ಇಂದು (29-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಡಿ.ಸಿ.ಎಂ (ಐ.ಟಿ-ಬಿ.ಟಿ ಸಚಿವರು) ಶ್ರೀ ಅಶ್ವಥ್ ನಾರಾಯಣ್ ರವರನ್ನು ಭೇಟಿಯಾಗಿ
ಕೊರೋನ ಪ್ರಯುಕ್ತ Work from home ನಲ್ಲಿ ಗ್ರಾಮೀಣ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ನೆಟ್ ವರ್ಕ್ ಸಮಸ್ಯೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಈ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಚರ್ಚಿಸಿದರು.
ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಡಿ.ಸಿ.ಎಂ ರವರು ಜಿಯೋ ಸೇರಿದಂತೆ ಇತರೆ ನೆಟ್ ವರ್ಕ್ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಲು ದಿ.01-06-2020 ರ ಸೋಮವಾರ ಸಭೆ ನಿಗದಿ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಸಮಸ್ಯೆಗೆ ಪರಿಹಾರ ಕೈಗೊಳ್ಳುವ ಭರವಸೆ ನೀಡಿದರು.

By Goutham K S, Sagara
