ಸಾಗರ ತಾಲ್ಲೂಕಿನಲ್ಲಿ ಇಂದು(05/07/2020) ಇಬ್ಬರು ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಬರೂರಿನ 28 ವರ್ಷದ ಮಹಿಳೆ ಹಾಗೂ ಪಟ್ಟಣದ ನಿಂಬು ಸರ್ಕಲ್ ನ 27 ವರ್ಷದ ಯುವತಿಯಲ್ಲಿ ವೈರಸ್ ಪತ್ತೆಯಾಗಿದೆ.
ಬರೂರಿನ ಮಹಿಳೆ ಮುಂಬೈಯಿಂದ ನೇರವಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲಾ.
ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿ ಮೂಲದ ಮಹಿಳೆ ಇಲ್ಲಿನ ಮೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು,ಎರಡು ದಿನದ ಹಿಂದಯಷ್ಟೇ ಊರಿನಿಂದ ಮರಳಿದ್ದು,ಕಚೇರಿ ಸೀಲ್ ಡೌನ್ ಆಗಿರುವುದರಿಂದ ಮನೆಯಲ್ಲೇ ಉಳಿದುಕೊಂಡಿದ್ದರು.
ಆದರೂ ಮುನ್ನಚ್ಚರಿಕೆಯಾಗಿ ತಾಲ್ಲೂಕು ಆಡಳಿತ ಅವರು ವಾಸವಿದ್ದ ನಿಂಬು ಸರ್ಕಲ್ ಸೀಲ್ ಡೌನ್ ಆಗಿದೆ.
ಒಟ್ಟು ಇಂದು ಎರಡು ಪ್ರಕರಣ ಸೇರಿ ತಾಲ್ಲೂಕಿನಲ್ಲಿ ಒಂಭತ್ತು ಪ್ರಕರಣ ದಾಖಲಾದಂತೆ ಆಗಿದೆ.
Source- Imran Sagar

By Goutham K S, Sagara
