ಎಂಐಜಿ-೨೧ ಯುದ್ಧ ವಿಮಾನ ಹಾರಿಸುತ್ತಿದ್ದ ಐಎಎಫ್ ವಿಂಗ್ ಕಮ್ಯಾಂಡರ್ ಒಬ್ಬರು ಇನ್ನು ಮರಳಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಪಾಕಿಸ್ತಾನವು ತಾನು ಎರಡು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಇಬ್ಬರು ಪೈಲಟ್‌ಗಳನ್ನು ವಶದಲ್ಲಿಟ್ಟುಕೊಂಡಿರುವುದಾಗಿ ಹೇಳಿದೆ.
ಐಎಎಫ್ ಪೈಲಟ್ ಅಭಿನಂದನ್, ತಮ್ಮ ಎಂಐಜಿ-೨೧ ಯುದ್ಧ ವಿಮಾನವನ್ನು ಬುಧವಾರ ಬೆಳಿಗ್ಗೆ ಹಾರಿಸಿಕೊಂಡು ಹೋಗಿದ್ದವರು ಇನ್ನೂ ಮರಳಿಲ್ಲ.
ನಿನ್ನೆ ಮುಂಜಾನೆಗೂ ಮುಂಚೆ, ಐಎಎಫ್ ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಿರ್ಮೂಲ ಮಾಡಿ ಬಂದ ಹಿನ್ನೆಲೆಯಲ್ಲಿ, ಬುಧವಾರದಂದು ಸೇನಾ ಚಟುವಟಿಕೆಗಳು ಚುರುಕಾದವು.
ಪಾಕಿಸ್ತಾನವು ಭಾರತದ ವಾಯುನೆಲೆಯಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದು, ಅದರ ಒಂದು ಎಫ್-೧೬ ಯುದ್ಧವಿಮಾನವನ್ನು ಐಎಎಫ್ ನವರು ಹೊಡೆದುರುಳಿಸಿದರು.
