ಭಾರತದ ಏಳ್ಗೆ ಹಾಗೂ ಪರಿಸರ ಸಂರಕ್ಷಣೆಗಾಗಿ ವ್ಯವಸ್ಥೆ ರೂಪಿಸುತ್ತಿರುವ ಮೋದಿ ಸರ್ಕಾರ
ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತಕ್ಕೆ ಉತ್ತಮ ಭವಿಷ್ಯವನ್ನು ಕಲ್ಪಿಸಲು ಮತ್ತು ಪರಿಸರವನ್ನು ಸಂರಕ್ಷಿಸಲು ವ್ಯವಸ್ಥೆಯೊಂದನ್ನು ಹೇಗೆ ಅಳವಡಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ. ಉದ್ದಿಮೆಯೊಂದರಲ್ಲಿ ನೇರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ದೊಡ್ಡ ಕೊಳಚೆನೀರಿನ ಸಂಸ್ಕರಣ ಘಟಕದ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ.
ಭಾರತದಾದ್ಯಂತ ದೊಡ್ಡ ವಾಣಿಜ್ಯ ಮತ್ತು ಕೈಗಾರಿಕಾ ಉದ್ದಿಮೆಗಳಲ್ಲಿ ತ್ಯಾಜ್ಯ ನೀರು ಮತ್ತು ಅದರ ಸಂಸ್ಕರಣೆಯನ್ನು ಪರಿವೀಕ್ಷಿಸುವ ಸಂವೇದಕಗಳ ಅಂತರಸಂಪರ್ಕಿತ ಜಾಲವನ್ನು ರಚಿಸುವ ಯೋಜನೆಯಲ್ಲಿ ಪ್ರಧಾನ ಮಂತ್ರಿಯ ಕಾರ್ಯಾಲಯ, ಪರಿಸರ ಕಾಡು ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಹಾಗೂ ಇತರೆ ಶಾಸನಬದ್ಧ ಸಮಿತಿಗಳು ಒಗ್ಗೂಡಿ ಕೆಲಸ ಮಾಡಲಾರಂಭಿಸಿವೆ.
ಯಾವದೇ ದೊಡ್ಡ ಉದ್ದಿಮೆ ಅಥವಾ ಕೈಗಾರಿಕಾ ಕಾರ್ಖಾನೆಯು ತನ್ನ ತ್ಯಾಜ್ಯವನ್ನು ಸಂಸ್ಕರಿಸದೇ ಹೊರಕ್ಕೆ ಕಳುಹಿಸಿ ಪರಿಸರಕ್ಕೆ ಹಾನಿ ಮಾಡುವಂತಿಲ್ಲ. ಸಂವೇದಕಗಳು ಸೂಚಿಸುವ ದತ್ತಾಂಶವನ್ನು ಪ್ರಧಾನ ಮಂತ್ರಿಯ ಕಾರ್ಯಾಲಯ ಸೇರಿ ಏಳು ಕಡೆ ಕೂಲಂಕಷವಾಗಿ ಗಮನಿಸಲಾಗುತ್ತದೆ.
ಯಾವುದೇ ಸಂವೇದಕವು ನಿಗಧಿತ ಮಟ್ಟಕ್ಕೆ ತಾಳೆಯಾಗದ ತ್ಯಾಜ್ಯ ನೀರಿನ ಗುಣಮಟ್ಟವನ್ನು ಪತ್ತೆ ಮಾಡಿದಲ್ಲಿ, ಎಲ್ಲಾ ಅಧಿಕಾರಿಗಳಿಗೆ ಎಸ್ಎಂಎಸ್ ಸಂದೇಶ ಕಳುಹಿಸುತ್ತದೆ. ಆ ಉದ್ದಿಮೆಯ ಮಾಲೀಕರು ೨೪ ಘಂಟೆಗಳೊಳಗೆ ಇದಕ್ಕೆ ಸವಿವರವಾಗಿ ಉತ್ತರ ನೀಡಬೆಕು. ಇಲ್ಲದಿದ್ದಲ್ಲಿ ಸ್ವಯಂಚಾಲಿತ ನೋಟಿಸ್ ಜಾರಿಗೊಳಸಲಾಗುತ್ತದೆ.
ಒಂದು ವಾರದೊಳಗೆ ಉತ್ತರಿಸದಿದ್ದಲ್ಲಿ ಅಥವಾ ನೀಡಿದ ಉತ್ತರ ಅಸಮಂಜಸವಾಗಿರದಿದ್ದಲ್ಲಿ, ಕಾನೂನಿನಡಿ ಕ್ರಮ ಕೈಗೊಂಡು ಜಲಸಂಪರ್ಕವನ್ನು ಕಡಿತಗೊಳಿಸಲಾಗುವುದು. ಈ ವ್ಯವಸ್ಥೆಯು ಹಾಳುಗೆಡಹದಂತಹ ಸಂವೇದಕಗಳಡಿ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಈ ಸಂವೇದಕಗಳು ಕ್ಯಾಮೆರಾಗಳನ್ನು ಹೊಂದಿರುತ್ತವೆ.
