ಕನ್ನಡ

ಮತದಾರರ ಪಟ್ಟಿ ಪರಿಶೀಲಿಸಲಿರುವ ಚುನಾವಣಾ ಆಯೋಗ

ಬರುವ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿವೆ. ಇದಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಶೀಲಿಸಿ, ಪರಿಷ್ಕರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಚುನಾವಣಾ ಆಯೋಗವು ಮತದಾರರ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿವರದಲ್ಲಿ ಅಗತ್ಯವಿರುವ ಬದಲಾವಣೆ ಅಥವಾ ಪರಿಷ್ಕರಣೆ ಮಾಡಲಿದೆ.

ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿ, ಮತದಾರರಿಗಾಗಿ ೧೯೫೦ ಸಂಖ್ಯೆ ಸಹಾಯವಾಣಿ  ಸ್ಥಾಪಿಸಲಿದೆ.

ಹೊಸದೆಹಲಿಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಕೆಯ ಬಗ್ಗೆ ಎರಡು ದಿನಗಳ ತರಬೇತಿಯಲ್ಲಿ ಈ ಮತದಾರ ಪರಿಷ್ಕರಣೆ ಮತ್ತು ಮಾಹಿತಿ ಯೋಜನೆ ಚಾಲಿಸಿತು.

ತಂತ್ರಜ್ಞಾನವು ಬಹಳಷ್ಟು ಮಹತ್ವವಾದ ಪಾತ್ರ ನಿರ್ವಹಿಸುತ್ತದೆ ಎಂದು ಮುಖ್ಯಚುನಾವಣಾ ಆಯುಕ್ತ ಸುನಿಲ್ ಅರೋರಾ ತಿಳಿಸಿದರು. ವಿಕಲಚೇತನರಿಗಾಗಿ ಚುನಾವಣಾ ಆಯೋಗವು “ಪಿಡಬ್ಲೂಡಿ” ಆಪ್‌ಅನ್ನು ಚಾಲ್ತಿಗೊಳಿಸಿತು.

Click to comment

Leave a Reply

Your e-mail address will not be published. Required fields are marked *

sixteen + five =

To Top
WhatsApp WhatsApp us