ಮುಂಬೈಯಿಂದ ಸಾಗರ ತಾಲ್ಲೂಕಿನ ತುಮರಿಗೆ ಸೇರಿದ ಚೆನ್ನಗುಂಡ ಗ್ರಾಮಕ್ಕೆ ಆಗಮಿಸಿದ ವ್ಯಕ್ತಿಯೊಬ್ಬನಲ್ಲಿ ಕೊರೋನಾ ಸೊಂಕು ಕಾಣಿಸಿಕೊಂಡಿದೆ,ಆ ವ್ಯಕ್ತಿಯ ಗಂಟಲು ದ್ರವ ಪರೀಕ್ಷಿಸಿದಾಗ ಸೊಂಕು ಇರುವುದು ದೃಡಪಟ್ಟಿದೆ.
ಈ ವ್ಯಕ್ತಿ ಮುಂಬೈಯಿಂದ ಗ್ರಾಮಕ್ಕೆ ಬಂದು ಮೂರು ದಿನಗಳ ಕಾಲ ಗ್ರಾಮವೆಲ್ಲಾ ಓಡಾಡಿ ಮದುವೆ ಸಮಾರಂಭಗಳಲ್ಲಿ ಪಾಲುಗೊಂಡಿದ್ದಾನೆ ಎನ್ನುವ ಮಾಹಿತಿ ಈಗ ಹೊರಗೆ ಬಿದ್ದಿದೆ,ಹಾಗೆ ಆತನ ಸ್ನೇಹಿತರೊಂದಿಗೆ ಕೂಡಿ ಅನೇಕ ಕಡೆ ಓಡಾಡಿರುವ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಸಾಗರ ತಾಲ್ಲೂಕಿನ ಜನರು ಆದಷ್ಟು ಮುಂಜಾಗ್ರತೆಯನ್ನು ವಹಿಸಬೇಕೆಂದು ತಾಲ್ಲೂಕು ಆಡಳಿತವು ಮನವಿ ಮಾಡಿಕೊಂಡಿದೆ.

By Goutham K S, Sagara
