ಕನ್ನಡ

ಭಾರತದ ಮಹಾನ್ ಉದ್ಯಮಿ – ರತನ್ ಟಾಟಾ

ಭಾರತದ ಮಹಾನ್ ಉದ್ಯಮಿ – ರತನ್ ಟಾಟಾ

ರತನ್ ನವಲ್ ಟಾಟಾ (ಜನನ: ೨೮ ಡಿಸೆಂಬರ್ ೧೯೩೭, ಮುಂಬಯಿ, ಭಾರತ) ಭಾರತದ ಒಬ್ಬ ಮಹಾನ್ ಉದ್ಯಮಿ. ಇಸವಿ ೧೯೯೧ರಿಂದ ೨೦೧೨ರ ತನಕ ಹಾಗೂ ಮತ್ತೆ ೨೦೧೬ರಿಂದ ೨೦೧೭ರ ತನಕ ಇವರು ಮುಂಬಯಿ ಮೂಲದ ಟಾಟಾ ಗ್ರೂಪ್ ಎಂಬ ಸಂಸ್ಥೆಗಳ ಸಮೂಹದ ಅಧ್ಯಕ್ಷರಾಗಿದ್ದರು.

ರತನ್‌ ಟಾಟಾ ಭಾರತೀಯ ಕೈಗಾರಿಕೋದ್ಯಮಿಗಳು ಮತ್ತು ಲೋಕೋಪಕಾರಿಗಳ ಪ್ರಮುಖ ಕುಟುಂಬದ ಸದಸ್ಯರು (ಟಾಟಾ ಕುಟುಂಬವನ್ನು ನೋಡಿ). ಇವರು ನ್ಯೂ ಯಾರ್ಕ್‌ನ ಇಥಾಕಾದಲ್ಲಿರುವ ಕಾರ್ನಾಲ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದು ೧೯೬೨ರಲ್ಲಿ ಶಿಲ್ಪಶಾಸ್ರ್ರದಲ್ಲಿ ಬಿಎಸ್‌ ಪದವಿ ಪಡೆದರು. ನಂತರ ಭಾರತಕ್ಕೆ ಮರಳಿ ತಮ್ಮ ಉದ್ಯೋಗ ಆರಂಭಿಸಿದರು. ಟಾಟಾ ಗ್ರೂಪ್‌ನ ಹಲವಾರು ಅಂಗಸಂಸ್ಥೆಗಳಲ್ಲಿ ಉದ್ಯೋಗಿಯಾಗಿ ಬಹಳಷ್ಟು ಅನುಭವ ಪಡೆದು, ೧೯೭೧ರಲ್ಲಿ ಟಾಟಾ ಅಂಗಸಂಸ್ಥೆ ನ್ಯಾಷನಲ್ ರೇಡಿಯೊ ಅಂಡ್ ಎಲೆಕ್ಟ್ರಾನಿಕ್ಸ್ ಕಂಪೆನಿಯ ನಿರ್ದೇಶಕರಾಗಿ ನೇಮಕಗೊಂಡರು. ಒಂದು ದಶಕದ ನಂತರ ಅವರು ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾದರು. ೧೯೯೧ರಲ್ಲಿ ಅವರ ದೊಡ್ಡಪ್ಪ ಜೆ ಆರ್‌ ಡಿ ಟಾಟಾ ಅವರ ಉತ್ತರಾಧಿಕಾರಿಯಾಗಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದರು.

ಟಾಟಾ ಸಂಸ್ಥೆಗಳ ದೊಡ್ಡ ಸಮೂಹದ ಅಧ್ಯಕ್ಷತೆ ವಹಿಸಿಕೊಂಡೊಡನೆ, ರತನ್ ಟಾಟಾ ಟಾಟಾ ಗ್ರೂಪ್‌ನ್ನು ವಿಸ್ತರಿಸುವಲ್ಲಿ ಸಕ್ರಿಯರಾದರು. ಅದರ ವ್ಯವಹಾರಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವತ್ತ ಗಮನ ಕೇಂದ್ರೀಕರಿಸಿದರು. ಟಾಟಾ ಗ್ರೂಪ್ ೨೦೦೦ರಲ್ಲಿ ಲಂಡನ್ ಮೂಲದ ಟೆಟ್ಲೆ ಟೀಯನ್ನು ೪೩೧.೩ ದಶಲಕ್ಷ ಅಮೆರಿಕನ್ ಡಾಲರ್‌ಗಳಿಗೆ ಸ್ವಾಧೀನಪಡಿಸಿಕೊಂಡಿತು. ೨೦೦೪ರಲ್ಲಿ ದಕ್ಷಿಣ ಕೋರಿಯಾದ ಡಾಯಿವೂ ಮೋಟಾರ್ಸ್‌ನ ಲಾರಿ ತಯಾರಕ ಘಟಕನ್ನು ೧೦೨ ದಶಲಕ್ಷ ಅಮೆರಿಕನ್ ಡಾಲರ್‌ಗಳಿಗೆ ಕೊಂಡುಕೊಂಡಿತು. ಟಾಟಾ ಸ್ಟೀಲ್ ೨೦೦೭ರಲ್ಲಿ ಭಾರತೀಯ ಉದ್ದಿಮೆಯೊಂದು ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಮಟ್ಟದ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಆಂಗ್ಲೊ-ಡಚ್ ಉಕ್ಕು ತಯಾರಕ ಕೊರಸ್ ಗ್ರೂಪ್‌ ಎಂಬ ಬೃಹತ್ ಉದ್ದಿಮೆಯನ್ನು ೧೧.೩ ಶತಕೋಟಿ ಅಮೆರಿಕನ್ ಡಾಲರ್‌ಗಳಿಗೆ ಕೊಂಡುಕೊಂಡಿತು.

ಟಾಟಾ ಮೋಟಾರ್ಸ್ ೨೦೦೮ರಲ್ಲಿ ಫೋರ್ಡ್ ಸಂಸ್ಥೆಯಿಂದ ಬ್ರಿಟನ್‌ನ ಉನ್ನತ ಶ್ರೇಣಿಯ ಕಾರ್‌ ತಯಾರಕರಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ ಸಂಸ್ಥೆಗಳನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ ರತನ್ ಟಾಟಾ ವೈಯಕ್ತಿಕವಾಗಿ ಭಾಗಿಯಾಗಿದ್ದರು. ಭಾರತೀಯ ವಾಹನ ತಯಾರಕವೊಂದು ನಡೆಸಿದ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆಯಿದು, ಇದರ ಮೌಲ್ಯ ೨.೩ ಶತಕೋಟಿ ಅಮೆರಿಕನ್ ಡಾಲರ್‌ಗಳು. ಇದರ ಮಾರನೆಯ ವರ್ಷ ಟಾಟಾ ಮೊಟಾರ್ಸ್ ಟಾಟಾ ನ್ಯಾನೊ ಎಂಬ ಚಿಕ್ಕ ಗಾತ್ರದ ಬೀಜಾಕಾರದ ಹಿಂಬದಿ ಇಂಜಿನ್ ಹೊಂದಿರುವ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದರ ಬೆಲೆ ಸುಮಾರು ೧೦೦,೦೦೦ ರೂಪಾಯಿಗಳು (ಸುಮಾರು ೨,೦೦೦ ಅಮೆರಿಕನ್ ಡಾಲರ್‌ಗಳು). ಇದರ ಗಾತ್ರ ಕೇವಲ ೧೦ ಅಡಿ(ಮೂರು ಮೀಟರ್‌ಗಳು) ಗಿಂತ ಸ್ವಲ್ಪ ಉದ್ದ ಹಾಗೂ ೫ ಅಡಿ (೧.೫ ಮೀಟರ್‌ಗಳು) ಎತ್ತರವಿದ್ದರೂ, “ಜನತೆಯ ಕಾರು” ಎಂದು ಬಹಳ ಪ್ರಚಾರ ಗಳಿಸಿದ ಈ ಕಾರಿನಲ್ಲಿ ೫ ಜನ ವಯಸ್ಕರು ಕುಳಿತು ಪಯಣಿಸಲು ಅವಕಾಶವಿತ್ತು. ಟಾಟಾ ಅವರೇ ಹೇಳುವಂತೆ, ಭಾರತ ಹಾಗೂ ವಿದೇಶದಲ್ಲಿರುವ ದಶಲಕ್ಷಕ್ಕೂ ಹೆಚ್ಚು ಮಧ್ಯಮ ಮತ್ತು ಕೆಳ-ಮಧ್ಯಮ ವರ್ಗದವರ ಜನರಗೆ ಈ ಕಾರು “ಕ್ಷೇಮ, ಎಟುಬಹುದಂತಹ ಹಾಗೂ ಎಲ್ಲಾ ಹವಾಮಾನಗಳಲ್ಲೂ ಬಳಸಬಹುದಂತ ವಾಹನ”. ೨೦೧೨ರ ಡಿಸೆಂಬರ್ ತಿಂಗಳಲ್ಲಿ ರತನ್ ಟಾಟಾ ಟಾಟಾ ಗ್ರೂಪ್‌ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾದರು. ತಮ್ಮ ಉತ್ತರಾಧಿಕಾರಿ ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಹಿನ್ನೆಲೆಯಲ್ಲಿ, ರತನ್ ಟಾಟಾ ೨೦೧೬ರ ಅಕ್ಟೋಬರ್ ತಿಂಗಳಲ್ಲಿ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಅಧ್ಯಕ್ಷರಾಗಿದ್ದ ನಟರಾಜನ್ ಚಂದ್ರಶೇಖರನ್ ಅವರು ಟಾಟಾ ಗ್ರೂಪ್ ಅಧ್ಯಕ್ಷರಾಗಿ ನೇಮಕಗೊಂಡಾಗ ರತನ್ ಟಾಟಾ ೨೦೧೭ರ ಜನವರಿಯಲ್ಲಿ ನಿವೃತ್ತಿಗೆ ಮರಳಿದರು.

ರತನ್‌ ಟಾಟಾ ಅವರಿಗೆ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವು ಗೌರವಗಳು ಸಿಕ್ಕಿದ್ದವು. ಟಾಟಾ ಅವರಿಗೆ ೨೦೦೦ದ ಇಸವಿಯಲ್ಲಿ ಭಾರತದ ಅತ್ಯಂತ ವಿಶಿಷ್ಟ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ನೀಡಿ ಸನ್ಮಾನಿಸಲಾಯಿತು.

35 Comments

35 Comments

  1. Pingback: guaranteed ppc

  2. Pingback: How To Use Wealthy Affiliate 2020

  3. Pingback: where to buy the best fake watches in 2018

  4. Pingback: top10best.io/

  5. Pingback: airmaxfoot.com

  6. Pingback: Marc Menowitz Apartment Corp

  7. Pingback: 7lab pharma steroid review

  8. Pingback: digital marketing agency Hong Kong

  9. Pingback: lo de online

  10. Pingback: Sweet hampers

  11. Pingback: oder xanax xr bars 1mg, 2mg no script cheap from online pharmacy Usa Canada

  12. Pingback: unique video star transitions

  13. Pingback: carpet cleaning nearby

  14. Pingback: elsa sex doll

  15. Pingback: fake rolex watch

  16. Pingback: DevOps as a service

  17. Pingback: kocioł parowy

  18. Pingback: Replica Hublot

  19. Pingback: Service virtualization

  20. Pingback: watch replicas

  21. Pingback: Peter Comisar Disgraced Ex Goldman Sachs Banker Sued By Scooter Braun For Fraud.

  22. Pingback: richard mille

  23. Pingback: 대밤

  24. Pingback: hack instagram

  25. Pingback: one up mushroom bar

  26. Pingback: benelli firearms

  27. Pingback: printpictureonwood

  28. Pingback: funkymedia

  29. Pingback: ถาดกระดาษ

  30. Pingback: สล็อตวอเลท

  31. Pingback: nova88

  32. Pingback: sbo

  33. Pingback: สินเชื่อด่วน

  34. Pingback: สล็อตออนไลน์

  35. Pingback: buy followers

Leave a Reply

Your email address will not be published.

10 − nine =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us