ಸಿದ್ಧಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ೨೨/೧೦/೧೯೬೭ರಲ್ಲಿ ಮೈಸೂರಿನಲ್ಲಿ ಮಾಡಿದ ಭಾಷಣವೊಂದರ ಮುಖ್ಯಾಂಶಗಳು ಇಲ್ಲಿವೆ:
“ವಿಶ್ವದ ಮಾನವ ಕುಲದ ಕಲ್ಯಾಣಕ್ಕಾಗಿ ಹಿಂದೂ ಧರ್ಮದ ರಕ್ಷಣೆಯಾಗಿ, ಅದು ಪ್ರವರ್ಧಿಸಬೇಕು. ಇಲ್ಲದಿದ್ದರೆ ಮಾನವ ಕುಲದ ಪತನ ಮತ್ತು ಸರ್ವನಾಶ ನಿಶ್ಚಿತ”
“ಭಾರತದಲ್ಲಿರುವ ಹಿಂದೂಗಳಲ್ಲಿ ಹಿಂದುತ್ವದ ಅಭಿಮಾನವನ್ನು ಜಾಗೃತಗೊಳಿಸಿ, ಅವರನ್ನು ಸಂಘಟಿಸುವುದರ ಜೊತೆಗೆ, ವಿಶ್ವದಾದ್ಯಂತ ಹರಡಿರುವ ಹಿಂದೂಗಳಿಗೆ ಸ್ಫೂರ್ತಿ, ಚೈತನ್ಯ ನೀಡುವ ಕಾರ್ಯ ಆದಾಗಲೇ ಅರವಿಂದರ ಭವಿಷ್ಯವು ಸತ್ಯವಾಗಲಿದೆ” (ಶ್ರೀಗಳವರಿಂದ ಯೋಗಿ ಅರವಿಂದರ ವಾಣಿಯ ಉಲ್ಲೇಖ)
“ಭಾರತದಲ್ಲಿ ಕಂಡುಬರುವ ಆರ್ಥಿಕ ದಾರಿದ್ರ್ಯಕ್ಕೆ ಹಿಂದೂತ್ವದ ಅಭಿಮಾನ ತಾಳದೆ ಧಾರ್ಮಿಕ ಜೀವನದಿಂದ ದೂರವಾಗಿರುವುದೇ ಕಾರಣ”
“ಹಿಂದೂಧರ್ಮದ ರಕ್ಷಣೆಗೆ ಆಧಾರಭೂಮಿಯಾಗಿರುವ ಏಕೈಕ ರಾಷ್ಟ್ರವೆಂದರೆ ಹಿಂದೂರಾಷ್ಟ್ರ ಮಾತ್ರ. ಮುಸ್ಲಿಮ್ ಮತಕ್ಕೆ ಪೋಷಣೆ ನೀಡುವ ರಾಷ್ಟ್ರಗಳು ಜಗತ್ತಿನಲ್ಲಿ ಹಲವಾರು ಇವೆ. ಅದೇ ರೀತಿ ಕ್ರೈಸ್ತಮತಕ್ಕೂ ಬೆಂಬಲ ನೀಡುವ ರಾಷ್ಟ್ರಗಳಿವೆ. ಆದರೆ ಹಿಂದೂಧರ್ಮಕ್ಕೆ ಇಂದು ಇರುವ ಆಧಾರಭೂತ ರಾಷ್ಟ್ರವೆಂದರೆ ಭಾರತ ಮಾತ್ರ. ಇದೊಂದು ವಾಸ್ತವಿಕ ಸತ್ಯ.”
“ಇಲ್ಲೇ ಹಿಂದುತ್ವದ ಅಭಿಮಾನವು ಅಳಿದರೆ ಹಿಂದೂಗಳು ವಿಶ್ವದಿಂದಲೇ ಅಳಿದುಹೋದಂತೆ ಎಂಬುದನ್ನು ತಿಳಿದು ಈಗಲಾದರೂ ಎಚ್ಚರಗೊಳ್ಳಬೇಕು”
