ಯಡೂರಪ್ಪರ ಬಹುದಿನದ ಕನಸು ನನಸು
ಶಿವಮೊಗ್ಗ ಜಿಲ್ಲೆಯವರಾದ ಮುಖ್ಯಮಂತ್ರಿ ಯಡೂರಪ್ಪನವರಿಗೆ ತಮ್ಮ ತವರು ಜಿಲ್ಲೆ ಅಭಿವೃದ್ದಿ ವಿಚಾರದಲ್ಲಿ ಅಪಾರ ಶ್ರಮ ಪಡುತ್ತಾರೆ.
ಜಿಲ್ಲೆಯ ಶಿವಮೊಗ್ಗ ತಾಳಗುಪ್ಪ ಬ್ರಾಡ್ಗೇಜ್ ರೈಲು ಮಾಗ೯ ಪರಿವತ೯ನೆ ರೈಲು ಪುನರ್ ಸಂಚಾರ ಮರೀಚಿಕೆ ಅನ್ನಿಸಿ ದಶಕಗಳ ಕಾಲ ಈ ಮಾಗ೯ದಲ್ಲಿ ರೈಲು ಸಂಚಾರ ನಿಂತಿದ್ದು ಯಡೂರಪ್ಪನವರ ಇಚ್ಚಾಶಕ್ತಿಯ ರಾಜಕಾರಣದಿಂದ ಪುನರ್ ಪ್ರಾರಂಭ ಆಗಿದ್ದು ಇತಿಹಾಸ.
ಇದೇ ರೀತಿ ಸಾಗರ ತಾಲ್ಲೂಕಿನ ತುಮರಿ ಸೇತುವೆ ಶರಾವತಿ ಯೋಜನೆ ಪ್ರಾರಂಭದಿಂದ ಜನರ ಒತ್ತಾಸೆ ಆಗಿದ್ದರೂ ಯಡೂರಪ್ಪನವರು ಈ ಹಿಂದೆ ಮುಖ್ಯಮಂತ್ರಿ ಆದಾಗ ಶಂಕುಸ್ಥಾಪನೆ ಮಾಡಿದ್ದರೂ ಕಾಯ೯ಗತ ಆಗಿರಲಿಲ್ಲ ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ತುಮರಿ ಸೇತುವೆ ಟೆಂಡರ್ ಪ್ರಕ್ರಿಯೆ ಮುಗಿದು ಈಗ ಕಾಮಗಾರಿ ಪ್ರಾರಂಭ ಆಗಿದೆ.
ಇದೇ ರೀತಿ ಯಡೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗಲೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭ ಮಾಡಲು ಪ್ರಯತ್ನಿಸಿದ್ದು ಗುತ್ತಿಗೆದಾರರ ಸಮಸ್ಯೆಯಿ೦ದ ನಿಂತೇ ಹೋಗಿತ್ತು.
ಈಗ ಯಡೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣ ಶೀಘ್ರವಾಗಿ ನಿಮಿ೯ಸಲು ಹಣ ಬಿಡುಗಡೆ ಮಾಡಿದ್ದಾರೆ ನಿಂತು ಹೋಗಿದ್ದ ಕಾಮಗಾರಿ ಪ್ರಾರಂಭ ಆಗಿದೆ ಕೆಲ ದಿನದಲ್ಲಿ ಅಧಿಕೃತ ಶಂಕುಸ್ಥಾಪನೆ ಆಗಲಿದೆ ಎಂಬ ಸುದ್ದಿ ಇದೆ.
ಎಲ್ಲವೂ ಸಸೂತ್ರವಾಗಿ ನಡೆದರೆ 2021 ರಲ್ಲಿ ಶಿವಮೊಗ್ಗಕ್ಕೆ ವಿಮಾನ ಹಾರಾಡಲಿದೆ.
By Arun Prasad
.