ಮೇಕ್ ಇನ್ ಇಂಡಿಯಾ ಗೆ ಉತ್ತೇಜನ ನೀಡಲು ಮಾನ್ಯ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಸಾಗರ ಕ್ಕೆ ಹೊಂದಿಕೊಂಡಂತೆ ಸುತ್ತಮುತ್ತಲಿನ ತಾಲ್ಲೂಕಿನ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಒದಗಿಸಲು, ನಿರುದ್ಯೋಗ ಸಮಸ್ಯೆ ನಿರ್ಮೂಲನೆ, ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲ್ಯ ಪಡೆಯಲು
ಸಾಗರ ತಾ. ನಲ್ಲಿ “ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ” (GT&TC) ಮಂಜೂರು ಮಾಡುವಂತೆ ಮಾನ್ಯ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪ ನವರಿಗೆ ಮನವಿ ಮಾಡಿದ್ದರು, ಶಾಸಕರ ಕೋರಿಕೆ ಮೇರೆಗೆ ಮುಖ್ಯಮಂತ್ರಿಗಳು ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ. ಅದರ ಮುಂದುವರೆದ ಭಾಗವಾಗಿ
ಇಂದು (09-06-2020) ಶಾಸಕರು ಉಪವಿಭಾಗಾಧಿಕಾರಿಗಳೊಂದಿಗೆ ನಾಡ ಮಂಚಾಲೆ ಕಾನುಗೋಡು ಗ್ರಾಮದಲ್ಲಿ ಸ್ಥಳ ಪರಿಶೀಲನೆ ನೆಡೆಸಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ವಿನಾಯಕ್ ರಾವ್, ಚೇತನ್ ರಾಜ್ ಕಣ್ಣೂರು, ಬಿ.ಟಿ.ರವೀಂದ್ರ, ಗೌತಮ್ ವಕೀಲರು, ಪ್ರಭಾಕರ್ ಶೆಟ್ರು, ರಾಘವೇಂದ್ರ, ವಿನಯ್, ಪ್ರಾಂಶುಪಾಲರಾದ ಸುರೇಶ್, ಮತ್ತು ಕಿರಣ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
By Goutham K S, Sagara