ನಿಮ್ಮ ಮಕ್ಕಳಿಗೆ ಶಾಲೆಗೆ ಹುಮ್ಮಸ್ಸು ತೋರಿಸುತ್ತಿಲ್ಲವೇ? ಅವರಿಗೆ ಗಾಬರಿಯ ಸಮಸ್ಯೆಯಿರಬೇಕು. ಹೀಗೆಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಎಕ್ಸೆಟರ್ ವಿದ್ಯಾಲಯ ವೈದ್ಯಕೀಯ ಶಾಲೆ (University of Exeter Medical School) ನಡೆಸಿದ ಸಮೀಕ್ಷೆಯು ವ್ಯವಸ್ಥಿತ ಪರಿಶೀಲನೆ ನಡೆಸಿ ಈ ಕ್ಷೇತ್ರದಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನೂ ವಿಶ್ಲೇಷಿಸಿದೆ.
Child and Adolescent Mental Health ಪತ್ರಿಕೆಯಲ್ಲಿ ಪ್ರಕಟಿತವಾದ ಈ ಅಧ್ಯಯನವು, ಗಾಬರಿಗೊಳ್ಳುವಿಕೆ ಮತ್ತು ಶಾಲೆಗೆ ಗೈರು ಹಾಜರಾತಿಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.
ಅಧ್ಯಯನ ತಂಡವು ಶಾಲಾ ಹಾಜರಾತಿಯನ್ನು ಈ ತರಹ ವಿಂಗಡಿಸಿತು:
- ಸಂಪೂರ್ಣ ಗೈರು ಹಾಜರಾತಿ
- ವೈದ್ಯಕೀಯ ಗೈರು ಹಾಜರಾತಿ
- ತಿಳಿಸದೇ ಇರುವ ಗೈರು ಹಾಜರಾತಿ
- ಶಾಲೆಗೆ ಹೋಗಲು ನಿರಾಕರಣೆ (ಭಾವುಕತೆಯ ಕಾರಣ, ಸಂಕಟ ಇತ್ಯಾದಿ)
- ಅಧ್ಯಯನ ಪ್ರಾಥಮಿಕ ವರದಿಯ ಪ್ರಕಾರ ಶಾಲೆಯಿಂದ ಗೈರು ಹಾಜರಾತಿಗೂ ಸಂಕಟ, ತಳಮಳಕ್ಕು ಸಂಬಂಧವಿದೆಯೆಂಬುದು ರುಜುವಾತಾಗಿದೆ.
ಗಾಬರಿಯಿಂದಾಗಿ ಬಾಲ್ಯ ವಯಸ್ಕರ ಶಾಲಾ ಶಿಕ್ಷಣ ಕಾಲದಲ್ಲಷ್ಟೇ ಅಲ್ಲ, ಜೀವನವುದ್ದಕ್ಕೂ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಲ್ಲಿಯೂ ಸಹ ಸಮಸ್ಯೆಗಳು ಎದುರಾಗಬಹುದು. ಈ ಎಚ್ಚರಿಕೆಯ ಸಂಕೇತಗಳನ್ನು ಪರಿಗಣಿಸಿ ನಮ್ಮ ಬಾಲಕ-ಬಾಲಿಕೆಯರಿಗೆ ಸೂಕ್ತ ಮತ್ತು ಪರಿಣಾಮಕಾರಿ ಬೆಂಬಲ ನೀಡಬೇಕು. ನಮ್ಮ ಸಂಶೋಧನೆಯು ಅತ್ಯುತ್ತಮ ಗುಣಮಟ್ಟದ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸಿದೆ. ಈ ಕೊರತೆಯನ್ನು ಅಗತ್ಯವಾಗಿ ನೀಗಿಸಬೇಕಿದೆ” ಎಂದು ಈ ಅಧ್ಯಯನದ ಪ್ರಮುಖ ಲೇಖಕಿ ಕೇಟಿ ಫಿನ್ನಿಂಗ್ ಹೇಳಿದ್ದಾರೆ.
“ಶಾಲೆಯಿಂದ ಗೈರಾಗಲು ಗಾಬರಿಗೊಳ್ಳುವಿಕೆಯು ಪ್ರಮುಖ ಕಾರಣ. ಜೊತೆಗೆ ತಲೆನೋವು ಮತ್ತು ಹೊಟ್ಟೆಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬುದನ್ನು ಶಾಲಾ ಸಿಬ್ಬಂದಿ ಮತ್ತು ಆರೋಗ್ಯ ತಜ್ಞರು ಗಮನಿಸಬೇಕು” ಎಂದು ಸಹ-ಲೇಖಕಿ ಟಾಮ್ಸಿನ್ ಫೋರ್ಡ್ ಹೇಳಿದ್ದಾರೆ.
ಗಾಬರಿಗೊಳ್ಳುವಿಕೆಯ ಸಮಸ್ಯೆಗೆ ಚಿಕಿತ್ಸೆ ನೀಡಲು ಸಾಧ್ಯ. ಫಲಕಾರಿಯಾಗುವಂತಹ ಚಿಕಿತ್ಸೆಗಳೂ ಉಂಟು. ಆರಂಭಿಕ ಹಂತದಲ್ಲಿ ಗಾಬರಿಗೊಳ್ಳುವಿಕೆಯ ಕಾರಣ ಆಗಬೇಕಾದದ್ದನ್ನು ತಪ್ಪಿಸಿಕೊಳ್ಳಲು ಸಾಧ್ಯವಾದರೂ, ಮುಂದೆ ಎದುರಾಗುವ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಆ ವ್ಯಕ್ತಿಗೆ ಬಹಳ ಕಷ್ಟವಾಗುತ್ತದೆ ಎಂದು ಈ ಸಂಶೋಧನೆಗಾರ್ತಿಯರು ಹೇಳಿದ್ದಾರೆ.
