ಭಾರತವು ಪುಲ್ವಾಮಾದಲ್ಲಿನ ಪಾಕಿಸ್ತಾನಿ ಭಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರ ತೆಗೆದುಕೊಳ್ಳಲಾರಂಭಿಸಿದೆ.
ಭಾರತೀಯ ವಾಯು ಸೇನೆಯು (ಐಎಎಫ್) ಇಂದು (ಮಂಗಳವಾರ) ಎಲ್‌ಒಸಿ ದಾಟಿ ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದನಾ ಶಿಬಿರಗಳ ಮೇಲೆ ವಾಯು ಬಾಂಬ್ ಧಾಳಿ ನಡೆಸಿ, ಭಯೋತ್ಪಾದನಾ ಶಿಬಿರಗಳನ್ನು ನಿರ್ಮೂಲ ಮಾಡಿದೆ.
ಇಂದು ಮುಂಜಾನೆ ಸುಮಾರು ೩:೩೦ಕ್ಕೆ ಐಎಎಫ್‌ನ ೧೨ ಮಿರೇಜ್ ೨೦೦೦ ಯುದ್ಧವಿಮಾನಗಳು ೧೦೦೦ ಕಿಲೋಗ್ರಾಮ್ ತೂಕವಿರುವ ಬಾಂಬ್ ಗಳನ್ನು ಹೊತ್ತೊಯ್ದು ಎಲ್ಒಸಿ ಆಚೆಗೆ ಪಿಒಕೆ ಮತ್ತು ಕೈಬರ್ ಪಖ್ತೂಂಖ್ವಾ ದಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಬೀಳಿಸಿದವು. ಬಾಲಾಕೋಟ್, ಚಾಕೋಠಿ ಮತ್ತು ಮುಜಫರಾಬಾದ್‌ನಲ್ಲಿ ಭಯೋತ್ಪಾದನಾ ಕೇಂದ್ರಗಳು-ಶಿಬಿರಗಳು ಇವೆ.
ಜೈಷ್-ಎ-ಮೊಹಮ್ಮದ್ ದ ಸುಸಜ್ಜಿತ ಭಯೋತ್ಪಾದಕ ಕೇಂದ್ರಗಳು “ಪಿಒಕೆ”ಯ ಭಿಂಬಸರ್, ಬಾಲಾಕೊಟ್ ಮತ್ತು ಬಹಾವಾಲ್ಪುರದಲ್ಲಿವೆ. ಐಎಎಫ್ ವಿಮಾನಗಳು ಈ ಕೇಂದ್ರಗಳ ಬಳಿಯಿರುವ ಶಿಬಿರಗಳನ್ನು ನಿರ್ಮೂಲ ಮಾಡಿ ಬಂದಿವೆ.
ಭಾರತೀಯ ವಾಯು ಸೇನಾ ಯುದ್ಧವಿಮಾನಗಳು ಗಡಿ ದಾಟಿ ವ್ಯಾಜ್ಯವಾಗಿರುವ ಪಾಶ್ಮೀರಿ ವಲಯದೊಳಗೆ ಬಂದು ಧಾಳಿ ನಡೆಸಿದವು, ಆದರೆ ಒಂದು ಸಾವೂ ಸಂಭವಿಸಿಲ್ಲ ಎಂದು ಹೇಳಿದೆ. ‘ಭಾರತೀಯ ಯುದ್ಧವಿಮಾನಗಳು ಮುಜಫರಾಬಾದ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿದವು” ಎಂದು ಪಾಕಿಸ್ತಾನಿ ಸೇನಾ ವಕ್ತಾರ ಟ್ವಿಟರ್ ಮೂಲಕ ಹೇಳಿದರು. (ಮುಜಪರಾಬಾದ್ ಪಿಒಕೆ ರಾಜಧಾನಿ).
ಪಾಕಿಸ್ತಾನ ವಿಮಾನಗಳಿಂದ ಭಾರತದ ಮೇಲೆ ಧಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯದ ಭಾರತೀಯ ರಕ್ಷಣಾ ಇಲಾಖೆಯು, ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಯುದ್ದಕ್ಕೂ ಕಟ್ಟೆಚ್ಚರ ವಹಿಸಲು ಸೇನೆಗಳಿಗೆ ಸೂಚಿಸಲಾಗಿದೆ.
ಫೆಬ್ರುವರಿ ತಿಂಗಳ ೧೪ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಪಡೆಯವರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ಧಾಳಿ ನಡೆಸಿದರು ಇದರಲ್ಲಿ ೪೦ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾದರು. ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಈ ಕೃತ್ಯಕ್ಕೆ ಹೊಣೆಗಾರಿಕೆ ಒಪ್ಪಿಕೊಂಡಿತು. ಘಟನೆ ನಡೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.
ವಿಶ್ವದ ಬಹುಶಃ ಎಲ್ಲಾ ದೇಶಗಳು ಭಾರತಕ್ಕೆ ನೈತಿಕ ಬೆಂಬಲ ನೀಡಿದೆ. ಅಮೆರಿಕಾ, ಭಾರತಕ್ಕೆ ಸ್ವ-ರಕ್ಷಣೆಯ ಹಕ್ಕಿದೆ ಎಂದು ಹೇಳಿದೆ.
