ಬಹರೇನ್ ಕೇರಳೀಯ ಸಮಾಜಂ ವನಿತಾ ವೇದಿ ಸಂಘವು ಬಹರೇನ್ ದ್ವೀಪದಲ್ಲಿರುವ ವಿವಾಹಿತ ಮಹಿಳೆಯರಿಗೆ “ಸೆರ್ಕಾಸಿಕ್ಸ್ ಅಂಗನಾ ಶ್ರೀ ’19 ಎಂಬ ಪ್ರತಿಭಾ ಶೋಧನ ಅಭಿಯಾನ ನಡೆಸುತ್ತಿದೆ. ಪ್ರೋತ್ಸಾಹದ ಕೊರತೆ ಅಥವಾ ಮನೆ ಮತ್ತು ಕುಟುಂಬದ ಜವಾಬ್ದಾರಿಗಳ ಕಾರಣ ತಮ್ಮ ಪ್ರತಿಭೆಗಳನ್ನು ಅವಿತಿಡುವ ಅಥವಾ ಪ್ರದರ್ಶಿಸಲಾಗದ ವಿವಾಹಿತೆಯರಿಗೆ ಈ ಅಭಿಯಾನವು ಪ್ರೋತ್ಸಾಹ ನೀಡುತ್ತದೆ.
ಬಿಕೆಎಸ್ ವನಿತಾ ವೇದಿ ಕೇರಳೀಯ ಸಮಾಜಂನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಹಿಳೆಯರಿಗಾಗಿ ಸೆಮಿನಾರ್‌ಗಳು, ತರಗತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತದೆ. ಅವರ ಹಲವಾರು ಚಟುವಟಿಕೆಗಳು ಸಮಾಜ ಸದಸ್ಯರಿಗೆ ಮಾತ್ರವಲ್ಲ, ಸದಸ್ಯರಲ್ಲದವರಿಗೂ ಕೂಡ.ಇದಲ್ಲದೆ, ಅವರು ನೈತಿಕ ಮತ್ತು ಹಣಕಾಸಿನ ಬೆಂಬಲದ ಮೂಲಕ ಗಮನಾರ್ಹ ದಾನ-ಧರ್ಮದ ಕೆಲಸಗಳನ್ನು ಮಾಡುತ್ತಿದ್ದಾರೆ.
ಶ್ರೀಮತಿ ಮೋಹಿನಿ ಥಾಮಸ್
ಅಧ್ಯಕ್ಷೆ, ಬಿಕೆಎಸ್ ವನಿತಾ ವೇದಿ
ಶ್ರೀಮತಿ ರೆಜಿತಾ ಅನಿ
ಕಾರ್ಯದರ್ಶಿ, ಬಿಕೆಎಸ್ ವನಿತಾ ವೇದಿ
ಶ್ರೀಮತಿ ಸಜನಾ ನೌಷಾದ್
ಕ್ರೀಡಾ ಕಾರ್ಯದರ್ಶಿ, ಬಿಕೆಎಸ್ ವನಿತಾ ವೇದಿ
ಬಿ.ಕೆ.ಎಸ್ ವನಿತಾ ವೇದಿ ಅಧ್ಯಕ್ಷೆ ಶ್ರೀಮತಿ ಮೊಹಿನಿ ಥಾಮಸ್ ಹೇಳುತ್ತಾರೆ: “ಒಬ್ಬ ಚುರುಕಿನ ಮಹಿಳೆ ಮನೆ ಮತ್ತು ಸಮಾಜದಲ್ಲಿ ಶಕ್ತಿಯುತ ವಾತಾವರಣವನ್ನು ನಿರ್ಮಿಸಬಹುದು.ಅದಕ್ಕಾಗಿ ಅವರಿಗೆ ಆತ್ಮ ವಿಶ್ವಾಸದ ಅಗತ್ಯವಿದೆ. ಅದಕ್ಕಾಗಿಯೇ ನಾವು ಈ ಆಂಗನ ಶ್ರೀ ಪರಿಕಲ್ಪನೆಯನ್ನು ಯೋಜಿಸಿದ್ದೇವೆ. ಈ ಒಂದು ತಿಂಗಳ ಕಾರ್ಯಕ್ರಮವನ್ನು ಆಯೋಜಿಸಲು ಬಿ.ಕೆ.ಎಸ್ ಕಾರ್ಯನಿರ್ವಾಹಕ ಸಮಿತಿಯು ಹಲವು ಕ್ಲಬ್ ಚಟುವಟಿಕೆಗಳನ್ನು ನಮಗಾಗಿ ಮರುಹೊಂದಿಸಿದೆ. ವನಿತಾ ವೇದಿ ಸದಸ್ಯೆಯರು ಕಾರ್ಯಕ್ರಮದ ಮುನ್ನೆಲೆ ಮತ್ತು ಹಿನ್ನೆಲೆಯಲ್ಲಿ ನಡೆಸಿದ ವ್ಯವಸ್ಥಿತ ಪರಿಶ್ರಮವು ಇದರ ಸಾಫಲ್ಯಕ್ಕೆ ಪ್ರಮುಖ ಭಾಗವಾಗಿದೆ.ಪ್ರತಿಯೊಬ್ಬ ಯಶಸ್ವೀ ಮನುಷ್ಯನ ಹಿಂದೆ ಒಬ್ಬ ಸದೃಢ ಮಹಿಳೆಯಿರುತ್ತಾಳೆ ಎಂಬ ನುಡಿಗಟ್ಟು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ನನ್ನ ದೃಷ್ಟಿಯಲ್ಲಿ ಪ್ರತಿ ಯಶಸ್ವಿ ಮಹಿಳೆಯ ಹಿಂದೆ ತನ್ನ ಕುಟುಂಬವಿರುತ್ತದೆ.”
ಸೆರ್ಕಾಸಿಕ್ಸ್ ಅಂಗಾನಾ ಶ್ರೀ1919 ಸ್ಪರ್ಧೆಯಲ್ಲಿ ಭಾಗವಹಿಸುವವರೆಲ್ಲರೂ ಅತಿ ಹೆಚ್ಚು ಕ್ಷಮತೆಗಳನ್ನು ಹೊಂದಿದ್ದಾರೆ ಮತ್ತು ಸ್ಪರ್ಧೆಯಲ್ಲಿ ಪ್ರಭಾವಿ ಪ್ರದರ್ಶನ ನೀಡಲು ಬಹಳ ಶ್ರಮಿಸುತ್ತಿದ್ದಾರೆ ಎಂದು ಬಿ.ಕೆ.ಎಸ್ ವನಿತಾ ವೇದಿ ಕಾರ್ಯದರ್ಶಿ ರೆಜಿತಾ ಆನಿ ಹೇಳಿದರು.ಸದ್ಯಕ್ಕೆ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸಲಾಗಲಿ, ನಿರ್ಣಯಿಸಲಾಗಲಿ ಬಹಳ ಕಷ್ಟ.
ಸೆರ್ಕಾಸಿಕ್ಸ್ ಅಂಗಾನಾ ಶ್ರೀ’19 ರಲ್ಲಿ ಭಾಗವಹಿಸುವವರು ಅಡುಗೆ ಸ್ಪರ್ಧೆ, ಸುಗಮ ಸಂಗೀತ / ಜಾನಪದ ನೃತ್ಯ, ಕನ್ನಡಿ ಅಭಿನಯ, ಏಕಪಾತ್ರಾಭಿನಯ, ಸಾಮಾನ್ಯ ಜ್ಞಾನ, ಕುಟುಂಬ ಮತ್ತು ಸ್ನೇಹಿತರೊಂದಿಗಿನ ಗುಂಪು ಸುತ್ತು, ಸಂಪ್ರದಾಯಿಕ ಉಡುಗೆ ಸುತ್ತು ಮತ್ತು ಅಂತರಸಂಪರ್ಕ ಸುತ್ತು – ಇವಿಷ್ಟು ಸೇರಿದಂತೆ 9 ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಅಂಗನಾ ಶ್ರೀ ಸರ್ಧೆಗಳಲ್ಲಿ ಪ್ರೇಕ್ಷಕರು ನೀಡುವ ಅಂಕಗಳೂ ಸಹ ಲೆಕ್ಕಕ್ಕೆ ಬರುತ್ತವೆ.ಪ್ರತಿಯೊಂದು ಸ್ಪರ್ಧೆಯ ಫಲಿತಾಂಶಗಳನ್ನು ಮುಚ್ಚಲಾದ ಲಕೋಟೆಗಳಲ್ಲಿ ಇಟ್ಟಿರಲಾಗುತ್ತದೆ. ಕೊನೆಯ ದಿನ ಅಲ್ಲ ಅಂಕಗಳನ್ನು ಒಟ್ಟು ಕೂಡುವ ತನಕ ಅಂತಿಮ ಫಲಿತಾಂಶಗಳು ಗೊತ್ತಾಗುವುದಿಲ್ಲ.
ಈ ವರ್ಷದ ವನಿತಾ ವೇದಿ ಸಮಿತಿ ಮತ್ತು ಸೆರ್ಕಾಸಿಕ್ಸ್ ಆಂಗನಾ ಶ್ರೀ 19 ಫಿನಾಲೆ ಫೆಬ್ರವರಿ 7 ರಂದು ನಡೆಯಲಿದೆ.ಮಲಯಾಳಂ ಸಿನೆಮಾ ಕಲಾವಿದೆ ನಿಮಿಶಾ ಸಂಜಯ್ (ಥಾಂಡಿಮುತಲಮ್ ಟ್ರಿಕ್ಸ್ಸಾಶಿಯಾಮ್, ಒರು ಕುಪ್ರಸಿತ ಪಾಯನ್) ಈ ಮಹತ್ತರ ದಿನಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಿತರಾಗಿದ್ದಾರೆ.
International News Desk, Bahrain
Mr.Sisel Panayil Soman, COO – Middle East