ಆನಂದ್ ಸಿಂಗ್ ವಿಚಾರದಲ್ಲಿ ಸತ್ಯ ಮುಚ್ಚಿಡುವಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಸೇರಿದ್ದ ಕಾಂಗ್ರೆಸ್ ಶಾಸಕರು ಶನಿವಾರ ತಡರಾತ್ರಿ ಪಾರ್ಟಿ ಮಾಡುತ್ತಿದ್ದರು. ಮದ್ಯದ ನಶೆ ಏರಿದಾಗ ಶಾಸಕರಾದ ಆನಂದ್ ಸಿಂಗ್, ಗಣೇಶ್, ಭೀಮಾ ನಾಯುಕ್ ನಡುವೆ ವಾಗ್ಜಗಳವಾಯಿತು. ಆಗ ಗಣೇಶ್ ಆನಂದ್‌ರಿಗೆ ಬಾಟಲಿಯಲ್ಲಿ ಹೊಡೆದರು.
ಆನಂದ್ ಸಿಂಗ್‌ರ ತಲೆ, ಭುಜ ಮತ್ತು ಕಿಬ್ಬೊಟ್ಟೆಗೆ ಏಟು ಬಿದ್ದು, ಅವರನ್ನು ಶೇಷಾದ್ರಿಪುರದ ಅಪೊಲೊ ಆಸ್ಪತ್ರೆಗೆ ಸೇರಿಸಲಾಯಿತು. ಸದ್ಯಕ್ಕೆ ಆನಂದ್‌ರ ಬಲಗಣ್ನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸ್ವಲ್ಪ ಗುಣಮುಖರಾಗುವ ತನಕ ಹೇಳಿಕೆ ಕೊಡುವ ಸ್ಥಿತಿಯಲ್ಲಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಪೊಲೀಸರಿಗೆ ಮನನವೊಲಿಸಿ ಹೇಳಿದರು.
ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ವಿಷಯವನ್ನು ಮರೆಮಾಚಿ ಬೇರೇನೋ ಕಾರಣ ನೀಡಲು ಇನ್ನಿಲ್ಲದ ಕಸರತ್ತು ಮಾಡಿದರು. ಆದರೂ ಸತ್ಯವನ್ನು ಮುಚ್ಚುವಲ್ಲಿ ಅವರು ವಿಫಲರಾದರು.
