ಯುದ್ಧ ವಿಮಾನಗಳನ್ನು ದುರಸ್ತಿಗೊಳಿಸುವಲ್ಲಿ ಭಾರತದ ಸಾರ್ವಜನಿಕ ಕ್ಷೇತ್ರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಕ್ಷಮತೆಯ ಬಗ್ಗೆ ಕೇಂದ್ರೀಯ ವಿದೇಶಾಂಗ ಖಾತೆ ರಾಜ್ಯ ಮಂತ್ರಿ ಹಾಗೂ ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ ವಿ ಕೆ ಸಿಂಗ್ ಪ್ರಶ್ನೆಗಳನ್ನು ಎತ್ತಿದ್ದಾರೆ.
ದುರಸ್ತಿಗೊಂಡಿದ್ದ ವಿಮಾನದ ಭಾಗಗಳು ಪಥದ (ರನ್‌ವೇ) ಮೇಲೆ ಬಿದ್ದಿದ್ದವು ಎಂದು ಅವರು ವಿವರಿಸಿದರು. ಫೆಬ್ರುವರಿ ೧ರಂದು ಬೆಂಗಳೂರಿನಲ್ಲಿ ಮಿರೇಜ್ ೨೦೦೦ ಯುದ್ಧವಿಮಾನವು ಭೂಮಿಗೆ ಅಪ್ಪಳಿಸಿ ಇಬ್ಬರು ಪೈಲಟ್‌ಗಳು ಸತ್ತುಹೋದ ದುರ್ಘಟನೆಯ ಬಗ್ಗೆ ಅವರು ಮಾತನಾಡುತ್ತಿದ್ದರು.
ರಫೇಲ್ ಯುದ್ಧವಿಮಾನದ ಒಪ್ಪಂದಕ್ಕಾಗಿ ಫ್ರೆಂಚ್ ಉದ್ದಿಮೆ ಡಸಾಲ್ಟ್ ಏವಿಯೇಷನ್ ಹೆಚ್‌ಎಎಲ್ ಬದಲಿ ಅನಿಲ್ ಅಂಬಾನಿಯವರ ರಿಲಾಯನ್ಸ್ ಡಿಫೆನ್ಸ್ ಉದ್ದಿಮೆಯನ್ನು ಭಾರತದ ಆಫ್ಷೋರ್ ಪಾಲುದಾರರನ್ನಾಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಜನರಲ್ ವಿ ಕೆ ಸಿಂಗ್‌ರವರ ಮಾತುಗಳು ಗಮನಾರ್ಹವಾಗಿವೆ.
“ನೀವು ಎಚ್‌ಎಎಲ್‌ಅನ್ನು ನೋಡಿದಿರ ಅಲ್ವಾ? ಇಬ್ಬರು ಪೈಲಟ್‌ಗಳು ಸತ್ತರು. ಈ ಯೋಜನೆ ಈಗಾಗಲೇ ಮೂರುವರೆ ವರ್ಷ ವಿಳಂಬವಾಗಿ ನಡೆಯುತ್ತಿದೆ. ಕೇವಲ ಎಂಟು ವಿಮಾನಗಳನ್ನು ದುರಸ್ತಿಗೊಳಿಸಲಾಗಿದೆ. ಈ ವಿಮಾನಗಳ ಭಾಗಗಳು ಪಥದ ಮೇಲೆ ಬೀಳುತ್ತವೆ. ಕ್ಷಮತೆ ಎಂದರೆ ಇದೇನಾ? ಆಮೇಲೆ ಎಚ್ಎಎಲ್ ಪಾಲಿಗೆ ಯಾವುದೇ ಕೆಲಸವಿಲ್ಲ ಅಂತಾರೆ” ಎಂದು ಜನರಲ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಫ್ರಾನ್ಸ್‌ನೊಂದಿಗಿನ ಒಪ್ಪಂದದಡಿ ಭಾರತೀಯ ವಾಯು ಸೇನೆಯ ಮಿರೇಜ್ ೨೦೦೦ ಯುದ್ಧವಿಮಾನಗಳ ದುರಸ್ತಿ ಕಾರ್ಯವನ್ನು ಆರಂಭಿಸಿದೆ. ೪೯ ವಿಮಾನಗಳ ಪೈಕಿ ಡಸಾಲ್ಟ್ ಎರಡು ವಿಮಾನಗಳನ್ನು ದುರಸ್ತಿ ಮಾಡಿ, ಉಳಿದೆಲ್ಲವನ್ನು ಎಚ್‌ಎಎಲ್ ದುರಸ್ತಿಗೊಳಿಸಬೇಕಿದೆ.
