ಕೇಂದ್ರ ಸರಕಾರದ ಆಮದು ನೀತಿಯ ಭಾಗವಾಗಿ ಬರ್ಮಾ ದೇಶದ ಅಡಿಕೆಯು ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಈ ಅಡಿಕೆಯು ಗುಣಮಟ್ಟ ಮತ್ತು ದರದಲ್ಲಿ ನಮ್ಮ ದೇಶದ ಅಡಿಕೆ ಕೃಷಿಕರನ್ನು ಕಂಗೆಡಿಸಿದೆ .
ಆಮದು ಅಡಿಕೆಯಿಂದ ಪಟೊರ, ಕೊಕ, ಕರಿಗೊಟು ದರದಲ್ಲಿ ಭಾರಿ ಕುಸಿತ ಕಂಡಿದೆ.
ಸರಕಾರದ ನೀತಿಯಂತೆ ಮುಂದಿನ ಎರಡು ವರುಷ ಈ ಆಮದು ಪ್ರಕ್ರಿಯೆ ಚಾಲ್ತಿಯಲ್ಲಿರುವುದು ದೇಶಿಯ ಅಡಿಕೆ ಮಾರುಕಟ್ಟೆ ಊಹಿಸಲಾಗದಸ್ಟು ನಕಾರಾತ್ಮಕವಾಗಿ ಮುಂದುವರಿಯಲಿದೆ.
ಕಾಳುಮೆಣಸು ಭಾರತದೊಳಗೆ ಆಮದು ಆದ ನಂತರ ದೇಶೀಯ ಕಾಳುಮೆಣಸು ಮುಗ್ಗರಿಸಿ ಪಾತಾಳ ಕಂಡಿದ್ದು, ಮುಂದಿನ ಸರದಿಗಾಗಿ ಅಡಿಕೆ ಕಾಯುತ್ತಿದೆ.
ಕೃಷಿಕರು, ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಈ ಕುರಿತು ಪ್ರತಿಭಟಿಸದ್ದಿದ್ದರೆ ದೇಶದ ದಕ್ಷಿಣ ಭಾಗದ ಕರಾವಳಿಯ ಮುಖ್ಯ ಬೆಳೆ ಅಡಿಕೆ ಇತಿಹಾಸ ಸೇರುವುದು ಶತಸಿದ್ದ ಎಂದು ಕೆಲ ಮೂಲಗಳು ತಿಳಿಸಿವೆ.
