ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನ ಹಿಂದೆಯೇ, ಪಾಕ್-ಪ್ರಚೋದಿತ ಸೈಬರ್ ಅಪಪ್ರಚಾರ (propaganda) ಕೂಡ ಅಂತರಜಾಲದಲ್ಲಿ ವಿಪರೀತವಾಗಿ ಹಎಚ್ಚಿದೆ.
ಈ ಹಿನ್ನೆಲೆಯಲ್ಲಿ ಯುದ್ಧದ ಸ್ಥಿತಿಯಲ್ಲಿ ಉತ್ತಮ ಪ್ರಜೆಯಾಗಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬ ಬಗ್ಗೆ ನಮ್ಮ ದೇಶದ ರಕ್ಷಣಾ ಇಲಾಖೆಯು ನಿರ್ದೇಶನವೊಂದನ್ನು ಬಿಡುಗಡೆ ಮಾಡಿದೆ.
ಏನು ಮಾಡಬಾರದು?
- ಯಾವುದೇ ಸೈನಿಕರ ವೀಡಿಯೊ, ಭಾವಚಿತ್ರ, ಭದ್ರತಾ ಪಡೆ ಅಥವಾ ಸಂಸ್ಥೆಗಳು, ಯುದ್ಧೋಪಕರಣಗಳ ಸಾಗಣೆಗೆ ಸಂಬಂಧಿಸಿದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
- ಯಾವುದೇ ವಿಚಾರವನನ್ನು ಪ್ರಮಾಣೀಕರಿಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಮರುಹಂಚಬೇಡಿ.
ಏನು ಮಾಡಬೇಕು?
- ಭರತ-ವಿರೋಧಿ ಹಾಗೂ ಮಾರಕವಾದ ವೀಡಿಯೊ, ಚಿತ್ರ ಅಥವಾ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದರೆ ಪೊಲೀಸರಿಗೆ ದೂರು ನೀಡಿ.
- ನಮ್ಮ ಸೇನೆಯ ತಂತ್ರಗಳೆಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಪ್ರಯತ್ನ ಬೇಡ. ಬದಲಿಗೆ, ನಮ್ಮ ದೇನೆ ನಿಮ್ಮನ್ನು ಸುರಕ್ಷಿತವಾಗಿಡಲಿದೆ ಎಂಬ ಬಗ್ಗೆ ವಿಶ್ವಾಸವಿಟ್ಟುಕೊಳ್ಳಿ.
