ಲಾಕ್ಡೌನ್ಲಿಕ್ಕರ್ಮಾರಾಟಾರದ್ದುಈಮಧ್ಯೆಇದಕ್ಕೆಕಾರಣವಾದಹೆಸರಿನಮದ್ಯವು
ಈಮೊದಲೆ
_ಮಾರುಕಟ್ಟೆಯಲ್ಲಿತ್ತೆ೦ದರೆ!?
ಕೊರಾನಾ ವೈರಸ್ ಗಿ೦ತ ಮದ್ಯದಂಗಡಿ ಬಂದ್ ಆಗಿದ್ದು ಕುಡುಕರಿಗೆ ಶೋಖ ಉoಟು ಮಾಡಿದರೆ, ಕುಡಿಯುವವರಿಗೆ ನಿರಾಸೆ ಉoಟು ಮಾಡಿದೆ ಆದರೆ ಮಧ್ಯಪಾನ ವಿರೋದಿಗಳಿಗೆ ಮಾತ್ರ ಸಂತೋಷ ತಂದಿದೆ.
14ಕ್ಕೆ ಪ್ರಾರಂಭ ಮಾಡುತ್ತಾರೆ, 15ಕ್ಕೆ ಶುರುವಾಗುತ್ತೆ, ಮಧ್ಯದ ಅಂಗಡಿ ಎದರು ಸಾಮಾಜಿಕ ಅಂತರದ ರಂಗೋಲಿ ಹಾಕಿದ್ದಾರೆ, ಬ್ಯಾರಿಕೇಡ್ ಹಾಕಿದ್ದಾರೆ ಅಂದಿದ್ದೇ ಬಂತು 20 ರ ನಂತರ ನೋಡೊಣ ಅಂತ ಮುಖ್ಯಮಂತ್ರಿಗಳು ಮುಂದೆ ಹಾಕಿದರು.
ಕೊರಾನಕ್ಕಿOತ ಮದ್ಯ ಇಲ್ಲದೆ ಹೆಚ್ಚು ಜನ ಸತ್ತಿದಾರೆ ಅಂದರೂ ಸಕಾ೯ರ ಕಿಮಕ್ ಅಂದಿಲ್ಲ, ಇದರ ಬಗ್ಗೆ ಹೈಕೋಟ್೯ಗೆ ಅಜಿ೯ ಹಾಕಿದ ವೈದ್ಯರಿಗೆ 10 ಸಾವಿರ ದಂಡ ಹಾಕಿದ್ದಾರೆ.
ಮನೆಗೆ ಕನ್ನ ಹಾಕೋ ಕಳ್ಳತನ ನಡೀದೇ ಇದ್ದರು ಮದ್ಯದ ಅಂಗಡಿಗೆ ಕನ್ನ ಹಾಕಿದ ಹತ್ತಾರು ಪ್ರಕರಣ ಆದರೂ ಇದರ ಮಧ್ಯ ಕೆಲವರು ಮೇ 3ನೇ ತಾರೀಖಿನ ತನಕ ಮಧ್ಯದ ಅಂಗಡಿ ತೆರೆಯ ಬಾರದೆಂದು ಅಜಿ೯ ಹಾಕಿದ್ದಾರೆ.
ಹಳ್ಳಿಗಳಲ್ಲಿ ಬೆಲ್ಲದಿ೦ದ ತಯಾರಿಸುವ ಕಳ್ಳ ಬಟ್ಟಿಗಳು 20 ವಷ೯ದ ನಂತರ ಪುನಃ ಪ್ರಾರಂಭ ಆಗಿದೆ ದುಬಾರಿ ಬೆಲೆ ಆದರೂ ಕುಡಿಯೋರು ಕುಡಿತಾ ಇದಾರೆ.
ಮುಡಿಗೆರೆಯಲ್ಲಿ ಕಾಡಿನ ಪೊದೆಯಲ್ಲಿ ಅಡಗಿಸಿಟ್ಟು ದಿನಾ ರಾತ್ರಿ ಹೋಗಿ ಕುಡಿಯುತ್ತಿದ್ದ ಕಾಫಿ ಬೆಳೆಯೋ ರೈತರು ಕತ್ತಲಲ್ಲಿ ಕೈ ಹಾಕಿ ಹಾವಿOದ ಕಚ್ಚಿಸಿಕೊಂಡಿದ್ದಾರೆ ಅವರ ರಕ್ಷಣೆಗೆ ಹೋದವರು ಉಳಿದ ಸ್ಟಾಕ್ ಗುಳುಂ ಮಾಡಿದ್ದಾರಂತೆ.
ಹೀಗೆ ನೂರೆಂಟು ಮಧ್ಯದ ಸ್ವಾರಸ್ಯದ ಕಥೆ ಮಧ್ಯ ಮಧ್ಯದ ಅಂಗಡಿ ಮೇ 3ರ ತನಕ ಪ್ರಾರ೦ಭ ಆಗುವುದಿಲ್ಲ ಎಂಬುದು ಮಾತ್ರ ಖಾತ್ರಿ ಆಗಿದೆ.
ಇದಕ್ಕೆಲ್ಲ ಕಾರಣ ಕೊರಾನಾ ವೈರಸ್ ಮತ್ತು ಲಾಕ್ ಡೌನ್ ಅಂತ ಹಲ್ಲು ಕಡಿಯುತ್ತಾರೆ ಮದ್ಯಪಾನ ಪ್ರಿಯರು ಆದರೆ ಕೊರಾನಾ, ವೈರಸ್ ಮತ್ತು ಲಾಕ್ ಡೌನ್ ಅಂತ ಸ್ಕಾಚ್ ವಿಸ್ಕಿ ಮಾಕೆ೯ಟ್ನಲ್ಲಿ ಮೊದಲೇ ಇತ್ತು ಅನ್ನುವುದು ಸೋಜಿಗ ಆದರೂ ಸತ್ಯ ಈ ಬಾಟಲಿ ನೋಡಿ.
By Arun Prasad