೨೦೧೬ರ ಸೆಪ್ಟೆಂಬರ್ ತಿಂಗಳಲ್ಲಿ “ಸರ್ಜಿಕಲ್ ಸ್ಟ್ರೈಕ್” ನಡೆಸಿದ ಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ (ನಿವೃತ್ತ) ದೀಪೇಂದ್ರ ಸಿಂಗ್ ಹುಡ್ಡಾ ಅವರಿಗೆ ಕಾಂಗ್ರೆಸ್ ಪಕ್ಷವು, ದೇಶದ ಭದ್ರತಾ ವಿಷಯದ ಬಗ್ಗೆ ಪತ್ರವೊಂದನ್ನು ರಚಿಸಿಕೊಡಲು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷವು, ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನು ಅನಾವರಣಗೊಳಿಸಿದೆ ಎಂದು ಹೇಳಿದೆ.
ಲೆಫ್ಟಿನಂಟ್ ಜನರಲ್ ಹುಡ್ಡಾ ಅವರು ಈ ಸರ್ಜಿಕಲ್ ಸ್ಟ್ರೈಕ್‌ನ ರಣತಂತ್ರದಲ್ಲಿ ಭಾರೀ ಪಾತ್ರ ವಹಿಸಿದ್ದರು.
ಕಾಂಗ್ರೆಸ್ ಅಂದು ಈ ಸರ್ಜಿಕಲ್ ಸ್ಟ್ರೈಕ್‌ನ್ನು ಪ್ರಶ್ನಿಸಿ, ಟೀಕಿಸಿತ್ತು. ಇಂದು ಇದೇ ಪಕ್ಷ ಇದೇ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಪಡೆಯ ನಾಯಕರಿಗೆ ಭದ್ರತಾ ವಿಚಾರವಾಗಿ ಪತ್ರವೊಂದನ್ನು ರಚಿಸಿಕೊಡಲು ತಿಳಿಸಿದೆ. ಇದರ ವಿಪರ್ಯಾಸ ಸ್ಪಷ್ಟವಾಗಿದೆ.
ಹುಡ್ಡಾ ಅವರ ಉಪಸ್ಥಿತಿಯೊಂದಿಗೆ, ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರಕ್ಕೆ ನೀಡಬೇಕಾದ ಗೌರವವನ್ನು ನೀಡುತ್ತದೆ; ಕಾಂಗ್ರೆಸ್ ತನ್ನ ದ್ವಿಮುಖ ನಿಲುವು ಪ್ರದರ್ಶಿಸುವುದನ್ನು ತ್ಯಜಿಸುತ್ತದೆ ಎಂಬ ವಿಶ್ವಾಸವನ್ನು ಭಾರತಿಯ ಜನತಾ ಪಕ್ಷವು ವಿಶ್ವಾಸ ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಭಾರತೀಯ ಸೇನೆಯ ಶಿಬಿರದ ಮೇಲೆ ಪಾಕಿಸ್ತಾನಿ ಪಡೆ ಮತ್ತು ಉಗ್ರರು ಧಾಳಿ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆಗಳು “ಸರ್ಜಿಕಲ್ ಸ್ಟ್ರೈಕ್” ನಡೆಸಿದವು.
