ಗ್ರಾಹಕ ರಕ್ಷಣಾ ಮಸೂದೆ ೨೦೧೮ ರ ಬಗ್ಗೆ ಬಹಳ ಮುಖ್ಯವಾದ ವಿಚಾರಗಳು
ಲೋಕಸಭೆಯು ಗ್ರಾಹಕ ರಕ್ಷಣಾ ಮಸೂದೆಯನ್ನು ೨೦೧೮ರ ಡಿಸೆಂಬರ್ ೨೦ ರಂದು ಅಂಗೀಕರಿಸಿತು. ಇದು ೧೯೮೬ರಲ್ಲಿ ಜಾರಿಗೊಳಿಸಲಾದ ಗ್ರಾಹಕ ರಕ್ಷಣಾ ಕಾಯಿದೆಯನ್ನು ಬದಲಾಯಿಸಿತು. ಈ ಮಸೂದೆಯು ಗ್ರಾಹಕ ಹಕ್ಕುಗಳನ್ನು ಜಾರಿಗೊಳಿಸಲಿದೆ ಹಾಗೂ ಸರಕು ಅಥವಾ ಸೇವೆಗಳಲ್ಲಿ ಲೋಪ-ದೋಷ ಸಂಬಂಧಿತ ದೂರುಗಳನ್ನು ಇತ್ಯರ್ಥಗೊಳಿಸಲು ವ್ಯವಸ್ಥೆಯನ್ನು ಕಲ್ಪಿಸಲಿದೆ.
ಈ ವರ್ಷ ಗ್ರಾಹಕ ರಕ್ಷಣಾ ಮಸೂದೆಯಲ್ಲಿ ಅಂಗೀಕರಿಸಲಾಗಿದ್ದು, ಮಾಧ್ಯಮದವರು ತಿಳಿಸಲು ವಿಫಲವಾದ ವಿಚಾರಗಳು ಇಂತಿವೆ:
1. ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಆಹಾರ ಕಲಬೆರಕೆಗಾಗಿ ಜೈಲು ಶಿಕ್ಷೆ, ಜೊತೆಗೆ ಭಾರಿ ಮೊತ್ತದ ದಂಡ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
2. ತಪ್ಪುದಾರಿಗೆಳೆಯುವಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಖ್ಯಾತನಾಮರೂ ಸಹ ವಿಧಿಸಲಾಗುವ ಹಣಕಾಸಿನ ದಂಡ ತೆರಬೇಕಾಗುವುದು.
3. ಈ ಮಸೂದೆಯಿಂದ ಗ್ರಾಹಕರ ಕುಂದುಕೊರತೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬಹುದಾಗಿದೆ.
4. ಇದು ನೇರ ಮಾರಾಟದ ವ್ಯಾಖ್ಯಾನವನ್ನು ಹೊಂದಿರುವ ಮೊದಲ ಶಾಸನವಾಗಿರುತ್ತದೆ. ನೇರ ಮಾರಾಟ ಎಂದರೆ ಮಾರಾಟಗಾರರ ಜಾಲದ ಮೂಲಕ ಸರಕುಗಳ ಅಥವಾ ಸೇವೆಗಳ ಮಾರಾಟ ಹಾಗೂ ಹಂಚಿಕೆ. ಖಾಯಂ ಮಾರಾಟ ಸ್ಥಳದ ಹೊರತುಪಡಿಸಿ ಈ ಜಾಲವನ್ನು ಪರಿಗಣಿಸಲಾಗಿದೆ.
5. ಕೇಂದ್ರ ಸರ್ಕಾರವು ಇತರ ಪ್ರಮುಖ ಕ್ರಮಗಳ ಇ-ವಾಣಿಜ್ಯ ಕ್ಷೇತ್ರದ ಹಾಗೂ ನೇರ ಮಾರಾಟದ ಮೇಲೆ ಮೇಲೆ ನಿಗಾ ವಹಿಸಲು ಈ ಮಸೂದೆಯು ಅನುಮತಿಸುತ್ತದೆ.
6. ಸರಕು ಅಥವಾ ಸೇವಾ ಹೊಣೆಗಾರಿಕೆ ಕ್ರಮವನ್ನು ಈ ಮಸೂದೆ ಪರಿಚಯಿಸುತ್ತದೆ. ಇದರನ್ವಯ, ಗ್ರಾಹಕರು ತಾವು ಕೊಂಡ ಸರಕು ಅಥವಾ ಪಡೆದುಕೊಂಡ ಸೇವೆಗಳಿಂದ ಏನಾದರೂ ತೊಂದರೆಯಾದಲ್ಲಿ, ಸರಕು ಅಥವಾ ಸೇವೆಯಲ್ಲಿ ಇಂತಹ ಲೋಪ ದೋಷಗಳಿಗೆ ತಯಾರಕರು ಮತ್ತು ಮಾರಾಟಗಾರರು ನೇರವಾಗಿ ಹೊಣೆಯಾಗುತ್ತಾರೆ.
ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು, ಪರಿಣಾಮಕಾರಿ ಆಡಳಿತವನ್ನು ಒದಗಿಸುವುದು ಹಾಗೂ ಗ್ರಾಹಕರ ವಿವಾದಗಳನ್ನು ಸಕಾಲಿಕವಾಗಿ ಇತ್ಯರ್ಥಗೊಳಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಈ ಮಸೂದೆಯು ಅಂಗೀಕಾರಕ್ಕಾಗಿ ರಾಜ್ಯಸಭೆಗೆ ತೆರಳಲಿದೆ.
