ಸಿನೆಪೊಲಿಸ್ ಕೊಲ್ಲಿ ವಲಯದಲ್ಲಿನ ತನ್ನ ಮೊಟ್ಟಮೊದಲ ಥಿಯೇಟರ್ ಬಹರೇನ್‌ನ ಸಾರ್‌ನಲ್ಲಿ ಆರಂಭಿಸುತ್ತದೆ. ಸಿನೆಪೊಲಿಸ್ ಪ್ರಪಂಚದಲ್ಲಿ ೪ನೆಯ ಅತಿ ದೊಡ್ಡ ಚಲನಚಿತ್ರ ಮತ್ತು ರಂಗಭೂಮಿ ವೃಂದವಾಗಿದ್ದು, ವಿಶ್ವದಾದ್ಯಂತದ ೧೬ ದೇಶಗಳಲ್ಲಿ ೭೦೪ ಸಿನೆಮಾ ಸಂಕೀರ್ಣಗಳು, ೫,೭೦೭ ಚಲನಚಿತ್ರ ಪರದೆಗಳು ಮತ್ತು ೩೩೮ ದಶಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಿಬ್ಬಂದಿ ವರ್ಗದವರಿದ್ದಾರೆ.
ಬಹರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸನ್ಮಾನ್ಯ ಶ್ರೀ ಶೇಖ್ ಖಲೀದ್ ಬಿನ್ ಹುಮುದ್ ಅಲ್ ಖಲೀಫಾ ಅವರನ್ನು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ.ಅವರು ಬಹರೇನ್‌ಅನ್ನು ವಿಶ್ವದಲ್ಲಿ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದನ್ನಾಗಿ ಅಭಿವೃದ್ಧಿಪಡಿಸಲು ಮತ್ತು ಉತ್ತಮಗೊಳಿಸಲು ಹಲವಾರು ರೂಪುರೇಖೆಗಳನ್ನು ರಚಿಸಿ ಕಾರ್ಯಗತಗೊಳಿಸಿದ್ದಾರೆ. ಅವರು ಥಿಯೇಟರ್ ಉದ್ಘಾಟಿಸಿದರು
ಸಿನೆಪೊಲಿಸ್ ಮನರಂಜನಾ ಪ್ರದರ್ಶನ ಮಾರುಕಟ್ಟೆಯಲ್ಲಿ ತಮ್ಮ ಗುಣಮಟ್ಟವನ್ನು ಹಿಂದೆಂದೂ ಏರಿಲ್ಲದ ಮಟ್ಟಕ್ಕೆ ಏರಿಸಿದೆ. ಸಿನೆಪೊಲಿಸ್ ಗ್ಲೋಬಲ್ ಮತ್ತು ಅಲ್ ತಾಯರ್ ಗ್ರೂಪ್, ಸಿನೆಪೊಲಿಸ್ ಗಲ್ಫ್ ಎಂಬ ಜಂಟಿ ಉದ್ಯಮವನ್ನು ರಚಿಸಿವೆ. ಒಮನ್ ಮತ್ತು ಸೌದಿ ಅರಬಿಯಾ ದೇಶಗಳಲ್ಲಿ ರಂಗಮಂದಿರಗಳನ್ನು ಸ್ಥಾಪಿಸುವ ಮೂಲಕ ತನ್ನ ಬೆಳವಣಿಗೆಯ ಪಥದಲ್ಲಿ ಮುಂದುವರೆಸಲಿದೆ.
ಬಹ್ರೇನ್ ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಸಿನೊಪೋಲಿಸ್ ಸಂಕೀರ್ಣವು ಉತ್ತಮವಾದ ಸೇರ್ಪಡೆಯಾಗಿದೆ ಎಂದು ಶೇಖ್ ಖಾಲ್ದ್ ಹೇಳಿದರು.
ಈ ಸಮಾರಂಭದಲ್ಲಿ ಕ್ರೌನ್ ಪ್ರಿನ್ಸ್ ಕೋರ್ಟ್ನ HRH ನ ಅಧ್ಯಕ್ಷರಾದ ಶೇಖ್ ಖಲೀಫಾ ಬಿನ್ ಡೈಜ್ ಅಲ್ ಖಲೀಫಾ, ಅಂಬಾಸಿಡರ್ಗಳು, ಉನ್ನತ ಸರ್ಕಾರಿ ಅಧಿಕಾರಿಗಳು, ವ್ಯವಹಾರ ಮುಖಂಡರು, ಗಣ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದರು.
International News Desk, Bahrain
Mr.Sisel Panayil Soman, COO – Middle East
