ಹಲವು ರಾಜ್ಯಗಳ ಅರಣ್ಯಗಳಿಂದ ಅರಣ್ಯವಾಸಿಗಳನ್ನು ಎತ್ತಂಗಡಿ ಮಾಡುವಂತೆ ಆಯಾ ರಾಜ್ಯಗಳ ಸರ್ಕಾರಗಳಿಗೆ ತಾನು ಪೆಬ್ರುವರಿ ೧೩ರಂದು ನೀಡಿದ ತೀರ್ಪನ್ನು ಭಾರತೀಯ ಸರ್ವೋಚ್ಚ ನ್ಯಾಯಾಲಯವು ಸ್ಥಗಿತಗೊಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಇತರೆ ಸಾಂಪ್ರದಾಯಿಕ ಅರಣ್ಯ ನಿವಾಸಿ ಕಾಯಿದೆ ೨೦೦೬ ಅಡಿ, ರಾಜ್ಯ ಸರ್ಕಾರಗಳು ಅರಣ್ಯನಿವಾಸಿಗಳಿಗೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದೆ. ಪ್ರಕ್ರಿಯೆಯನ್ನು ವಿಸ್ತೃತವಾಗ ವಿವರಿಸುವ ಅಫಿಡವಿಟ್ ಸಲ್ಲಿಸಲು ಈ ನ್ಯಾಯಾಲಯವು ಸೂಚನೆ ನೀಡಿತು.
ವಿಚಾರಣೆ ಜುಲೈ ೧೦ರಂದು ನಡೆಯಲಿದೆ.
ಈ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ನವೀನ್ ಸಿನ್ಹಾ ಮತ್ತು ಎಂ ಆರ್ ಶಾ ಇದ್ದರು.
