ಬಹರೇನ್ ಮಧ್ಯಪ್ರಾಜ್ಯದಲ್ಲಿರುವ ಚಿಕ್ಕ ದೇಶ. ದೇಶ ಚಿಕ್ಕದಾದರೂ ಕನಸುಗಳು ದೊಡ್ಡವು. ಬಹರೇನ್ ಸಾಮ್ರಾಜ್ಯವು ತನ್ನ ರಾಷ್ಟ್ರೀಯ ತಂತ್ರಜ್ಞಾನ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಕನಸು ಹೊತ್ತಿದೆ.
ಬಹರೇನ್ ವಿಭಿನ್ನ ರೀತಿಗಳ ಆರ್ಥಿಕತೆಗಳುಳ್ಳ ದ್ವೀಪ ದೇಶ. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಬಹರೇನ್ ಈಗ ತನ್ನ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡಲು ನಿರ್ಧರಿಸಿದೆ, ಜೊತೆಗೆ ತೈಲ ಮತ್ತು ಅನಿಲದ ಮೇಲೆ ಅವಲಂಬನವನ್ನು ಕಡಿಮೆಗೊಳಿಸು ಉದ್ದೇಶ ಹೊಂದಿದೆ.
ತನ್ನಲ್ಲಿ ವ್ಯವಹಾರ ಮಾಡಲು ಅನುಕೂಲಕರ ವಾತಾವರಣವು ಬಹರೇನ್‌ನ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ಬಹಳ ವರ್ಷಗಳಿಂದಲೂ ಸಹಕಾರಿಯಾಗಿರುವಂತಹ ಕಾನೂನು ಮತ್ತು ನಿಬಂಧನಾ ವರಿಸರ ಕಾಯ್ದುಕೊಂಡಿರುವ ಬಹರೇನ್‌ನಲ್ಲಿ ವಿದೇಶಿ ಮಾಲಿಕತ್ವದ ಉದ್ದಿಮೆಗಳ ಮೇಲೆ ಯಾವುದೇ ನಿರ್ಬಂಧವಿಲ್ಲ.
ಬಹರೇನ್‌ನಲ್ಲಿ ಸುಮಾರು ೪ ದಶಕಗಳಷ್ಟು ಅನುಭವವುಳ್ಳ ಲೆಕ್ಕಶಾಸ್ತ್ರಜ್ಞರಿರುವ ಆರ್ಥಿಕ ಕ್ಷೇತ್ರವಿದೆ.
ಸರ್ಕಾರ ಹಂಚಿದ ಅಂಕಿ-ಅಂಶಗಳ ಪ್ರಕಾರ, ಬಹರೇನ್‌ನಲ್ಲಿ ಈಗ ಉದಯೋನ್ಮುಖ ಉದ್ದಿಮೆಗಳ ಸಂಖ್ಯೆ ಹೆಚ್ಚಾಗಿದ್ದು, ಸದ್ಯಕ್ಕೆ ೭೫ ಉದ್ದಿಮೆಗಳಿವೆ. ಬಹರೇನ್‌ನ ಆರ್ಥಿಕ ವಿಕಾಸಕ್ಕೆ ಉದ್ದಿಮೆದಾರಿಕೆ ಬಹಳ ಮುಖ್ಯ ಎಂಬುದನ್ನು ತೋರಿಸುತ್ತದೆ.
ಬಹರೇನ್‌ಗಾಗಿ ಉತ್ತಮ ಆರ್ಥಿಕ ರೂಪರೇಖೆ ರಚಿಸಿ, ಉದ್ದಿಮೆಗಳು ಮತ್ತು ಹೂಡಿಕೆದಾರರನ್ನು ಬಹರೇನ್‌ಗೆ ಆಹ್ವಾನಿಸುವ ಜವಾಬ್ದಾರಿಯನ್ನು ಬಹರೇನ್ ಆರ್ಥಿಕ ಅಭಿವೃದ್ಧಿ ಮಂಡಳಿ (ಬಿಇಡಿಬಿ) ಮುಖ್ಯ ಕಾರ್ಯಾಧಿಕಾರಿ ಖಾಲೀದ್ ಅಲ್ ರುಮೈಹಿ ಹೊತ್ತಿದ್ದಾರೆ. ಸ್ಥಳೀಯ ಉದಯೋನ್ಮುಖ ತಂತ್ರಜ್ಞಾನ ಉದ್ದಿಮೆಗಳ ಸಂಖ್ಯೆಯನ್ನು ೨೦೦ಕ್ಕೆ ಏರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಲ್ಲಿಯ ಇತರೆ ದೇಶಗಳಲ್ಲಿನ ಪ್ರತಿಸ್ಪರ್ಧಿಗಳಿಗಿಂತ ವಿಭಿನ್ನವಾಗಿರಿಸಲು ಬಹರೇನ್ ಸರ್ಕಾರವು ತನ್ನ ತಂತ್ರಜ್ಞಾನ ವ್ಯವಸ್ಥೆಯನ್ನು ರೂಪಿಸಲಿದೆ. ಉದಾಹರಣೆಗೆ ಸೌದಿ ಅರಬಿಯಾದ ತೈಲ ಕ್ಷೇತ್ರದಲ್ಲಿ ಸಾಕಷ್ಟು ಜಮೀನು ಮತ್ತು ಇತರೆ ಸಂಪನ್ಮೂಲಗಳಿರುವ ಕಾರಣ, ಬಹರೇನ್ ಹಣಕಾಸು, ಮಧ್ಯಮ ಮಟ್ಟದ ಕಾರ್ಯಾಲಯ ಹಾಗೂ ತಂತ್ರಜ್ಞಾನದತ್ತ ಗಮನ ಹರಿಸಲಿದೆ ಎಂದು ಅಲ್ ರುಮೈಹಿ ತಿಳಿಸಿದರು.
ಇತ್ತೀಚೆಗೆ ಬಹರೇನ್ ಸರ್ಕಾರವು ಕ್ಲೌಡ್ ವ್ಯವಸ್ಥೆಗೆ ಆದ್ಯತೆ ನೀಡುವ ನೀತಿಯನ್ನು ಆಯ್ದುಕೊಂಡಿತು. ಇದರ ಮೂಲಕ ಸರ್ಕಾರಿ ಕಾರ್ಯಾಲಯಗಳು ಮತ್ತು ಉದ್ದಿಮೆಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಲೌಡ್ ವ್ಯವಸ್ಥೆಯನ್ನು ಬಳಸಲು ಪ್ರೋತ್ಸಾಹಿಸುತ್ತದೆ. ಅಮೆರಿಕಾ ಮೂಲದ ಅಮೆಜಾನ್ ಮಧ್ಯಪ್ರಾಚ್ಯದಲ್ಲಿ ತನ್ನ ಮೊಟ್ಟಮೊದಲ ಅಮೆಜಾನ್ ಅಂತರಜಾಲ ಸೇವೆ (ಎಡಬ್ಲುಎಸ್) ವ್ಯವಸ್ಥೆಗಾಗಿ ಬಹರೇನ್‌ನ್ನು ಆಯ್ಕೆ ಮಾಡಿಕೊಂಡಿದೆ. ಇದು ಈ ವರ್ಷ ಆರಂಭವಾಗಲಿದೆ.
“ಕ್ಲೌಡ್ ತಂತ್ರಜ್ಞಾನವನ್ನು ಉದಯೋನ್ಮುಖ ಉದ್ದಿಮೆಗಳು, ದೊಡ್ಡ ಉದ್ದಿಮೆಗಳು ಹಾಗೂ ಸರ್ಕಾರಗಳ ಸನಿಹ ತರುವುದರ ಫಲಿತಾಂಶವನ್ನು ನಾವು ನೋಡಬೇಕಿದೆ” ಎಂದು ಇತ್ತೀಚಿನ ತಮ್ಮ ಬ್ಲಾಗ್‌ನಲ್ಲಿ ಎಡಬ್ಲುಎಸ್‌ನ ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ವಲಯದ ಮುಖ್ಯಸ್ಥ ಜುಬಿನ್ ಚಗಪರ್ ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಈ ವಲಯದಲ್ಲಿ ಸುಮಾರು ೧೦,೦೦೦ಕ್ಕೂ ಹೆಚ್ಚು ದತ್ತಾಂಶ ತಂತ್ರಜ್ಞರು ಬೇಕಾಗಿರುತ್ತಾರ ಎಂದು ಎಡಬ್ಲುಎಸ್ ಹೇಳಿದೆ. ಈಗಾಗಲೇ ಎಡಬ್ಲುಎಸ್ ತರಬೇತಿ ಕಾರ್ಯಕ್ರಮಗಳಿಗಾಗಿ ಸುಮಾರು ೨,೫೦೦ ಬಹರೇನಿಗಳು ಸೇರ್ಪಡೆಯಾಗಿದ್ದಾರೆ ಎಂದು ಅಲ್ ರುಮೈಹಿ ತಿಳಿಸಿದ್ದಾರೆ.
ಬಹರೇನ್ ತನ್ನ ಭವಿಷ್ಯ ರೂಪಿಸುವಾಗ, ಸರ್ಕಾರವು ತಂತ್ರಜ್ಞಾನ ಮತ್ತು ಕುಶಲತೆ ಅಭಿವೃದ್ಧಿ ಅವಕಾಶಗಳನ್ನು ಉತ್ತಮಗೊಳಿಸುವ ಚಿಂತನೆ ನಡೆಸಿದೆ ಎಂದು ಅಲ್ ರುಮೈಹಿ ಹೇಳಿದರು. ತಂತ್ರಾಂಶ ಬರೆಯುವವರು ಬೇಕಾಗಿದ್ದಾರೆ. ದೂರದೃಷ್ಟಿಯಲ್ಲಿ ನಾವು ವಿಜ್ಞಾನ, ತಂತ್ರಜ್ಞಾನ, ಮತ್ತು ಗಣಿತ ವಿಷಯಗಳ ಬಗ್ಗೆ ಶಾಲಾ ಶಿಕ್ಷಣ ನೀಡುವತ್ತ ಗಮನ ಕೊಡಲಿದ್ದೇವೆ. ಆದರೆ ಸದ್ಯಕ್ಕೆ ಆನ್ಲೈನ್ ಮೂಲಕ ತಂತ್ರಾಂಶ ರಚನಾ ತರಬೇತಿ ನೀಡಲಿದ್ದೇವೆ ಎಂದು ಅಲ್ ರುಮೈಹಿ ತಿಳಿಸಿದರು. ಎಡಬ್ಲೂಎಸ್ ಮೂಲಕ ಜನರು ಆರು ತಿಂಗಳುಗಳೊಳಗೇ ಪ್ರಮಾಣ ಪತ್ರ ಪಡೆಯಬಹುದಾಗಿದೆ ಎಂದರು.
ಬಹರೇನ್‌ನಲ್ಲಿ ಯುವ ಜನಾಂಗಕ್ಕಾಗಿ ಉದ್ಯೋಗ ಸೃಷ್ಟಿಸುವ ಅವಕಾಶವಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದ ಪ್ರಕಾರ, ಸದೃಢ ಆರ್ಥಿಕತೆಗಾಗಿ ಮುಂದಿನ ಐದು ವರ್ಷಗಳಲ್ಲಿ ಮದ್ಯಪ್ರಾಚ್ಯ ವಲಯದಲ್ಲಿ ಯುವಕರಿಗಾಗಿ ಸುಮಾರು ೧೦೦ ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ.
ಬಹರೇನ್‌ನ ಮಹತ್ವಾಕಾಂಕ್ಷಿ ಯುವ ಜನಾಂಗಕ್ಕೆ ಹೆಚ್ಚು ಶಕ್ತಿ ನೀಡುವುದ ಅತ್ಯಗತ್ಯ ಎಂದು ಅಲ್ ರುಮೈಹಿ ಒತ್ತಿ ಹೇಳುತ್ತಾರೆ. ಪ್ರತಿಯೊಬ್ಬ ಕಾಲೇಜ್ ಪದವೀದರರಿಗೂ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನು ಬಗೆಹರಿಸಲು ಉದ್ಯೋಗ ಸೃಷ್ಟಿಕರ್ತರನ್ನೇ ಸೃಷ್ಟಿಸಬೇಕು ಎಂದರು. ಒಬ್ಬ ಉದ್ದಿಮ ಸೃಷ್ಟಿಕರ್ತ ೨೦ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂದರು.
ಈ ವಲಯದಾದ್ಯಂತ ಉದ್ದಿಮೆದಾರರಿಗೆ ಬಹರೇನ್ ಒಂದು ಕೇಂದ್ರಬಿಂದುವಾಗಬೇಕು. ನಮ್ಮ ಉದಯೋನ್ಮುಖ ತಂತ್ರಜ್ಞಾನ ಉದ್ದಿಮೆಗಳು ಇದೇ ರೀತಿಯ ಇತರಎ ಉದ್ದಿಮೆಳೊಂದಿಗೆ ಬೆಸೆದು ಬೆಳೆಯಬೇಕು. ಆದರೆ ಮೊಟ್ಟಮೊದಲು ಉದಯೋನ್ಮುಖ ಉದ್ದಿಮೆಗಳಿಗೆ ಅನುಕೂಲವಾಗುವಂತಹ ನೀತಿ ನಿಯಮಗಳನ್ನು ತರಬೇಕು ಎಂದು ಅಲ್ ರುಮೈಹಿ ಹೇಳಿದರು.
ಕ್ರೌಡ್ ಫಂಡಿಂಗ್ ವಿಚಾರದಲ್ಲಿ ಬಹರೇನ್ ಸರ್ಕಾರವು ಹೊಸ ನಿಬಂಧನೆಗಳು, ಹಾಗೂ ಉದ್ದಿಮೆಗಳ ವೈಫಲ್ಯ, ಮರುರಚನೆ ಮತ್ತು ಕಾರ್ಯನಿರ್ವಹಣೆ ಮುಂದುವರೆಸಲು ದಿವಾಳಿತನದ ಕಾನೂನನ್ನೂ ಸಹ ಮುಂದಿಟ್ಟಿದೆ.
ವ್ಯವಸ್ಥೆಯ ಬೆಳವಣಿಗೆ
ಉದಯೋನ್ಮುಖ ಉದ್ದಿಮಗಳಿಗೆ ನಿರಂತರವಾಗಿ ಬಂಡವಾಳದ ಒಳಹರಿವಿನ ಅಗತ್ಯವಿದೆ. ಇದಕ್ಕಾಗಿ ಬಹರೇನ್ ೧೦೦ ದಶಲಕ್ಷ ಡಾಲರ್ ಮೌಲ್ಯದ ಅಲ್ ವಾಹಾ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸಿದೆ. ಇದು ಭರವಸೆಯ ಉದಯೋನ್ಮುಖ ಉದ್ದಿಮೆಗಳಲ್ಲಿ ಹೂಡಿಕೆ ಮಾಡುತ್ತದೆ.
ಇಂತಹ ಹೂಡಿಕೆದಾರರು ಬಹರೇನ್‌ನಲ್ಲಿ ಅಸ್ತಿತ್ವ ಹೊಂದಿರುವ ಅಗತ್ಯವಿದೆ ಎಂದು ಅಲ್ ರುಮೈಹಿ ಹೇಳಿದರು. ಚಿಕ್ಕ ಉದ್ದಿಮೆಗಳು ದೊಡ್ಡ ಉದ್ದಿಮೆಗಳೊಂದಿಗೆ ಕೆಲಸ ಮಾಡಿ ಇನಷ್ಟು ಉದ್ದಿಮೆಗಳನ್ನು ಹುಟ್ಟುಹಾಕಬೇಕು ಎಂದರು.
ದತ್ತಾಂಶ ಕೇಂದ್ರ ಬಹರೇನ್‌ನಲ್ಲಿರುವುದು ಪ್ರಮುಖ ಸಾದನೆಯಾಗಿದೆ. ದೊಡ್ಡ ಉದ್ದಿಮೆಗಳಿಗೆ ಇದು ಅನುಕೂಲವಾಗಬಲ್ಲದು ಎಂದು ಅಲ್ ರುಮೈಹಿ ಹೇಳಿದರು.
ಬಹರೇನ್ ಡೆವಲಪ್ಮೆಂಟ್ ಹಿರಿಯ ಉಪಾಧ್ಯಕ್ಷ ಅರೇಜೆ ಅಲ್ ಶಕರ್ ಪ್ರಕಾರ ಬಹರೇನ್‌ನಲ್ಲಿ ತಂತ್ರಜ್ಞಾನದಲ್ಲಿ ಬಹಳಷ್ಟು ಅವಕಾಶಗಳಿವೆ ಎಂದರು. ಇ-ವಾಣಿಜ್ಯ ಮತ್ತು ತಂತ್ರಜ್ಞಾನದೊಂದಿಗೆ ಈ ವಲಯವು ಸೂಕ್ತವಾಗಿ ಹೊಂದಿಕೊಳ್ಳುತ್ತಿದೆ ಎಂದರು.
International News Desk, Bahrain
Mr.Sisel Panayil Soman, COO – Middle East
