ಸಾಗರದ ಜನಪರ ಸಂಘಟನೆ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಸಾಗರದ ಹಲವು ಭಾಗಗಳಲ್ಲಿ ಕೊರೊನಾ ಕಾರಣದಿಂದ ಮಾಡಲಾದ ಲಾಕ್ಡೌನ್ ನ್ನು ಖಂಡಿಸಿ ಮನವಿಯನ್ನು ಆಗರದ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೆ. ವಿಜಯಕುಮಾರ್ ಲಾಕ್ಡೌನ್ ಸಮಯದಲ್ಲಿ ಸಾಗರದ ಅನೇಕ ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ಸರಕಾರದ ನಿಯಮದಂತೆ ಕೊರೊನಾ ಪಾಸಿಟಿವ್ ಬಂದ ಮನೆಗೆ ಅಥವಾ ಕಚೇರಿ ಅಥವಾ ಆ ಜಾಗವನ್ನು ಸಿಲ್ ಡೌನ್ ಮಾಡಬೇಕು ಎಂದು ಹೇಳಿದರು.
ವೇದಿಕೆಯ ನಗರ ಅಧ್ಯಕ್ಷ ರಾಜು ಬಿ. ಮಡಿವಾಳ ಮಾತನಾಡಿ, ಸಿಲ್ ಡೌನ್ ಸಮಯದಲ್ಲಿ ಸಣ್ಣ ವ್ಯಾಪಾರಸ್ಥರು, ಬಡವರು ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ದಿನಗೂಲಿ ಮಾಡುವ ಕಾರ್ಮಿಕರು ಕೆಲಸವಿಲ್ಲದೇ ಜೀವನ ನಡೆಸಲು ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿಸಲು ಕೂಡಲೇ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಶಾ ನಾಗರಾಜ, ಸೌಭಾಗ್ಯ, ಪಾರ್ವತಮ್ಮ, ಶ್ರೀಧರ, ನಾಗರಾಜ ಮೂರನೇಕಣ್ಣು, ಪದ್ಮನಾಭ, ದಿನೇಶ ಇನ್ನಿತರರು ಹಾಜರಿದ್ದರು.
By Goutham K S, Sagara