ಕನ್ನಡ

ಇತ್ತೀಚಿನ ಜಿಎಸ್‌ಟಿ ದರ ಕಡಿತಗಳೊಂದಿಗೆ ವಸ್ತುಗಳ ಸಂಪೂರ್ಣ ಪಟ್ಟಿ

ಇತ್ತೀಚಿನ ಜಿಎಸ್‌ಟಿ ದರ ಕಡಿತಗಳೊಂದಿಗೆ ವಸ್ತುಗಳ ಸಂಪೂರ್ಣ ಪಟ್ಟಿ

ಕೆಲ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ೨೮% ರಿಂದ ೧೮% ಕ್ಕೆ ಇಳಿಸಲಾಗಿದೆ.

ಹೊಸದೆಹಲಿಯ ವಿಜ್ಞಾನ ಭವನದಲ್ಲಿ ೩೧ನೆಯ ಜಿಎಸ್‌ಟಿ ಸಮಿತಿಯ ಸಭೆ ನಡೆಯಿತು. ಕೇಂದ್ರೀಯ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರು ಇದರ ಅಧ್ಯಕ್ಷತೆ ವಹಿಸಿದರು. ಎಲ್ಲಾ ರಾಜ್ಯಗಳ ಹಣಕಾಸು ಮಂತ್ರಿಗಳು ಈ ಸಭೆಯಲ್ಲಿ ಹಾಜರಿದ್ದರು.
“ನಾವು ಐಷಾರಾಮಿ ವಸ್ತುಗಳನ್ನು ಸೇರಿಸಿದರೆ, ೨೮% ಜಿಎಸ್‌ಟಿ ದರ ಅನ್ವಯಿಸುವ ವಸ್ತುಗಳ ಪಟ್ಟಿಯಲ್ಲಿ ೨೮ ವಸ್ತುಗಳಿರುತ್ತವೆ. ವಾಹನ ಬಿಡಿಭಾಗಗಳ ವರ್ಗಕ್ಕೆ ಸೇರಿರುವಲ್ಲಿ ೧೩ ವಸ್ತುಗಳಿವೆ, ಹಾಗೂ ಒಂದು ಸಿಮೆಂಟ್. ಸಿಮೆಂಟ್‌ನಿಂದ ೧೩,೦೦೦ ಕೋಟಿ ಹಾಗು ವಾಹನ ಬಿಡಿಭಾಗಗಳಿಂದ ೨೦,೦೦೦ ಕೋಟಿ ರೂಪಾಯಿಗಳ ಆದಾಯ ಲಭಿಸುತ್ತಿದೆ. ಇವುಗಳಿಗೆ ಅನ್ವಯಿಸುವ ಜಿಎಸ್‌ಟಿ ದರವನ್ನು ೨೮% ಇಂದ ೧೮% ಕ್ಕೆ ಇಳಿಸಿದರೆ ೩೩,೦೦೦ ಕೋಟಿ ರೂಪಾಯಿಗಳ ವ್ಯತ್ಯಾಸವಾಗಬಹುದು” ಎಂದು ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ತಿಳಿಸಿದರು.
೧೦೦ ರೂಪಾಯಿ ಮತ್ತು ಹೆಚ್ಚಿನ ಮೌಲ್ಯದ ಚಲನಚಿತ್ರ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ದರವನ್ನು ೨೮% ಇಂದ ೧೮% ಕ್ಕೆ, ಹಾಗೂ ೧೦೦ ರೂಪಾಯಿಗಳ ವರೆಗಿನ ಟಿಕೆಟ್‌ಗಳ ಜಿಎಸ್‌ಟಿ ದರವನ್ನು ೧೮% ಇಂದ ೧೨% ಕ್ಕೆ ಇಳಿಸಲಾಗಿದೆ.
* ಸರಕು ಸಾಗಣೆ ವಾಹನಗಳ ಮೂರನೆಯ ಪಕ್ಷದ ವಿಮೆಯ ಮೇಲಿನ ಜಿಎಸ್‌ಟಿ ದರವನ್ನು ೧೮% ಇಂದ ೧೨% ಕ್ಕೆ ಇಳಿಸಲಾಗಿದೆ.
* ಪ್ರಧಾನ್ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ಮೂಲಭೂತ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಬ್ಯಾಂಕ್‌ಗಳು ಒದಗಿಸುವ ಸೇವೆಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಲಾಗುವುದು.
* ದ್ವಿಪಕ್ಷೀಯ ವ್ಯವಸ್ಥೆಗಳಡಿ ತೀರ್ಥಯಾತ್ರೆಗಳಿಗಾಗಿ ಭಾರತ ಸರ್ಕಾರವು ಕಲ್ಪಿಸುವ ಅನಿಗಧಿತ / ಚಾರ್ಟರ್ಡ್ ವಿಮಾನ ಪ್ರಯಾಣಕ್ಕೆ ಇದೇ ತರಹದ ವಿಮಾನಗಳ ಇಕಾನಮಿ ದರ್ಜೆಗೆ ಅನ್ವಯಿಸುವ ೫% ಜಿಎಸ್‌ಟಿ ಇದಕ್ಕೂ ಅನ್ವಯಿಸುತ್ತದೆ.
ಜೈವಿಕ ಅನಿಲ ಸ್ಥಾವರಗಳು, ಸೌರಶಕ್ತಿ ಆಧಾರಿತ ಸಾಧನಗಳು ಮತ್ತು ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಗಳಿಗೆ ೫% ಜಿಎಸ್‌ಟಿ ದರ ಅನ್ವಯಿಸುತ್ತದೆ. ಈ ತಯಾರಿಕಾ ಘಟಕಗಳಲ್ಲಿ ಬಳಸಲಾಗುವ ಇತರ ಸರಕುಗಳು ಅಥವಾ ಸೇವೆಗಳಿಗೆ ೫% ಜಿಎಸ್‌ಟಿ ಅನ್ವಯವಾಗುತ್ತದೆ.
ಸೌರ ಶಕ್ತಿ ಸ್ಥಾವರಗಳ ನಿರ್ಮಾಣದಲ್ಲಿ ಸರಕುಗಳು ಮತ್ತು ಸೇವೆಗಳ ಸಂಬಂಧಿತ ಇತ್ತೀಚಿನ ವಿವಾದಗಳನ್ನು ಪರಿಹರಿಸಲು, ಜಿಎಸ್‌ಟಿ ಕೌನ್ಸಿಲ್ “ಅಂತಹ ಎಲ್ಲಾ ಸಂದರ್ಭಗಳಲ್ಲಿ, ಒಟ್ಟು ಮೌಲ್ಯದ ೭೦% ಸರಕುಗಳ ಪೂರೈಕೆ ಮೌಲ್ಯವನ್ನು ೫% ಅಷ್ಟು ಅನ್ವಯಿಸುತ್ತದೆ” ಮತ್ತು ಅಂತಹ ಇಪಿಸಿ ಕರಾರಿನ ಒಟ್ಟಾರೆ ಮೌಲ್ಯದ ಉಳಿದ ಭಾಗವು (೩೦%) ಪ್ರಮಾಣಿತ ಜಿಎಸ್‌ಟಿ ದರವನ್ನು ಆಕರ್ಷಿಸುವ ತೆರಿಗೆ ಸೇವೆಗಳ ಪೂರೈಕೆಯ ಮೌಲ್ಯ ಎಂದು ಪರಿಗಣಿಸಲ್ಪಡುತ್ತದೆ.”
ಹೊಸ ಜಿಎಸ್‌ಟಿ ದರಗಳು ಜನವರಿ ೧ ರಿಂದ ಜಾರಿಗೆ ಬರಲಿವೆ. ಮುಂಬರುವ ಜನವರಿ ತಿಂಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಗೃಹ ಸ್ವತ್ತುಗಳ ಮೇಲಿನ ತೆರಿಗೆಯನ್ನು ಜಿಎಸ್‌ಟಿ ಸಮಿತಿ ಚರ್ಚಿಸುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು. ಪ್ರಕೃತಿ ವಿಕೋಪ ಸೆಸ್ ಬಗೆಗಿನ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು. ಮಂತ್ರಿಗಳ ಗುಂಪು (ಜಿಒಎಮ್‌) ವರದಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ನಿರೀಕ್ಷೆಗಿಂತಲೂ ಕಡಿಮೆ ಆದಾಯದ ಹಿನ್ನೆಲೆಯಲ್ಲಿ ಜಿಎಸ್‌ಟಿ ಸಮಿತಿಯ ಸಭೆ ನಡಸಲಾಗುತ್ತಿದೆ. ಜಿಎಸ್‌ಟಿ ಸಂಗ್ರಹಣೆ ಹಾಗೂ ತೆರಿಗೆ ವಂಚನೆ ತಡೆಗಟ್ಟುವ ರೀತಿಗಳನ್ನು ಈ ಸಮಿತಿ ಚರ್ಚಿಸುವುದು. ಪ್ರಸಕ್ತ ಸನ್ನಿವೇಶದಲ್ಲಿ, ಸಂಗ್ರಹಣೆಯಲ್ಲಿ ಕೊರತೆಯಿರುವಾಗ ದರ ಕಡಿತ ಘೋಷಿಸುವುದು ದೊಡ್ಡ ಸಮಸ್ಯೆಯಾಗಿದೆ.

24 Comments

24 Comments

  1. Pingback: mycountertops.info

  2. Pingback: Eddie Frenay

  3. Pingback: w88

  4. Pingback: Pinball Machines for Sale

  5. Pingback: porn movie

  6. Pingback: Robotic testing

  7. Pingback: Intelligent Automation Solutions

  8. Pingback: blog

  9. Pingback: Yamaha S250X manuals

  10. Pingback: service virtualization

  11. Pingback: replica Rolex Daytona Gold

  12. Pingback: golden teacher dosage

  13. Pingback: valid cvv shop

  14. Pingback: หุ้นnova87

  15. Pingback: replica rolex

  16. Pingback: humor-blog

  17. Pingback: sbo

  18. Pingback: rolex sea dweller replica for sale

  19. Pingback: maxbet

  20. Pingback: nova88

  21. Pingback: sbo

  22. Pingback: their explanation

  23. Pingback: 무료웹툰

  24. Pingback: Roblox

Leave a Reply

Your email address will not be published.

two × one =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us