ಸಾವಯವ ಕೃಷಿಯ ಹರಿಕಾರ ಎಲ್ ನಾರಾಯಣ ರೆಡ್ಡಿ (೮೩) ಇಂದು ವಿಧಿವಶರಾದರು.
ತಮ್ಮ ಜೀವನದ ಕೊನೆ ತನಕ ಎಲ್ ನಾರಾಯಣ ರೆಡ್ಡಿ ಅವರು ಪ್ರತಿ ವಾರಾಂತ್ಯವೂ ದೊಡ್ಡಬಳ್ಳಾಪುರದ ತಾಲೂಕಿನಲ್ಲಿನ ತಮ್ಮ ತೋಟದಲ್ಲಿ ಸಾವಯವ ಕೃಷಿಯ ಬಗ್ಗೆ ತರಗತಿ-ತರಬೇತಿ ನೀಡುತ್ತಿದ್ದರು.
ತಮ್ಮ ಚಿಕ್ಕ ವಯಸ್ಸಿನಲ್ಲೇ ಹಳ್ಳಿಯಿಂದ ಓಡಿ ಹೋದ ರೆಡ್ಡಿ ತಮ್ಮ ಮೊಟ್ಟಮೊದಲ ಕೆಲಸ ಮಾಡಿದ್ದು ಸ್ಥಳೀಯ ಉಪಾಹಾರ ಮಂದಿರದಲ್ಲಿ ಸ್ಚಚ್ಛತಾ ಸಿಬ್ಬಂದಿಯಾಗಿ. ಆನಂತರದ ವರ್ಷಗಳಲ್ಲಿ ಅವರು ಶಾಲಾ ವಿದ್ಯಾಭ್ಯಾಸ ಮುಗಿಸಿ, ಟೈಪಿಂಗ್ ಕಲಿತರು. ಕಾರ್ಯಾಲಯವೊಂದರಲ್ಲಿ ಸಹಾಯಕರಾಗಿ ನೌಕರಿ ಮಾಡಿ, ಒಬ್ಬ ವ್ಯವಸ್ಥಾಪಕರಾಗಿ ಬಡ್ತಿ ಪಡೆದರು.
ತಮಗೆ ಬಂದ ಉಳಿತಾಯದ ಹಣದಲ್ಲಿ ತಮ್ಮ ಹುಟ್ಟೂರಾದ ಸೊರಹುಣಸೆಯಲ್ಲಿ ಜಮೀನು ಕೊಂಡುಕೊಂಡರು. ಇಲ್ಲಿ ರಾಗಿ ಮತ್ತು ಮೆಕ್ಕೆ ಜೋಳ ಬೆಳೆಸಿದರು. ಇವುಗಳಿಗೆ ರೆಡ್ಡಿಯವರು ರಾಸಾಯನಿಕಗಳು-ಕೀಟನಾಶಕಗಳು ಬಳಕೆಯಾಗುವ ಸಾಮಾನ್ಯ ಕೃಷಿ ಮಾಡಿದರು.
“ನಾನು ಕೃಷಿ ವಿಶ್ವವಿದ್ಯಾನನಿಲಯ ಸೇರಿ ತಪ್ಪು ಮಾಡಿದೆ. ನಾನು ರಾಸಾಯನಿಕ ಕೃಷಿಯಿಂದ ಹೆಚ್ಚು ಇಳುವರಿ ಪಡೆದೆ. ೧೯೭೬ರಲ್ಲಿ ದೇಶದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಗಳಿಸಿದೆ” ಎಂದರು.
ಅಶ್ರಮವೊಂದರಲ್ಲಿ ನಾಸಾ (NASA) ವಿಜ್ಞಾನಿಯೊಬ್ಬರನ್ನು ಭೇಟಿಯಾದಾಗ ರೆಡ್ಡಿಯವರ ಜೀವನವೇ ಬದಲಾಯಿತು. ಈ ನಾಸಾ ವಿಜ್ಞಾನಿ ರೆಡ್ಡಿಯವರಿಗೆ ಜಪಾನಿ ಸಾವಯವ ಕೃಷಿ ಹರಿಕಾರ ಮಸನೊಬು ಫುಕುವೊಕಾ ಅವರ “One Straw Revolution” ಪುಸ್ತಕದ ಪ್ರತಿಯೊಂದನ್ನು ಕೊಟ್ಟರು.
ಈ ಪುಸ್ತಕ ರೆಡ್ಡಿಯವರ ಮೇಲೆ ಅದೆಷ್ಟು ಪ್ರಭಾವ ಬೀರಿತು ಎಂದರೆ, ಅವರು ಅದನ್ನು ಪದೇ ಪದೇ ಓದಿ ರಾಸಾಯನಿಕಗಳ ಕೃಷಿಯಿಂದ ಸಾವಯವ ಕೃಷಿಯತ್ತ ಪರಿವರ್ತಿಸುವಂತೆ ಪ್ರೋತ್ಸಾಹಿಸಿತು. ೧೯೭೯ರಲ್ಲಿ ರೆಡ್ಡಿ ಸಂಪೂರ್ಣವಾಗಿ ಸಾವಯವ ಕೃಷಿಕರಾಗಿದ್ದರು. ಸಾವಯವ ಕೃಷಿಯು ಜಮೀನು ಸಂರಕ್ಷಣೆಯಲ್ಲಿ ಮಹತ್ವ ಪಾತ್ರ ವಹಿಸಿತಾದರೂ, ರೆಡ್ಡಿಯವರ ಕಲ್ಪನೆಗಳನ್ನು ತಜ್ಞರು ತಳ್ಳಿಹಾಕುತ್ತಿದ್ದರು.
ಸಾವಯವ ಕೃಷಿಯು ಕ್ರಮೇಣ ಹೆಚ್ಚು ಇಳುವರಿ ತಂದುಕೊಟ್ಟಿತು. ಇತರೆ ರೈತರು-ತಜ್ಞರ ಟೀಕೆಗಳನ್ನು ಲೆಕ್ಕಿಸದೇ ರೆಡ್ಡಿ ಮತ್ತು ಅವರ ಹೆಂಡತಿ ಸ್ಥಳೀಯ ನೀರಾವರಿ ವ್ಯವಸ್ಥೆಯ ಮೂಲಕ ತಮ್ಮ ಕೃಷಿಯಲ್ಲಿ ಮುಂದುವರೆದರು. ಕಡಲೆಕಾಯಿ, ಸಪೋಟ, ಶೇಂಗಾ, ಕಾಫಿ, ಸೀಬೆ, ಮತ್ತು ಇತರೆ ಪಸಲುಗಳನ್ನು ಬೆಳೆಸಿದರು.
೧೯೮೮ರಲ್ಲಿ ಫುಕುವೊಕಾ ರೆಡ್ಡಿಯವರ ತೋಟಕ್ಕೆ ಬೇಟಿ ನೀಡಿದಾಗ ರೆಡ್ಡಿಯವರಿಗೆ ಮಹತ್ತರ ದಿನವಾಯಿತು. ೧೯೯೨ರಲ್ಲಿ ಯುರೋಪೀಯ ಆಯೋಗವು ರೆಡ್ಡಿಯವರಿಗೆ ಬೆಲ್ಜಿಯಮ್‌ನ ಬ್ರಸೆಲ್ಸ್‌ನಲ್ಲಿ ಸಾವಯವ ಕೃಷಿಯ ಬಗ್ಗೆ ಸೆಮಿನಾರ್ ನಡೆಸಿಕೊಡಲು ಆಮಂತ್ರಣ ನೀಡಿತು. ಕನ್ನಡ ದೈನಿಕ ಪ್ರಜಾವಾಣಿಗಾಗಿ ಸಾವಯವ ಕೃಷಿ ಮತ್ತು ಅದರ ಅನುಕೂಲಗಳ ಬಗ್ಗೆ ಅಂಕಣ ಬರೆಯುತ್ತಿದ್ದರು.
“ಸಾವಯವ ಕೃಷಿ ತಮ್ಮ ಜೀವನದ ದೊಡ್ಡ ಮೈಲಿಗಲ್ಲಾಗಿತ್ತು. ವಿಶ್ವದೆಲ್ಲೆಡಿಂದ ರೈತರು ಅವರನ್ನು ಭೇಟಿಯಾಗುತ್ತಿದ್ದರು. ಮದುವೆಯಂತಹ ಸಮಾರಂಭವಿದ್ದಾಗಲೂ ಇವರು ಸಾವಯವ ಕೃಷಿ ತರಗತಿ ನಡೆಸುತ್ತಿದ್ದರು” ಎಂದು ರೆಡ್ಡಿಯವರ ಮಗ ಜಗದೀಶ್ ಹೇಳಿದರು.
