ಇದು ಭಾರತೀಯ ಸೇನೆಯ ಕರ್ನಲ್ ಒಬ್ಬರು (ಹೆಸರು ಬಹಿರಂಗಪಡಿಸಿಲ್ಲ) ಕಳಿಸಿದ ಸಂದೇಶ; ಕನ್ನಡಕ್ಕೆ ತರ್ಜುಮೆಯಾಗಿ ವಾಟ್ಸಾಪ್ ಮೂಲಕ ಇಲ್ಲಿಗೆ ಬಂದಿದೆ.
ಈ ಕರ್ನಲ್ ಹೇಳುವ ಪ್ರಕಾರ, ಈ ವರ್ಷದಿಂದ ಯಾರೂ ಕೂಡ ಕಾಶ್ಮೀರ ಪ್ರವಾಸ ಮಾಡಬೇಡಿ, ಅಮರನಾಥ ಯಾತ್ರೆ ಮಾಡಲೇಬೇಡಿ.
“ನಾನೊಬ್ಬ ಫೌಜೀ(ಸೈನಿಕ) ಆಗಿದ್ದು, ತಮ್ಮೆಲ್ಲರಲ್ಲಿ ಕಳಕಳಿಯ ವಿನಂತಿಪೂರ್ವಕವಾಗಿ ಅರಿಕೆ ಮಾಡುವುದೇನೆಂದರೆ, ನಾವೆಲ್ಲರೂ ಮೂರ್ನಾಲ್ಕು ವರ್ಷಗಳ ಕಾಲ ಅಮರನಾಥ ಯಾತ್ರೆ ಮಾಡುವುದನ್ನು ನಿಲ್ಲಿಸಿದರೆ, ಸಾಯುತ್ತೇವೆಯೇ? ನಮ್ಮ ಈ ಯಾತ್ರೆಯೇ ಕಾಶ್ಮೀರಿಗಳಿಗೆ ಜೀವನ ನಿರ್ವಹಣೆಯ ಆದಾಯಮೂಲವಾಗಿದೆ. ಇದೇ ಕಾಶ್ಮೀರಿಗಳೇ ನಮ್ಮ ಸುರಕ್ಷಾಬಲಗಳಾದ ಬಿಎಸ್‌ಎಫ್, ಎಸ್‌ಆರ್‌ಪಿಎಫ್, ಸಿಆರ್‌ಪಿಎಫ್, ಐಪಿಎಸ್, ಐಎಎಸ್ ಸಿಬ್ಬಂದಿಗಳಮೇಲೆ ಆಕ್ರಮಣ ಮಾಡುತ್ತಾರೆ, ಕಲ್ಲು ಎಸೆಯುತ್ತಾರೆ, ಭಾರತೀಯ ಸೇನೆಯ ವಿರೋಧ ಮಾಡುತ್ತಾರೆ! ಕಾಶ್ಮೀರದಲ್ಲಿ ಧರ್ಮ ಶಾಲೆಗಳನ್ನು ನಿರ್ಮಾಣ ಮಾಡಲು ಬಿಡುತ್ತಿಲ್ಲ.
ಕೇವಲ ಎರಡೇ ಎರಡು ವರ್ಷಗಳ ಕಾಲ ಕಾಶ್ಮೀರಕ್ಕೆ ಆರ್ಥಿಕ ಬಹಿಷ್ಕಾರ ಹಾಕಿನೋಡಿ. ಆಜಾದಿಗಳೆಂದು ಹೇಳಿಕೊಳ್ಳುವ ಎಲ್ಲಾ ಯಾಸೀನ್ ಮಲ್ಲಿಕ್‌ಗಳು ಮತ್ತು ಗಿಲಾನಿಗಳ ಡೇರೆಗಳು ತೂತು ಬೀಳುತ್ತವೆ. ಆಮೇಲೆ ನೋಡಿ, ಪಾಕಿಸ್ತಾನ ಮತ್ತು ಚೀನಾಗಳು ಎಷ್ಟು ದಿನ, ಎಷ್ಟು ಜನ ಕಾಶ್ಮೀರಿಗಳಿಗೆ ಧನಸಹಾಯ ಮಾಡುತ್ತವೆ ಅಂತ.
ಕಾಶ್ಮೀರ ಪ್ರವಾಸ ಕೈಗೊಳ್ಳಬೇಡಿ, ಬದಲಿಗೆ ಶಿಮ್ಲಾಗೆ ಹೋಗಿ, ದಾರ್ಜೀಲಿಂಗ್‌ಗೆ ಹೋಗಿ, ಕೇರಳಕ್ಕೆ ಹೋಗಿ, ಕನ್ಯಾಕುಮಾರಿಗೆ ಹೋಗಿ, ಊಟಿಗೆ ಹೋಗಿ, ಓಡಿಶಾಕ್ಕೆ ಹೋಗಿ, ಉತ್ತರಾಖಂಡ್, ಗುಜರಾತ್, ಎಲ್ಲಿ ಬೇಕಾದರೂ ಹೋಗಿ. ಆದರೆ ಕಾಶ್ಮೀರಕ್ಕೆ ಹೋಗುವುದೆಂದರೆ ಮಾತ್ರ, ಆತಂಕವಾದಿಗಳ ಕೈ ಬಲಪಡಿಸುವ ಕೆಲಸ ಮಾಡಿದಂತೆ.
ಯಾರೂ ಕೂಡ ಯಾವುದೇ ಕಾಶ್ಮೀರ ಎಂಪೋರಿಯಮ್ ದಿಂದ ಏನನ್ನೂ ಖರೀದಿಸಕೂಡದು.
ರಾಷ್ಟ ಹಿತಕ್ಕಾಗಿ, ಕೇವಲ ಎರಡು ವರ್ಷ ಇದನ್ನು ಮಾಡಿನೋಡಿ!! ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ.
ಜೈ ಹಿಂದ್.”
