Religion

ಹನುಮಾನ್ ಚಾಲೀಸಾ – ಕನ್ನಡ ಅನುವಾದ

ಶ್ರೀ ತುಲಸೀದಾಸ ವಿರಚಿತ “ಹನುಮಾನ್‌ ಚಾಲೀಸ” ಕನ್ನಡ ಅನುವಾದ

ಪಂಡಿತ್‌ ಶ್ರೀ ಜಿ ಜಯರಾಮ್‌ ಅವರಿಂದ

ಮೂಲ ಕೃಪೆ – ಶ್ರೀ ಬ್ರಹ್ಮ ಚೈತನ್ಯ ಶ್ರೀರಾಮ ಮಂದಿರ, ಎನ್‌ ಆರ್‌ ಬಡಾವಣೆ, ಚಿಂತಾಮಣಿ 563125 ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ

 

ಪ್ರಾರ್ಥನಾ ಶ್ಲೋಕ

ಶ್ರೀಗುರುಚರಣ ಸರೋಜ ರಜದಿಂ |

ಮನದರ್ಪಣ ಸ್ವಚ್ಛ ಮಾಡುವೆನು |

ನಾಲ್ಕು ಪುರುಷಾರ್ಥವನೀವ |

ಶ್ರೀರಾಮ ಕೀರ್ತಿಯ ಬಣ್ಣಿಸಿ ಪಾಡುವೆನು ||

ಬುದ್ಧಿಹೀನನ ಮೊರೆಯನಾಲಿಸಿ |

ಪವನ ಕುಮಾರ ಸುಬುದ್ಧಿಯ ನೀಡು |

ಪಂಚಕ್ಲೇಶ ಷಡ್ವಿಕಾರಗಳನು |

ನಾಶಗೊಳಿಸಿ ಬಲಬುದ್ಧಿಯ ನೀಡು ||

 

ಹನುಮಾನ್‌ ಚಾಲೀಸ

ಜಯ ಹನುಮಾನ ಜ್ಞಾನಗುಣಸಾಗರ

ಜಯ ಕಪೀಶ ಮೂರ್ಲೋಕ ಪ್ರಭಾಕರ ||1||

ರಾಮದೂತ ಅತುಲಿತ ಬಲಧಾಮ

ಅಂಜನಿಪುತ್ರ ಪವನಸುತ ನಾಮ ||2||

ಮಹಾವೀರ ವಿಕ್ರಮ ಬಜರಂಗೀ

ಕುಮತಿ ನಿವಾರಕ ಸುಮತಿಯ ಸಂಗೀ ||3||

ಕಾಂಚನ ರಂಜತ ಸುಂದರ ವೇಷ

ಕರ್ಣಕುಂಡಲ ಗುಂಗುರುಕೇಶ ||4||

ವಜ್ರಗದಾಧರ ಧ್ವಜಕರಶೋಭಿತ

ಸುಂದರಭುಜ ಉಪವೀತ ಅಲಂಕೃತ ||5||

ಶಂಕರಕುವರ ಕೇಸರೀ ನಂದನ

ತೇಜಪ್ರತಾಪ ಮಹಾ ಜಗವಂದನ ||6||

ವಿದ್ಯಾವಾನ ಗುಣೀ ಅತಿ ಚತುರ

ರಾಮಕಾರ್ಯವೆಸಗೆ ಬಲು ಕಾತುರ ||7||

ಪ್ರಭುಕಥೆ ಕೇಳುತ ಮೈಮರೆವಾತ

ಮನವಿ ರಾಮ ಸೌಮಿತ್ರಿ ಸೀತ ||8||

ಸೂಕ್ಷ್ಮರೂಪವನು ಸೀತೆಗೆ ತೋರಿದೆ

ವಿಕಟರೂಪದಲಿ ಲಂಕೆಯ ದಹಿಸಿದೆ ||9||

ಭೀಮರೂಪದಲಿ ಅಸುರರ ಕೊಂದೆ

ರಾಮಚಂದ್ರನ ಕಾರ್ಯವೆಸಗಿದೆ ||10||

ಮೂಲಿಕೆ ತಂದು ಸೌಮಿತ್ರಿಯ ಪೊರೆದೆ

ರಾಮನ ಪ್ರೀತಿಯ ಅಪ್ಪುಗೆ ಪಡೆದೆ ||11||

ಭರತನಂತೆ ನೀನು ಪ್ರಿಯಸಹೋದರ

ಎನ್ನುತ ಹೊಗಳಿದ ಶ್ರೀರಘುವೀರ ||12||

ಸಹಸ್ರಮುಖವು ನಿನ್ನ ಸ್ತುತಿಸಿದೆ

ಎನ್ನುತ ಶ್ರೀಪತಿ ಆಲಿಂಗಿಸಿದ ||13||

ಸನಕಬ್ರಹ್ಮಾದಿ ಮುನಿವರೇಣ್ಯರು

ನಾರದ ಶಾರದೆ ಆದಿಶೇಷರು ||14||

ಯಮಕುಬೇರ ದಿಕ್ಪಾಲಕರೆಲ್ಲರು

ಕವಿಕೋವಿದರು ನಿನ್ನ ಸ್ತುತಿಸಿಹರು ||15||

ಸುಗ್ರೀವಗೆ ನೀ ಸಹಾಯ ಮಾಡಿದೆ

ರಾಮಸಖ್ಯದಿ ರಾಜ್ಯ ಕೊಡಿಸಿದೆ ||16||

ನಿನ್ನುಪದೇಶ ವಿಭೀಷಣ ಒಪ್ಪಿದ

ಲಂಕೇಶನಾದುದ ಜಗವೇ ಬಲ್ಲದು ||17||

ಮಧುರ ಹಣ್ಣೆಂದು ತಿಳಿದು ರವಿಯನು

ಪಿಡಿಯೆ ಹಾರಿದೆ ಸಹಸ್ರಯೋಜನ ||18||

ಪ್ರಭುಮುದ್ರಿಕೆಯನು ಧರಿಸಿ ಬಾಯಲಿ

ಶರಧಿ ಲಂಘನವು ಸೋಜಿಗವಲ್ಲ ||19||

ಎಷ್ಟೇ ಕಠಿಣ ಕಾರ್ಯವೇ ಇರಲಿ

ಅಷ್ಟೇ ಸುಲಭ ನಿನ್ನ ಕೃಪೆಯಿಂದಲಿ ||20||

ರಾಮನ ದ್ವಾರಪಾಲಕ ನೀನು

ನಿನ್ನಾಜ್ಞೆ ವಿನಾ ಒಳ ಬರಲಾರೆನು ||21||

ಸುಖವೆಲ್ಲ ನಿನಗೆ ಶರಣಾಗಿ ಇರಲು

ಭಯವೇಕೆ ಎಮಗೆ ನೀ ರಕ್ಷಿಸಲು ||22||

ನಿನ್ನ ತೇಜ ನಿನ್ನಂದಲೆ ಶಮನ

ನಿನ್ನ ಘರ್ಜನೆಗೆ ತ್ರಿಲೋಕ ಕಂಪನ ||23||

ಮಹಾವೀರ ನಿನ್ನ ನಾಮವ ಕೇಳಲು

ಸನಿಹಕೆ ಬರದು ಭೂತಪ್ರೇತಗಳು ||24||

ಹನುಮ ನಿನ್ನನು ಸದಾ ಭಜಿಸಲು

ನಾಶವಾಗುವುವು ರೋಗರುಜಗಳು ||25||

ಹನುಮನ ಧ್ಯಾನಿಸೆ ತ್ರಿಕರಣದಿಂದ

ಕಷ್ಟಕಾರ್ಪಣ್ಯವು ದೂರಾಗುವುದು ||26||

ತಪಸ್ವೀರಾಮನ ಕಾರ್ಯಗಳೆಲ್ಲವ

ಯಶಸ್ಸಿನಿಂದ ಸಫಲಗೊಳಿಸಿದವ ||27||

ನೆರವೇರಿಸುತಲಿ ಭಕ್ತರಾಭೀಷ್ಟವ

ಅಮಿತ ಫಲವನು ನೀ ಕರುಣಿಸುವೆ ||28||

ನಾಲ್ಕು ಯುಗಗಳಲೂ ಪ್ರತಾಪ ನಿನ್ನದೆ

ನಿನ್ನಯ ಪ್ರಭೆಯ ಲೋಕ ಬೆಳಗಿದೆ ||27||

ಸಾಧುಸಂತರನು ಪೊರೆದು ಸಲಹಿದೆ

ಅಸುರರ ಕೊಂದು ರಾಮಪ್ರಿಯನಾದೆ ||20||

ಅಷ್ಟಸಿದ್ಧಿ ನವನಿಧಿಯ ಕೊಡುವವ

ಜಾನಕಿ ಮಾತೆಯಿಂ ವರವ ಪಡೆದವ ||31||

ನಿನ್ನಲಿ ಇರಲು ರಾಮರಸಾಯನ

ಸದಾ ರಘುಪತಿಯ ದಾಸನು ನೀನು ||32||

ನಿನ್ನ ಭಜಿಸಿದವ ರಾಮನ ಪಡೆವ

ಜನ್ಮಜನ್ಮದ ದುಃಖವ ಮರೆವ ||33||

ಜೀವಿಸಿರಲು ಹರಿಭಕ್ತನೆನಿಸುವ

ಅಂತ್ಯಸಮಯದಿ ರಾಮನ ಸೇರುವ ||34||

ಅನ್ಯದೇವರನು ಭಜಿಸದಿದ್ದರು

ಹನುಮನ ಸೇವಿಸೆ ಸುಖವ ಪಡೆವರು ||35||

ವೀರ ಹನುಮನ ಭಜಿಸಲು ಭಕ್ತರು

ವ್ಯಾಧಿ ಸಂಕಟದಿ ಮುಕ್ತಿ ಪಡೆವರು ||36||

ಜಯ ಜಯ ಜಯ ಹನುಮಾನ ಗೋಸಾಯಿ

ಗುರುವಿನಂದದಿ ಕೃಪೆ ಇದು ಸಾಯಿ ||37||

ನೂರು ಬಾರಿ ಇದ ಪಠಣ ಮಾಡಿದವ

ಬಂಧನ ಕಳಚುತ ನಿಜ ಸುಖ ಪಡೆವ ||38||

ಯಾರು ಪಠಿಸುವರೊ ಹನುಮ ಚಾಲೀಸ

ಸಿದ್ಧಿ ಪಡೆಯುವರು ಸಾಕ್ಷಿ ಗೌರೀಶ ||39||

ತುಲಸೀದಾಸ ಸದಾ ಹರಿಭಕ್ತ

ವಾಸಿಸು ಎನ್ನ ಹೃದಯದಿ ನಾಥ ||40||

ಪರಮ ಭಕ್ತ ಶ್ರೀ ತುಲಸೀದಾಸರ

ಚರಣಕೆ ವಂದಿಪೆ ನಿತ್ಯ ನಿರಂತರ ||41||

ಮಂಗಳ ಶ್ಲೋಕ

ಪವನ ತನಯ ಸಂಕಟಹರಣ ಮಂಗಳಮೂರುತಿ ರೂಪ

ರಾಮ ಸೌಮಿತ್ರಿ ಸೀತಾ ಸಹಿತ ನೆಲೆಸು ಹೃದಯದಿ ಸುರಭೂಪ ||42||

*****

ಹನುಮ ದಯೆಯಿಂ ಅತನ ಚರಿತೆಯ

ಕನ್ನಡ ಭಾಷೆಗೆ ಬರೆದಂತಾಯ್ತು ||43||

ಇಂತು ಚೈತನ್ಯವ ನೀಡಿದ ಪ್ರಭುವನು

ಚೈತನ್ಯದಾಸ ಭಕ್ತಿಲಿ ನಮಿಪನು ||44||

||ಓಂ ಶಾಂತಿಃ ಶಾಂತಿಃ ಶಾಂತಿಃ||

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

520, Asmi Industrial Complex, Near Ram Mandir Railway Station, Goregaon West, 400104, Mumbai, Maharashtra.

Download Our Mobile App

IndSamachar Android App IndSamachar IOS App
To Top
WhatsApp WhatsApp us