ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಕೆನ್ನೆತ್ ಜುಸ್ಟರ್, ಪುಲ್ವಾಮಾದಲ್ಲಿ ಸಿಅರ್‌ಪಿಎಫ್ ಯೋಧರ ಮೇಲಿನ ಪಾಕಿಸ್ತಾನಿ ಭಯೋತ್ಪಾದಕ ಧಾಳಿಯನ್ನು ಖಂಡಿಸಿದರು. ಪಾಕಿಸ್ತಾನವು ಕೂಡಲೇ ಭಯೋತ್ಪಾದನಾ ಸಂಘಟನೆಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅವರು ಏರೊ ಇಂಡಿಯಾ ಪ್ರದರ್ಶನಕ್ಕೆ ಬೆಂಗಳೂರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸೂರ್ಯ ಕಿರಣ್ ವಿಮಾನ ನೆಲಕ್ಕುರುಳಿ ಸಾವನ್ನಪ್ಪಿದ ಪೈಲಟ್‌ರ ಕುಟುಂಬಕ್ಕೂ ಸಾಂತ್ವನ ಹೇಳಿದರು.
ಈ ಬಾರಿಯ ಏರೊ ಇಂಡಿಯಾ ಪ್ರದರ್ಶನದಲ್ಲಿ ೨೮ ಅಮೆರಿಕನ್ ಉದ್ದಿಮೆಗಳು ಬಾಗವಹಿಸುತ್ತಿವೆ. ಇವುಗಳ ಪೈಕಿ ೧೯ ಯುಎಸ್‌ಎ ಪಾರ್ಟ್ನರ್ಷಿಪ್ ಪೆವಿಲಿಯನ್‌ನಲ್ಲಿವೆ.
ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯವನ್ನು ಪ್ರಶಂಸಿಸಿ, ಅಮೆರಿಕಾದೊಂದಿಗೆ ಭಾರತದ ಸೇನೆಗಳು ಅತಿ ಹೆಚ್ಚು ರಕ್ಷಣಾ ಅಭ್ಯಾಸಗಳನ್ನು ನಡೆಸಿದವು, ಇದು ಅನ್ಯ ದೇಶಗಳಿಗಿಂತಲೂ ಅತಿ ಹೆಚ್ಚು ಎಂದು ಜಸ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ಮತ್ತು ಅಮೆರಿಕಾ, ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತಮಗೊಳಿಸಲು ಬದ್ಧವಾಗಿದೆ ಎಂದು ಜಸ್ಟರ್ ಹೇಳಿದರು.
ಚಿತ್ರ ಕೃಪೆ ANI
