ಈ ದಿವಸ ನಾನು ವರ್ಗಾವಣೆ ಆಗಿ ಇಲ್ಲಿಂದ ತೆರಳುತ್ತಿದ್ದೇನೆ. ಇಲ್ಲಿಯ ನನ್ನ ಸೇವೆಯ ಅವಧಿಯಲ್ಲಿ ನೀವುಗಳು ನನಗೆ ತೋರಿದ ಅಪಾರ ಪ್ರೀತಿ, ಗೌರವ ಹಾಗೂ ಅಭಿಮಾನಕ್ಕೆ ನಾನು ಚಿರರುಣಿ, ನನ್ನ ಕರ್ತವ್ಯದ ಅವದಿಯಲ್ಲಿ ನನ್ನೊಂದಿಗೆ ಆತ್ಮೀಯವಾಗಿ ಸಹಕರಿಸಿದ್ದೀರಿ, ಅನೇಕ ಕ್ಲಿಷ್ಟಕರ ಸಮಸ್ಯೆಗಳು ಬಂದಾಗ ನನ್ನೊಂದಿಗೆ ನಿಂತು ಶಾಂತಿ- ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರ ನೀಡಿದ್ದೀರಿ.. ಬದುಕ ಪ್ರಯಾಣ ಎತ್ತ ಸಾಗುತ್ತದೆ ಎಂಬುದನ್ನು ನಾನರಿಯೆ?, ಜೀವನದ ಕವಲು ದಾರಿಯಲ್ಲಿ ಮುಂದೇನಾದರೂ ನನ್ನ ಭೇಟಿಯಾದಾಗ ನಿಮ್ಮ ಮೊಗದಲ್ಲಿ ಮಂದಹಾಸದ ಕೋಲ್ಮಿಂಚು ನನಗೆ ಕಾಣುವಂತಾಗಲಿ..
ನನಗೆ ಸಮಯವಕಾಶದ ಕೊರತೆ ಇರುವ ಕಾರಣ ಎಲ್ಲರನ್ನು ವೈಯಕ್ತಿಕವಾಗಿ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ , ಅನ್ಯಥಾ ತಿಳಿಯದೆ ತಮ್ಮವರಿಗೆ ಈ ಸಂದೇಶವನ್ನು ತಲಪಿಸಿ.ನನ್ನ ಅನಂತ ಅನಂತ ಧನ್ಯವಾದಗಳು.. ಕೊನೆಯದಾಗಿ ಕವಿವಾಣಿ ಹೇಳುವಂತೆ ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ.?
ತಮ್ಮವ..
ಮಹಾಬಲೇಶ್ವರ ಎಸ್‌ಎನ್
ಪೊಲೀಸ್ ಇನ್ಸ್ಪೆಕ್ಟರ್
By Sisel P Soman