಮತ್ತು ಪ್ರೇಕ್ಷಕರು ಈ ಸುತ್ತಿನಲ್ಲಿ ಇನ್ನಷ್ಟು ಸಕ್ರಿಯರಾಗಿ ಭಾಗವಹಿಸಿದರು.
ಮೊದಲನೆಯ ರನ್ನರ್ಸ್‌ಆಪ್ ತಂಡಕ್ಕೆ ಎ ಪಿ ಜೆ ಅಬ್ದುಲ್ ಕಲಾಂ ರೊಲಿಂಗ್ ಟ್ರೊಫಿ ಮತ್ತು ವೈಯಕ್ತಿಕ ಟ್ರೊಫಿಗಳು, ಪ್ರಮಾಣ ಪತ್ರಗಳು ಹಾಗೂ ನಗದು ಹಣ ನೀಡಲಾಯಿತು. ಭಾಗವಹಿಸಿದವರೆಲ್ಲರಿಗೂ ಸಹ ಶ್ರೀ ಹನೀಷ್ ಅವರು ಸಹಿ ಹಾಕಿದ ಪ್ರಮಾಣ ಪತ್ರಗಳನ್ನು ಅಂದೇ ವಿತರಿಸಲಾಯಿತು.
ರಸಪ್ರಶ್ನೆ ಗೆದ್ದವರ ತಂಡದಲ್ಲಿ ನಾಲ್ಕನೆಯ ತರಗತಿಯ ಹುಡುಗ ಮಾಸ್ಟರ್ ನಿರಂಜನ್ ವಿಶ್ವನಾಥ್ ಅಯ್ಯರ್ ಅತಿ ಕಿರಿಯ ಸ್ಪರ್ಧಿಯಾಗಿ ಗಮನ ಸೆಳೆದ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ತಂಡ ಮತ್ತು ಸದಸ್ಯರು:
೧. “What’s in a name” – ಗಾಯತ್ರಿ ವಿಶ್ವನಾಥ್ ಅಯ್ಯ್ರರ್, ನಿರಂಜನ್ ವಿಶ್ವನಾಥ್ ಅಯ್ಯರ್, ಅಮಿತ್ ಚೌಧರಿ
೨. “ವಿಶ್ವಭಾರತಿ” – ಪ್ರಣವ್ ಕೆ, ಬಾಲಾ ವೈ, ಕೃಷ್ಣನ್ ಎಚ್
೩. “ದಿ ಕ್ವೆಸ್ಟ್” – ಅಜಯ್ ಜೈಸ್ವಾಲ್, ಮುದಿತ್ ಮಾಥುರ್, ಅನನ್ಯಾ
International News Desk, Bahrain
Mr.Sisel Panayil Soman, COO – Middle East