ಭಾರತವು ತಾನು ದೂತಾವಾಸದ ಲಭ್ಯತೆಗಾಗಿ ಕೇಳಿಲ್ಲ, ಬದಲಿಗೆ ಪಾಕಿಸ್ತಾನವು ಕೂಡಲೇ ಬೇಷರತ್ತಾಗಿ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಹೇಳಿದೆ. ಈ ಪ್ರಕರಣದಲ್ಲಿ ಕಂಡಹಾರ್ ಪ್ರಕರಣ ತರಹ ಯಾವುದೇ ಒಪ್ಪಂದಕ್ಕೆ ಸಿದ್ಧವಿಲ್ಲ ಎಂದು ಭಾರತವು ಖಡಕ್ಕಾಗಿ ಹೇಳಿದೆ.
ನಿನ್ನೆ ಭಾರತದ ಗಡಿ ದಾಟಿ ಹತ್ತು ಕಿಲೋಮೀಟರ್ ಒಳಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ ೨೦ ಪಾಕಿಸ್ತಾನಿ ಯುದ್ಧವಿಮಾನಗಳನ್ನು ಅಭಿನಂದನ್ ತಮ್ಮ ಎಂಐಜಿ-೨೧ ವಿಮಾನವನ್ನು ಹಾರಿಸಿಕೊಂಡು ಅಟ್ಟುತ್ತಿದ್ದರು. ಆಗ ಪಾಕಿಸ್ತಾನಿ ಸೇನಾ ಪಡೆಯವರು ಅಭಿನಂದನ್ ವಿಮಾನವನ್ನು ಹೊಡೆದುರುಳಿಸಿ, ಪೈಲಟ್‌ರನ್ನು ಬಂಧಿಸಿದರು.
ಕಂಡಹಾರ್ ತರಹದ ಒತ್ತಡ ಹೇರಲು ಪಾಕಿಸ್ತಾನವು ಹವಣಿಸುತ್ತಿದೆ ಎಂದು ಭಾರತದ ಮೂಲಗಳು ತಿಳಿಸಿವೆ. ಅಭಿನಂದನ್‌ರ ಬಗ್ಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಇರುವುದಿಲ್ಲ. ಅವರಿಗೆ ಮಾನವೀಯತೆಯುಕ್ತವಾಗಿ ನಡೆಸಿಕೊಂಡು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು ಭಾರತವು ತಿಳಿಸಿದೆ.
ನಿನ್ನೆ ಪಾಕಿಸ್ತಾನ ವಾಯು ಪಡೆಯೇ ಮೊದಲು ಅತಿಕ್ರಮ ಪ್ರವೇಶ ಮಾಡಿತ್ತು, ಇದಕ್ಕೆ ಭಾರತವು ತಕ್ಕ ಉತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ. ಭಾರತವು ಫಾಕಿಸ್ತಾನದ ಒಂದು ಎಫ್-೧೬ ಯುದ್ಧವಿಮಾನವನ್ನು ಹೊಡೆದುರುಳಿಸಿದ ಪರಿಣಾಮವಾಗಿ ಒಬ್ಬ ಪಾಕಿಸ್ತಾನಿ ಪೈಲಟ್ ಸತ್ತುಹೋದ ಎಂದು ಹೇಳಿದೆ.
