ಬಹುಕೋಟಿ ರುಪಾಯಿ ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಇದರ ದೋಷಾರೋಪಪಟ್ಟಿಯನ್ನು ಒಂದನೆಯ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ದೋಷಾರೋಪಪಟ್ಟಿಯು ೧೨ ಸಂಪುಟ ಹಾಗೂ ಒಟ್ಟು ಸುಮಾರು ೪,೮೦೦ ಪುಟಗಳನ್ನು ಹೊಂದಿವೆ.
ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಹತ್ತು ಮಂದಿ ಜನರ ವಿರುದ್ಧ ವಂಚನೆಯ ಆರೋಪವಿದೆ.
ಜನಾರ್ದನ ರೆಡ್ಡಿ ಅವರ ವಿರುದ್ಧ ಇತರೆ ಆರೋಪಿಗಳಿಗೆ ಸಹಕಾರ ನೀಡಿದ ಆರೋಪವಿದೆ. ರೆಡ್ಡಿ ಸೇರಿದಂತೆ ಐವರು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಕ್ಷಮ ಅಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಅದಿಕೃತ ಆದೇಶ ಹೊರಡಿಸಿದೆ ಎಂದಿದ್ದಾರೆ.
ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಸೈಯದ್ ಫರೀದ್ ಅಹಮದ್, ಸೈಯದ್ ಆಫಾಕ್ ಅಹಮದ್, ಇರ್ಫಾನ್ ಮಿರ್ಜಾ, ವಿಜಯ್ ಟಾಟಾ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ, ಮೆಹಫೂಜ್ ಅಲಿಖಾನ್, ಬಳ್ಳಾರಿ ರಮೇಶ್, ಇನಾಯತ್ ಉಲ್ಲಾ ವಹಾಬ್ ಮತ್ತು ಅಶ್ರಫ್ ಅಲಿ ವಿರುದ್ಧ ಸಿಸಿಬಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೋಷಾರೋಪಟ್ಟಿ ಸಲ್ಲಿಸಿದೆ.
ಚಿತ್ರಕೃಪೆ: “ಏನುಸುದ್ದಿ”
ಸಿಬಿನ್ ಪನಯಿಲ್ ಸೊಮನ್
ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್, ಸಾಗರ
