ಇಂದು 100 ಪಿಪಿಇ ಕಿಟ್ ಗಳನ್ನು ರೋಟರಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಾಗರ ಇವರು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾನ ನೀಡಿದರು.
ಕೆ.ಎಸ್. ಈಶ್ವರಪ್ಪ ಗ್ರಾಮೀಣ ಮತ್ತು ಪಂಚಾಯತಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಎಂ. ಎಲ್.ಎ. ಹಾಲಪ್ಪ ಇವರುಗಳ ಉಪಸ್ಥಿತಿಯಲ್ಲಿ ರೋಟರಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಾಗರ ಮೂಲಕ ಸುಮಾರು 100 ಪಿಪಿಇ ಕಿಟ್ ಗಳನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕೊಡಲಾಯಿತು.
ರೋಟರಿ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನ ಅಧ್ಯಕ್ಷರಾದ ಹೆಚ್. ಎಂ. ಶಿವಕುಮಾರ್ ಸಾಗರ, ಉಪವಿಭಾಗ ಅಧಿಕಾರಿ ನಾಗರಾಜ್ ಸಾಗರ, ಡಾ.ಮೋಹನ್ ಮತ್ತು ಡಾ. ಬೋನ್ಸಲೇ ಹಾಗೂ ವೈಶಾಲಿ ಎಮ್. ಎಲ್. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದರು.

By Goutham K S , Sagara
