ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭಯೋತ್ಪಾದನಾ ಕೃತ್ಯವನ್ನು ಖಂಡಿಸುವ ನಿರ್ಣಯ ಕೈಗೊಂಡಿತು. ಈ ನಿರ್ಣಯವನ್ನು ಸ್ಥಾಯಿ ಮತ್ತು ತಾತ್ಕಾಲಿಕ ಸದ್ಯಸ್ಯ ರಾಷ್ಟ್ರಗಳು ಬೆಂಬಲಿಸಿದವು. ಇದು ಭಾರತಕ್ಕೆ ಸಂದ ಮಹತ್ವದ ಗಎಲುವು ಎನ್ನಲಾಗಿದೆ.
ಭಯೋತ್ಪಾದನೆಯನ್ನು ಖಂಡಿಸುವ ನಿರ್ಣಯದಲ್ಲಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯು, ಭಯೋತ್ಪಾದನೆಯ ಆಯೋಜಕರು, ಸಂಘಟನಾಕಾರರು ಮತ್ತು ಮತ್ತು ಪ್ರಾಯೋಜಕರನ್ನು ಹೊಣೆಯಾಗಿಸುವ ಅಗತ್ಯವಿದೆ ಎಂದು ನಿರ್ಣಯದಲ್ಲಿ ತಿಳಿಸಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಶ್ವದ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದೆ. ಯಾವುದೇ ದೇಶವು ಯಾವುದೇ ಉದ್ದೇಶದಿಂದ ಭಯೋತ್ಪಾದನಾ ಕೃತ್ಯ ನಡೆಸಿದರೂ ಅದು ಅತ್ಯಂತ ಹೇಯ ಮತ್ತು ಸಮರ್ಥಿಸಲಾಗದಂತಹ ಕೃತ್ಯ ಎಂದು ಭದ್ರತಾ ಮಂಡಳಿಯ ಎಲ್ಲಾ ಸದಸ್ಯ ರಾಷ್ಟ್ರಗಳೂ ನಿರ್ಣಯಿಸಿದವು.
ಈ ನಿರ್ಣಯಕ್ಕೆ ಪಾಕಿಸ್ತಾನದ ನಿಕಟ ಸ್ನೇಹಿತ ರಾಷ್ಟ್ರ ಎನ್ನಲಾದ ಚೀನಾ ಸಹ ಈ ನಿರ್ಐಯಕ್ಕೆ ಸಂಪೂರ್ಣ ಬೆಂಬಲ ನೀಡಿದೆ.
ಆದರೆ ಯಾವ ರಾಷ್ಟ್ರವೂ ಸಹ ಖಂಡನೆಯ ನಿರ್ಣಯದಲ್ಲಿ ಪಾಕಿಸ್ತಾನವನ್ನು ಹೆಸರಿಸಿಲ್ಲ.
ಫೆಬ್ರುವರಿ ೧೪ರಂದು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆಸಿದ ಆತ್ಮಾಹುತಿ ಧಾಳಿಯಲ್ಲಿ ೪೦ಕ್ಕೂ ಹೆಚ್ಚು ಸಿಆರ್‌ಪಿಎಫ್ ಸೈನಿಕರು ಹುತಾತ್ಮರಾದರು. ಈ ಕೃತ್ಯ ನಡೆದ ಸ್ವಲ್ಪ ಸಮಯದ ನಂತರ ಜೈಷ್-ಎ-ಮೊಹಮ್ಮದ್ ಹೊಣೆಗಾರಿಕೆ ಒಪ್ಪಿಕೊಳ್ಳುವ ಹೇಳಿಕೆ ನೀಡಿತು.
