ಪ್ರಧಾನಿ ನರೇಂದ್ರ ಮೋದಿಯವರು ಆತ್ಮಾವಲೋಕನ ಮಾಡಿಕೊಳ್ಳಲು ಎಲ್ಲಿ ಹೋಗುತ್ತಾರೆ ಗೊತ್ತೇ? ಕಾಡಿಗೆ!
ಕಳೆದ ದೀಪಾವಳಿಯಂದು ಇಡೀ ರಾಷ್ಟ್ರವು ಬೆಳಕಿನ ಹಬ್ಬ-ಪಟಾಕಿ ಸದ್ದುಗಳಲ್ಲಿ ಮಿಂದತ್ತಿದ್ದಾಗ ಪ್ರಧಾನಿ ಮೋದಿಯವರು ಐದು ದಿನಗಳ ಕಾಲ ಕಾಡಿಗೆ ಹೋಗಿ ಏಕಾಂತದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರು. ಝೂಳುಝಳು ಹರಿಯುವ ನೀರಿನ ಹತ್ತಿರ ತಾಣವೊಂದನ್ನು ಆಯ್ಕೆ ಮಾಡಿಕೊಂಡು ಎಲ್ಲವನ್ನೂ ಮರೆತು ಏಕಾಂತವಾಸಿಯಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರು.
ಒಂಟಿತನದಲ್ಲಿ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಂಡರೆ ಅದರಿಂದ ಸಿಗುವ ಅನುಭವವೇ ಬೇರೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ.” ಎಂದು ಮೋದಿಯವರು ಹೇಳಿದರು.
ಫೇಸ್ಬುಕ್ ಪುಟವೊಂದಿಗಿನ ಸಂದರ್ಶನದಲ್ಲಿ ಮೋದಿಯವಉ ಈ ಮಾಹಿತಿ ಹಂಚಿದರು.
ನಾವು ಕಾಡಿಗೆ ಹೋದಾಗೆಲ್ಲ ಕಾಡಿನ ಹಸಿರು ನಮ್ಮಲ್ಲಿರುವ ನಕಾರಾತ್ಮಕ ಕಣಗಳನ್ನು ತೆಗೆದು ಸಕಾರಾತ್ಮಕ ಕಣಗಳನ್ನು ನಮ್ಮೊಳಗೆ ತುಂವಿ ಚೈತನ್ಯ ನೀಡುತ್ತದೆ ಎಂದು ಹಲವು ಅನುಭವಿಗಳು ಹೇಳಿದ್ದಾರೆ, ಇದನ್ನು ವೈಜ್ಞಾನಿಕ ಸಂಶೋಧನೆಗಳು ನಿಜವೆಂದು ಹೇಳಿವೆ.
ಭಾರತೀಯ ಪ್ರಾದೇಶಿಕ ಸುದ್ದಿ ಕೇಂದ್ರ
ಸಿಬಿನ್ ಪನಯಿಲ್ ಸೊಮನ್
ಪ್ರಾದೇಶಿಕ ಮುಖ್ಯಸ್ಥರು – ವ್ಯವಹಾರ ವೃದ್ಧಿ ಮತ್ತು ಕಾರ್ಯಾಚರಣೆ – ಇಂದ್‌ಸಮಾಚಾರ್
