||ಶ್ರೀ||
||ಸಂಧ್ಯಾವಂದನೆ ಮಾಡೋಣ||ಬ್ರಾಹ್ಮಣರಾಗಿ ಉಳಿಯೋಣ||
ಲಕ್ಷಲಕ್ಷ ವಿಪ್ರ ಬಾಂಧವರಿಂದ ಕೇವಲ ಮೂರು ನಿಮಿಷಗಳ ಅವಧಿಯ ಆಪದ್ಧರ್ಮ
ಮಾನಸಿಕ/ಶಾರೀರಿಕ ತ್ರಿಕಾಲ ಸಂಧ್ಯೋಪಾಸನ ದೀಕ್ಷಾ ಸ್ವೀಕಾರ ಆಂದೋಲನ
ಸಂಯೋಜಕರು: ಶ್ರೀ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಸ್ವಾಮಿಜಿ, ಉಡುಪಿ.
ಸಂಧ್ಯಾವಂದನೆಯ ಸಮಯ
ಬೆಳಿಗ್ಗೆ 5 ರಿಂದ 6 ಘಂಟೆಯೊಳಗೆ (ಬ್ರಾಹ್ಮೀ ಮುಹೂರ್ತ)
ಮಧ್ಯಾಹ್ನ 12 ಘಂಟೆಯಿಂದ 1 ಘಂಟೆಯೊಳಗೆ (ಅಭಿಜಿನ್ಮುಹೂರ್ತ)
ಸಂಜೆ 5ರಿಂದ 6 ಘಂಟೆಯೊಳಗೆ (ಗೋಧೂಳಿ ಮುಹೂರ್ತ)
ಸಮಯಕ್ಕೆ ಸರಿಯಾಗಿ ಸಂಧ್ಯಾವಂದನೆ ಮಾಡಿದರೆ – ‘’ಶ್ರೇಯಾಂಕ(Rank)ದಲ್ಲಿ ಪಾಸ್ ‘’
ಸಮಯಕ್ಕೆ ಸರಿಯಾಗಿ 10 ಜಪ ಮಾಡಿದರೆ – ಹತ್ತು ಸಾವಿರ ಜಪ ಮಾಡಿದ ಫಲ.
ಸಮಯ ಬಿಟ್ಟು ಸಂಧ್ಯಾವಂದನೆ ಮಾಡಿದರೆ – ಜಸ್ಟ್ ಪಾಸ್
ಸಮಯ ಬಿಟ್ಟು 10 ಜಪ ಮಾಡಿದರೆ – ಹತ್ತೇ ಜಪ ಮಾಡಿದ ಫಲ.
ಈಗಾಗಲೇ ವಿಸ್ತಾರಸಂಧ್ಯಾವಂದನೆ ಮಾಡುತ್ತಿರುವವರು ಇದನ್ನು ನೋಡಿ ‘’ಇಷ್ಟೇ ಮಾಡಿದರೂ ಸಾಕು” ಎಂದು ತಮ್ಮ ಸಂಧ್ಯೋಪಾಸನಯನ್ನು ಮೊಟಕುಗೊಳಿಸಬಾರದು.
ಇಂಥವರೂ ಕೂಡ ಬೆಳಿಗ್ಗೆ 6 ಘಂಟೆಗೆ, ಮಧ್ಯಾಹ್ನ 12 ಘಂಟೆಗೆ, ಸಂಜೆ 6 ಘಂಟೆಗೆ ಸರಿಯಾಗಿ ಮೂರು ನಿಮಿಷದ ಸಂಧ್ಯೋಪಾಸನೆಯನ್ನು ಮಾಡಿ ಆನಂತರ ವಿಸ್ತಾರ ಸಂಧ್ಯೋಪಾಸನೆಯನ್ನು ಮಾಡಬಹುದು. ‘’ಅಧಿಕಸ್ಯ ಅಧಿಕಂ ಫಲಂ”.
ತ್ರಿಕಾಲ ಸಂಧ್ಯಾವಂದನೆಯಿಂದ ಏನು ಉಪಯೋಗ:
ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಕಷ್ಟತಾಪತ್ರಯಗಳೆಲ್ಲವೂ ಪರಿಹಾರವಾಗುತ್ತವೆ. ನವಗ್ರಹ ದೋಷಗಳು, ಶನಿದೋಷಗಳು ಎಲ್ಲಾ ಪರಿಹಾರವಾಗುತ್ತವೆ. ಸಾಲಗಳೆಲ್ಲವೂ ತೀರುತ್ತವೆ. ಒಳ್ಳೆಯ ವಿದ್ಯೆ, ನೆನಪಿನ ಶಕ್ತಿ, ಬುದ್ಧಿಶಕ್ತಿಗಳೆಲ್ಲವೂ ಬೆಳೆಯುತ್ತವೆ. ಜ್ಞಾನ, ಶ್ರದ್ಧಾ, ಭಕ್ತಿ, ದುರ್ವಿಷಯಗಳಲ್ಲಿ, ದುಶ್ಚಟಗಳಲ್ಲಿ ಆಸೆ ಕಡಿಮೆಯಾಗಿ ವೈರಾಗ್ಯ ಅಭಿವೃದ್ಧಿಯಾಗುತ್ತವೆ. ಗುರುದೇವತಾ ಅನುಗ್ರಹ ಉಂಟಾಗಿ ಆಯುಷ್ಯ, ಆರೋಗ್ಯ, ಐಶ್ವರ್ಯ, ಸೌಭಾಗ್ಯಗಳು ಹೆಚ್ಚುತ್ತವೆ. ಮನೋವ್ಯಥೆ, ಅಶಾಂತಿ, ದು:ಖ, ಭಯ, ರೋಗರುಜಿನಗಳು, ವಿಘ್ನಬಾಧೆ ಈ ಎಲ್ಲವೂ ಪರಿಹಾರವಾಗುತ್ತವೆ. ಸುಖ-ಶಾಂತಿ, ನೆಮ್ಮದಿ ಸಿಗುತ್ತವೆ.
ಏನಿದರ ಉದ್ದೇಶ?
ಪುರುಸೊತ್ತಿಲ್ಲದೆ, ಸಂಧ್ಯಾವಂದನೆಯ ಮಂತ್ರ ಗೊತ್ತಿಲ್ಲದೆ, ಮಹತ್ವ ಗೊತ್ತಿಲ್ಲದೆ, ಮಡಿ ಪಂಚೆ ಉಟ್ಟುಕೊಳ್ಳಲು, ಅನುಕೂಲವಿಲ್ಲದೆ ಹೀಗೆ ಹಲವಾರು ಕಾರಣಗಳಿಂದ ತ್ರಿಕಾಲ ಸಂಧ್ಯಾವಂದನೆಯನ್ನು ಬಿಟ್ಟಿರುವವರನ್ನು ಈ ಮೂರು ನಿಮಿಷದ ಮಾನಸಿಕ ‘’ತ್ರಿಕಾಲ ಸಂಧ್ಯಾವಂದನೆ’’ಯಲ್ಲಿ ತೊಡಗಿಸಿ ಅವರ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಈ ಆಪದ್ಧರ್ಮ ಸಂಧ್ಯಾವಂದನೆ ಮಂತ್ರಗಳನ್ನು ಸಂಗ್ರಹಿಸಲಾಗಿದೆ.
ಮೂರು ನಿಮಿಷದ ಪುರುಷರ ಸಂಧ್ಯಾವಂದನೆ–
(ಬೆಳಿಗ್ಗೆ 6 ಘಂಟೆ ಸೂರ್ಯೋದಯದೊಳಗೆ, ಸ್ನಾನಮಾಡಿ ಈ ಸಂಧ್ಯಾವಂದನೆ ಮಾಡಿದರೆ ‘’ಬೇಗ ಕಾರ್ಯಸಿದ್ಧಿ’’) ‘’ಶ್ರೀಪುಂಡರೀಕಾಕ್ಷಾಯ ನಮ:’’ ‘’ಗಂಗೇ ಮಾಂ ಪುನೀಹಿ’’ ಎಂದು ಮನಸಿನಲ್ಲಿ ಸ್ಮರಿಸಿಕೊಳ್ಳಿ. ನಾಡಿಗಳಲ್ಲಿರುವ 72 ಸಾವಿರ ಗಂಗಾದಿತೀರ್ಥ ದೇವತೆಗಳೂ, ರೋಮಕೂಪ (ತಗ್ಗು)ಗಳಲ್ಲಿರುವ 3.5 ಕೋಟಿ ತೀರ್ಥ ದೇವತೆಗಳೂ ನಿಮ್ಮನ್ನು ತಕ್ಷಣ ಪವಿತ್ರ ಮಾಡುತ್ತಾರೆ. ಇದರಿಂದ ಗಂಗಾದಿ ಸಮಸ್ತ ತೀರ್ಥಗಳಲ್ಲಿ ಸ್ನಾನಮಾಡಿದಂತಾಗಿ ದೇಹದ ಒಳಗೂ, ಹೊರಗೂ ಪವಿತ್ರರಾಗುತ್ತೀರಿ. ಮುಪ್ಪು ರೋಗ, ಅಶಕ್ತತೆ, ಪ್ರವಾಸ ಮುಂತಾದ ಅನಿವಾರ್ಯ ಕಾರಣಗಳಿಂದ ಬೆಳಿಗ್ಗೆ ಸ್ನಾನ ಮಾಡದಿದ್ದರೂ, ಪ್ಯಾಂಟ್ ಷರ್ಟಿನಲ್ಲಿದ್ದರೂ ಕಾರ್ಯಸ್ಥಳ, ಬಸ್, ಟ್ರೇನ್, ಇತ್ಯಾದಿ ಸ್ಥಳಗಳಲ್ಲಿದ್ದರೂ ಪವಿತ್ರರಾಗುತ್ತೀರಿ. ‘’ಈಶಾವಾಸ್ಯಂ ಇದಂ ಸರ್ವಂ” ನಾವೆಲ್ಲಿದ್ದರೂ ದೇವರ ಮನೆಯೇ, ಪವಿತ್ರಸ್ಥಳವೇ, ಶ್ರದ್ಧೆ ಇಡಿ, ನಂಬಿಕೆ ಇಡಿ, ವಿಶ್ವಾಸ ಇಡಿ.
ಮಾನಸಿಕ ಸೂರ್ಯಾರ್ಘ್ಯ–
ಓಂ ಭೂರ್ಭುವಸ್ವ:|
ತತ್ ಸವಿತುರ್ವರೇಣ್ಯಂ|
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋ ನ: ಪ್ರಚೋದಯಾತ್|
ಸೂರ್ಯನಾರಾಯಣಾಯ ಇದಮರ್ಘ್ಯಂ|
– ಎಂದು ಮೂರು ಸಲ ಮನಸ್ಸಿನಲ್ಲೇ ಹೇಳಿ ಮೂರು ಸಲ ಮನಸ್ಸಿನಲ್ಲೇ ಅರ್ಘ್ಯ ಬಿಡಿ. (ಮನೆಯಲ್ಲಿರುವಾಗ ನೀರಿನಿಂದ ಅರ್ಘ್ಯ ಬಿಡಿ.)
ಗಾಯತ್ರೀ ಜಪ–
ಓಂ ಭೂರ್ಭುವಸ್ವ:|
ತತ್ ಸವಿತುರ್ವರೇಣ್ಯಂ|
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋ ನ: ಪ್ರಚೋದಯಾತ್|
– ಎಂದು ಹನ್ನೊಂದು ಸಲ ಮನಸ್ಸಿನಲ್ಲೇ ಜಪ ಮಾಡಿ. ಕೊನೆಯಲ್ಲಿ “ಸೂರ್ಯ ನಾರಾಯಣಂ ತರ್ಪಯಾಮಿ” ಎಂದು ಮನಸ್ಸಿನಲ್ಲೇ ಒಂದು ಸಲ ತರ್ಪಣ ಕೊಡಿ. (ಮನೆಯಲ್ಲಿರುವಾಗ ನೀರಿನಿಂದ ತರ್ಪಣ ಕೊಡಿ.)
ಗುರುದೇವತಾ ನಮಸ್ಕಾರ–
(ನಿಮ್ಮ ಗೋತ್ರ, ಪ್ರವರ, ಮನಸ್ಸಿನಲ್ಲೇ ಹೇಳಿಕೊಳ್ಳಿ)
ಸಮಸ್ತ ದೇವತಾಭ್ಯೋ ನಮ:|
ಮಾತೃಭ್ಯೋ ನಮ:|
ಪಿತೃಭ್ಯೋ ನಮ:|
ಆಚಾರ್ಯ ಗುರುಭ್ಯೋ ನಮ:|
ಲೋಕಾ: ಸಮಸ್ತಾ: ಸುಖಿನೋ ಭವಂತು|
ಶ್ರೀ ಕೃಷ್ಣಾರ್ಪಣಮಸ್ತು|
ಅಚ್ಯುತಾಯ ನಮ:|
ಅನಂತಾಯ ನಮ:|
ಗೋವಿಂದಾಯ ನಮ: | (ನಾರಾಯಣಾಯ ನಮ:|)
ಪ್ರಾರ್ಥನೆ–
ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಇಷ್ಟಾರ್ಥಗಳ ಸಿದ್ಧಿಯನ್ನೂ ಕಷ್ಟಗಳ ಪರಿಹಾರಗಳನ್ನೂ ದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ದೇವರು ಬೇಗನೆ ಎಲ್ಲಾ ಇಷ್ಟಾರ್ಥಗಳನ್ನು ಕರುಣಿಸಿ ಕಷ್ಟಗಳನ್ನು ಪರಿಹರಿಸುತ್ತಾನೆ.
ಮೂರು ನಿಮಿಷಗಳ ಸ್ತ್ರೀಯರ ಸಂಧ್ಯಾವಂದನೆ–
(ಬೆಳಿಗ್ಗೆ 6 ಘಂಟೆಯೊಳಗೆ ಸ್ನಾನಮಾಡಿ ಈ ಸಂಧ್ಯಾವಂದನೆ ಮಾಡಿದರೆ, ಬೇಗಕಾರ್ಯಸಿದ್ಧಿ)
“ಶ್ರೀ ಪುಂಡರೀಕಾಕ್ಷಾಯ ನಮ:| ಗಂಗೇ ಮಾಂ ಪುನೀಹಿ|”
– ಎಂದು ಮನಸ್ಸಿನಲ್ಲೇ ಸ್ಮರಿಸಿಕೊಳ್ಳಿ. (ಈ ಹಿಂದೆ ಹೇಳಿದ ಎಲ್ಲ ಫಲಗಳು ನಿಮಗೂ ಸಿಗುತ್ತವೆ.)
ಮಾನಸಿಕ ಸೂರ್ಯಾರ್ಘ್ಯ–
ಧ್ಯಾಯೇಮ ಸೂರ್ಯಂ ವಿಷ್ಣುಂ ಸವಿತಾರಂವರೇಣ್ಯಂ|
ಧಿಯೋನ: ಪ್ರೇರಯನ್ ನಿತ್ಯಂ ಭರ್ಗೋ ದೇವ: ಸದಾ (ಅ)ವತು||
ಸೂರ್ಯ ನಾರಾಯಣಾಯ ಇದಮರ್ಘ್ಯಂ|
– ಎಂದು ಮೂರು ಸಲ ಮನಸ್ಸಿನಲ್ಲೇ ಹೇಳಿ ಮೂರು ಸಲ ಮನಸ್ಸಿನಲ್ಲೇ ಅರ್ಘ್ಯ ಬಿಡಿ. (ಮನೆಯಲ್ಲಿರುವಾಗ ನೀರಿನಿಂದ ತರ್ಪಣ ಕೊಡಿ.) ಈ ರೀತಿ ಮಾಡುವುದರಿಂದ ಏಳು ಜನ್ಮಗಳಲ್ಲಿ ಮುತ್ತೈದಿ ಭಾಗ್ಯ ಎಂದು ವಾಯುಪುರಾಣದಲ್ಲಿ ಹೇಳಿದ್ದಾರೆ.
ಸೂರ್ಯನಾರಾಯಣ ಮಂತ್ರ (ಸಂಧ್ಯೋಪಾಸನಾ ಮಂತ್ರ)–
ಧ್ಯಾಯೇಮ ಸೂರ್ಯಂವಿಷ್ಣುಂ ಸವಿತಾರಂವರೇಣ್ಯಂ ಧ್ಯೋನ: ಪ್ರೇರಯನ್ ನಿತ್ಯಂ ಭರ್ಗೋದೇವ: ಸದಾ (ಅ)ವತು||
– ಎಂದು ಹನ್ನೊಂದು ಸಲ ಮನಸ್ಸಿನಲ್ಲೇ ಜಪಿಸಿ ಜಪಿಸಿ ಕೊನೆಯಲ್ಲಿ ಒಂದು ಸಲ ತರ್ಪಣ ಕೊಡಿ. (ಮನೆಯಲ್ಲಿರುವಾಗ ನೀರಿನಿಂದ ತರ್ಪಣ ಕೊಡಿ.)
ಗುರುದೇವತಾ ನಮಸ್ಕಾರ–
(ನಿಮ್ಮ ಗೋತ್ರ, ಪ್ರವರ, ಮನಸ್ಸಿನಲ್ಲೇ ಹೇಳಿಕೊಳ್ಳಿ)
ಸಮಸ್ತ ದೇವತಾಭ್ಯೋ ನಮ:|
ಮಾತೃಭ್ಯೋ ನಮ:|
ಪಿತೃಭ್ಯೋ ನಮ:|
ಆಚಾರ್ಯ ಗುರುಭ್ಯೋ ನಮ:|
ಲೋಕಾ: ಸಮಸ್ತಾ: ಸುಖಿನೋ ಭವಂತು|
ಶ್ರೀ ಕೃಷ್ಣಾರ್ಪಣಮಸ್ತು|
ಅಚ್ಯುತಾಯ ನಮ:|
ಅನಂತಾಯ ನಮ:|
ಗೋವಿಂದಾಯ ನಮ:|
(ನಾರಾಯಣಾಯ ನಮ:|)
ಪ್ರಾರ್ಥನೆ –
ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಇಷ್ಟಾರ್ಥಗಳ ಸಿದ್ಧಿಯನ್ನೂ ಕಷ್ಟಗಳ ಪರಿಹಾರಗಳನ್ನೂ ದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ದೇವರು ಬೇಗನೆ ಎಲ್ಲ ಇಷ್ಟಾರ್ಥಗಳನ್ನು ಕರುಣಿಸಿ ಕಷ್ಟಗಳನ್ನು ಪರಿಹರಿಸುತ್ತಾನೆ.
(ಸ್ತ್ರೀಯರು ಸಂಧ್ಯಾವಂದನೆಯನ್ನು ತಿಂಗಳ ನಾಲ್ಕು ದಿನ ಬಿಟ್ಟು ಉಳಿದ ದಿನಗಳು ಮಾಡತಕ್ಕದ್ದು)
ಗಾಯತ್ರೀ/ಸೂರ್ಯನಾರಾಯಣ ಮಂತ್ರಗಳ ಅರ್ಥ –
ಸೃಷ್ಟಿಕರ್ತನೆ, ಶ್ರೇಷ್ಠಗುಣನೆ, ಸೂರ್ಯನಾರಾಯಣನೆ ಧ್ಯಾನಿಪೆ|
ಕಷ್ಟ ಕಳೆದು ರಕ್ಷಿಸೆಮ್ಮನು ಸತ್ಯ ಧರ್ಮದಿ ಮತಿಯ ಪ್ರೇರಿಸು||
ಗಾಯತ್ರೀ ಮಂತ್ರದಲ್ಲಿ ಎಲ್ಲ ವೇದ ಮಂತ್ರಗಳೂ ಇನ್ನಿತರ ಸಂಧ್ಯಾವಂದನೆ ಮಂತ್ರಗಳೂ ಅಡಕವಾಗಿರುವುದರಿಂದ ಗಾಯತ್ರಿಮಂತ್ರವನ್ನು ಜಪಿಸುವುದರಿಂದ ಇನ್ನಿತರ ಸಂಧ್ಯಾವಂದನೆ ಮಂತ್ರವನ್ನು ಜಪಿಸಿದ ಫಲ ಬರುವ ಕಾರಣ ‘’ಲೋಪ ದೋಷವಿಲ್ಲ’’ ವಿಸ್ತಾರ ಸಂಧ್ಯಾವಂದನೆ ಮಾಡಿದರೆ ಹೆಚ್ಚು ಫಲ.
ಬೆಳಗಿನ ಸಂಧ್ಯಾವಂದನೆ –
ಬೆಳಿಗ್ಗೆ 5 ಘಂಟೆಯಿಂದ 6 ಘಂಟೆಯೊಳಗೆ ಸೂರ್ಯೋದಯದೊಳಗೆ, ಸ್ನಾನ ಮಾಡಲಿಕ್ಕಾಗದಿದ್ದಲ್ಲಿ ‘’ಪುಂಡರೀಕಾಕ್ಷ’’ ಸ್ಮರಣೆ ಮಾಡಿ ಮೂರು ನಿಮಿಷದ ಮಾನಸಿಕ ಸಂಧ್ಯಾವಂದನೆಯನ್ನು ಮಾಡಿ ಮುಗಿಸಿರಿ. ಆನಂತರ ಸ್ನಾನ ಮಾಡಿ ಮತ್ತೊಮ್ಮೆ ಶಾರೀರಿಕವಾಗಿ ಸಂಧ್ಯಾವಂದನೆ ಮಾಡಿ ಮುಗಿಸಿರಿ. ಹೀಗೆ ಎರಡು ಸಲ ಸಂಧ್ಯಾವಂದನೆ ಮಾಡಿದರೆ ದೋಷವಿಲ್ಲ. ಹೆಚ್ಚು ಪುಣ್ಯವೇ ಬರುತ್ತದೆ.
ಮಧ್ಯಾಹ್ನಿಕ ಸಂಧ್ಯಾವಂದನೆ –
ಕಾರ್ಯಕ್ಷೇತ್ರ, ಕಾರ್ಖಾನೆಗಳಲ್ಲಿರುವವರು ಮಧ್ಯಾಹ್ನ 12 ಘಂಟೆ ಆದ ಕೂಡಲೇ ಕೆಲಸದ ಮಧ್ಯೆ ಮೂರು ನಿಮಿಷ ಬಿಡುವು ಮಾಡಿಕೊಂಡು ಸಂಧ್ಯಾವಂದನೆ ಮಾಡಿರಿ. ವಿದ್ಯಾರ್ಥಿಗಳು, ಅಧ್ಯಾಪಕರು ಮಧ್ಯಾಹ್ನ 12 ಘಂಟೆ ಅವಧಿ (Period) ಮುಗಿದ ಕೂಡಲೇ (12.15 ಸುಮಾರಿಗೆ) ಮೂರು ನಿಮಿಷ ಬಿಡುವು ಮಾಡಿಕೊಂಡು ಸಂಧ್ಯಾವಂದನೆ ಮಾಡಿರಿ. ಇದು ಸಾಧ್ಯವಾಗದೆ ಹೋದರೆ ಮಧ್ಯಾಹ್ನದ ಊಟಕ್ಕಿಂತ ಮುಂಚೆ ಮೂರು ನಿಮಿಷ ಬಿಡುವು ಮಾಡಿಕೊಂಡು ಸಂಧ್ಯಾವಂದನೆ ಮಾಡಿರಿ.
ಸಂಜೆ ಸಂಧ್ಯಾವಂದನೆ –
ಮಕ್ಕಳು ಶಾಲೆಯಿಂದ ಬಂದ ಕೂಡಲೇ 6 ಘಂಟೆಗೆ ಸರಿಯಾಗಿ 3 ನಿಮಿಷದ ಸಂಧ್ಯಾವಂದನೆ ಮಾಡಿಸಿ, ಆಟಕ್ಕಾಗಲೇ ಮನೆಪಾಠಕ್ಕಾಗಲೀ ಕಳುಹಿಸಿಕೊಡಿ. 6 ಘಂಟೆಗೆ ನೀವು ಕಾರ್ಯಕ್ಷೇತ್ರದಲ್ಲಾಗಲೀ, ಬಸ್ – ರೈಲುಗಳಲ್ಲಾಗಲೀ ಇದ್ದರೆ ಪುಂಡರೀಕಾಕ್ಷ ಸ್ಮರಣೆ ಮಾಡಿ ಪ್ಯಾಂಟ್ – ಷರ್ಟಿನಲ್ಲಿ ಮಾನಸಿಕ ಸಂಧ್ಯಾವಂದನೆ ಮಾಡಿರಿ.
ಸಮಯಕ್ಕೆ ಪ್ರಾಧಾನ್ಯತೆ –
ಸಂಧ್ಯಾವಂದನೆಗೆ ಸಮಯಕ್ಕೇ ಪ್ರಾಧ್ಯಾನ್ಯತೆ, ಪ್ರಾಮುಖ್ಯತೆ, ಸಮಯ ಪರಿಪಾಲನೆ ಸಂಧ್ಯೋಪಾಸನೆಗೆ ಬಹು ಮುಖ್ಯ. ಶಾಲೆ, ಕಾರ್ಯಕ್ಷೇತ್ರ, ಕಾರ್ಖಾನೆಗಳಿಗೆ ಸಮಯಕ್ಕೆ ಸರಿಯಾಗಿ ಹೋಗುವಂತೆ ಸಂಧ್ಯಾವಂದನೆಗೂ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬ ವಿಪ್ರರೂ ಮಾಡಿ ಮುಗಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
‘’ಶುಚಿರ್ವಾ (ಅ)ಪ್ರಶುಚಿರ್ವಾ ಕಾಲೇ ಸಂಧ್ಯಾಂ ಸಮಾಚರೇತ್“
‘’ಮಡಿಯಲ್ಲಿರಲಿ, ಮೈಲಿಗೆಯಲ್ಲಿರಲಿ, ಹೊತ್ತಿಗೆ ಸರಿಯಾಗಿ ಸಂಧ್ಯಾವಂದನೆ ಮಾಡಬೇಕು.”
ಯುದ್ಧರಂಗದಲ್ಲಿ ದ್ರೋಣಾಚಾರ್ಯರು ಸಂಧ್ಯಾ ಕಾಲದ ಉಸುಕಿನಿಂದಲೇ ಸೂರ್ಯಾರ್ಘ್ಯ ನೀಡಿದ್ದರು. (ಯುದ್ಧರಂಗದಲ್ಲಿ ರಕ್ತದ ಕೆಸರಿತ್ತು)
ಪ್ಯಾಂಟ್ – ಷರ್ಟ್ ನಿಷಿದ್ಧವಲ್ಲ –
ಬದರಿ ಮುಂತಾದ ಕ್ಷೇತ್ರಗಳಲ್ಲಿ ಪ್ಯಾಂಟ್–ಷರ್ಟ್-ಕೋಟ್ ಧರಿಸಿಕೊಂಡೇ ಸಂಧ್ಯೋಪಾಸನೆ, ದೇವರ ಪೂಜೆ, ಪಿತೃಕಾರ್ಯ ಮಾಡುತ್ತಾರೆ. ಕಾಶಿ, ಗಯಾ ಮುಂತಾದ ಕ್ಷೇತ್ರಗಳಲ್ಲಿ ಮಹಾರಾಷ್ಟ್ರದಲ್ಲಿ ದೋತ್ರವನ್ನು ಷರ್ಟ್, ಬನಿಯನ್ ಧರಿಸಿಕೊಂಡೇ ದೇವರ ಪೂಜೆ ಮಾಡುತ್ತಾರೆ. ಆದ್ದರಿಂದ ಷರ್ಟ್, ಬನಿಯನ್ , ಪ್ಯಾಂಟ್ – ಕೋಟ್ ಗಳು ಸರ್ವಥಾ ನಿಷಿದ್ಧವೇನೂ ಅಲ್ಲ. ಆಪದ್ಧರ್ಮನಿಮಿತ್ತ, ಅನಿವಾರ್ಯ ಸಂದರ್ಭಗಳಲ್ಲಿ ಪುಂಡರೀಕಾಕ್ಷ ಸ್ಮರಣೆ ಮಾಡಿ, ಪ್ಯಾಂಟ್ – ಷರ್ಟ್ ನಲ್ಲಿ ಮಾನಿಸಿಕ ಸಂಧ್ಯೋಪಾಸನೆ ಮಾಡುವುದರಿಂದ ದೋಷವಿಲ್ಲ.
ಸಂಪ್ರದಾಯವನ್ನು ಗೌರವಿಸೋಣ –
ಮನೆ-ಮಠ, ದೇವಸ್ಥಾನಗಳಲ್ಲಿ ಮಡಿಪಂಚೆ ಉಟ್ಟು ‘’ವೈದಿಕ ಸಮವಸ್ತ್ರ’’ದಲ್ಲಿ ಸಕಾಲದಲ್ಲಿ ಶಾರೀರಿಕ ಸಂಧ್ಯಾವಂದನೆ ಮಾಡೋಣ. ಭೋಜನಾದಿಗಳನ್ನು ‘’ಮಡಿಪಂಚೆ, ದೋತ್ರ’’ ಒಟ್ಟುಕೊಂಡೇ ಮಾಡುವ ಮೂಲಕ ಮನೆತನದ ಗುರುಮಠದ ಸಂಪ್ರದಾಯ ಪದ್ಧತಿಯನ್ನೂ ಗೌರವಿಸೋಣ.
ಸಂಪ್ರದಾಯದಲ್ಲಿದೆ –
ಜಾತಾಶೌಚದಲ್ಲೂ, ಮೃತಾಶೌಚದಲ್ಲೂ (ಪುರುಡು ಸೂತಕದಲ್ಲೂ) ಮಾನಸಿಕವಾಗಿ ಗಾಯತ್ರೀ ಮಂತ್ರದಿಂದ ಸೂರ್ಯಾರ್ಘ್ಯ ಕೊಟ್ಟು ಮಾನಸಿಕವಾಗಿಯೇ 10 ಗಾಯತ್ರೀ ಜಪಮಾಡುವ ಸಂಪ್ರದಾಯ ನಮ್ಮಲ್ಲಿ ಇದೆ. ದೇಶಾಚಾರದಂತೆ ಮಾಡಬಹುದಾಗಿದೆ.
ಮೂರು ಹೊತ್ತು ಸಂಧ್ಯಾವಂದನೆ ಏಕೆ?
ದೇವರು ಮೂರು ಹೊತ್ತು ಆಹಾರ – ಭೋಜನ ಕೊಟ್ಟು ಕಾಪಾಡುತ್ತಿರುವುದಕ್ಕೆ ಕೃತಜ್ಞತೆ ಸಮರ್ಪಿಸಲು ಮೂರು ಹೊತ್ತು ಸಂಧ್ಯಾವಂದನೆ. ಬೆಳಿಗ್ಗೆ ಮಧ್ಯಾಹ್ನ, ಸಂಜೆ (ರಾತ್ರಿ ಸೇರಿ) ನಮ್ಮನ್ನು ಮೂರು ಹೊತ್ತು ಕಾಪಾಡುತ್ತಿರುವುದಕ್ಕಾಗಿ.
ದೇವರಿಗೆ ‘’ಶುಭೋದಯ (Good morning)’’, ‘’ಶುಭ ಮಧ್ಯಾಹ್ನ (Good afternoon)’’, ‘’ಶುಭ ಸಂಜೆ (Good evening)’’ ಎಂದು ಹೇಳಿ ಕೃತಜ್ಞತೆ ಸಮರ್ಪಿಸುವುದೇ ತ್ರಿಕಾಲ ಸಂಧ್ಯಾವಂದನೆ.
ಮೂರು ಹೊತ್ತು ಸಂಧ್ಯಾವಂದನೆಯನ್ನು ಬೆಳಿಗ್ಗೆ ಸೇರಿಸಿ ಮಾಡಿದರೆ ಹೇಗೆ?
ಮೂರು ಹೊತ್ತಿನ ಊಟವನ್ನು ಉಪಾಹಾರಗಳನ್ನೂ ಕಾಫೀ, ಚಹಾ, ಹಾಲು ಇತ್ಯಾದಿಗಳನ್ನೂ ಒಂದೇ ಸಲ ಸೇರಿಸಿ ತೆಗೆದುಕೊಂಡರೆ ಆರೋಗ್ಯ ಕೆಡುತ್ತಲ್ಲವೆ? ಅದೇ ರೀತಿ ಮೂರೂ ಹೊತ್ತಿನ ಸಂಧ್ಯಾವಂದನೆಯನ್ನು ಒಟ್ಟಿಗೆ ಸೇರಿಸಿ ಮಾಡಿದರೆ ಮನಸ್ಸಿನ ಆರೋಗ್ಯ, ದೇಹದ ಆರೋಗ್ಯ ಎರಡೂ ಕೆಡುತ್ತವೆ. ಆದ್ದರಿಂದ ಎಲ್ಲರೂ ಹೊತ್ತಿಗೆ ಸರಿಯಾಗಿ ತ್ರಿಕಾಲ ಸಂಧ್ಯೋಪಾಸನೆ ಮಾಡೋಣ.
ಕೃತಜ್ಞರಾಗೋಣ (Manners ಉಳ್ಳವರಾಗೋಣ)
ಚಿಕ್ಕ-ಚಿಕ್ಕ ಉಪಕಾರ ಮಾಡುವವರಿಗೂ ‘’ಧನ್ಯವಾದ’’ ಎಂದು ಹೇಳುತ್ತೇವೆ. ದೇವರು ಪ್ರಪಂಚವನ್ನು ಸೃಷ್ಟಿಸಿ ಆ ಪ್ರಪಂಚದಲ್ಲಿ ಅಮೂಲ್ಯವಾದ ಬ್ರಾಹ್ಮಣ ಜನ್ಮಕೊಟ್ಟು ಒಳ್ಳೆ ಬುದ್ಧಿಶಕ್ತಿ, ಇಂದ್ರಿಯಗಳು, ಕಣ್ಣು, ಮೂಗು, ಕಿವಿ, ಕೈ-ಕಾಲು, ಆರೋಗ್ಯ, ಆಹಾರ, ನಿದ್ರೆ, ಎಚ್ಚರ – ಇತ್ಯಾದಿಗಳನ್ನು ಕೊಟ್ಟಿರುವುದಕ್ಕೆ ನಾವೆಲ್ಲರೂ ದೇವರಿಗೆ ಕೃತಜ್ಞತೆ (Thanks) ಸಲ್ಲಿಸುವುದು ನಮ್ಮ ಕರ್ತವ್ಯವಲ್ಲವೇ? ಆದರಿಂದ ಎಲ್ಲರೂ ಕೃತಜ್ಞತಾ ರೂಪದಲ್ಲಿ ತ್ರಿಕಾಲ ಸಂಧ್ಯಾವಂದನೆ ಮಾಡುವ ಮೂಲಕ ಕೃತಜ್ಞರಾಗೋಣ. (ಮ್ಯಾನರ್ಸ್ ಉಳ್ಳವರಾಗೋಣ)
ಕಂದಾಯ (Tax Bill) ಪಾವತಿ ಮಾಡೋಣ –
ವಿದ್ಯುತ್ , ದೂರವಾಣಿ, ನೀರು ಬಳಕೆ, ಕಂದಾಯದ ಬಿಲ್ ಪಾವತಿಸದೆ ಹೋದರೆ, ಮನೆ ಬಾಡಿಗೆ ಅಥವಾ ಮನೆ ಸಾಲದ ಕಂತಿನ ಮರುಪಾವತಿ ಸಕಾಲಕ್ಕೆ ಕಟ್ಟದೆ ಹೋದರೆ, ದಂಡ ಹಾಕುತ್ತಾರೆ, ಹಾಗೂ ಸಂಪರ್ಕವನ್ನು ಕಡಿತಗೊಳಿಸುತ್ತಾರೆ (Disconnect) ಮಾಡುತ್ತಾರೆ. ಮನೆಯಿಂದ ನಮ್ಮನ್ನು ಹೊರಗೆ ಹಾಕುತ್ತಾರೆ. ಅದೇ ರೀತಿ ಸೂರ್ಯನ ಬೆಳಕು, ಮಳೆ ನೀರು, ಗಾಳಿ, ಬ್ರಹ್ಮಣ ಜನ್ಮ, ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವುಗಳೆಲ್ಲವನ್ನೂ ಅನುಭವಿಸುತ್ತಿರುವ ಬ್ರಾಹ್ಮಣರಾದ ನಾವು ಅವುಗಳ ಒಡೆಯನಾದ ದೇವರಿಗೆ ಕಂದಾಯ, ಬಾಡಿಗೆ, ಸಾಲದ ಕಂತಿನ ರೂಪದಲ್ಲಿ ತ್ರಿಕಾಲಸಂಧ್ಯಾವಂದನೆ ಮಾಡದಿದ್ದರೆ, ಮುಂದಿನ ಜನ್ಮದಲ್ಲಿ ದೇವರು ಎಲ್ಲವನ್ನೂ ‘’Disconnect’’ ಮಾಡುತ್ತಾನೆ, ದಂಡ ಹಾಕುತ್ತಾನೆ. ಕುರುಡರಾಗಿ, ಕಿವುಡರಾಗಿ, ಮೂಕರಾಗಿ ಹುಟ್ಟಿಸಿಬಿಡುತ್ತಾನೆ. ಪ್ರಪಂಚಿದಲ್ಲಿನ ಎಲ್ಲಾ 640 ಕೋಟಿ ಜನರಿಗೆ ಸಿಗದಿರುವ, ನಮಗೆ ಮಾತ್ರ ಸಿಕ್ಕಿರುವ ಈ ಅಮೂಲ್ಯ ಬ್ರಾಹ್ಮಣ ಜನ್ಮದಿಂದ ಹೊರಗೆ ಹಾಕುತ್ತಾನೆ. ಆದ್ದರಿಂದ ಎಲ್ಲರೂ ಸಕಾಲದಲ್ಲಿ ತ್ರಿಕಾಲ ಸಂಧ್ಯೋಪಾಸನೆ ಮಾಡಿ ವಿಪ್ರ ಬಾಂಧವರೆಲ್ಲರೂ ಉನ್ನತಿ ಹೊಂದೋಣ.
ಇತರ ಪುಣ್ಯ ಕಾರ್ಯ ಮಾಡುತ್ತಿರುವಾಗ ಸಂಧ್ಯಾವಂದನೆ ಏಕೆ?
ಬ್ಯಾಂಕ್ ಚೆಕ್ ನಲ್ಲಿ ಹೆಸರು, ಹಣ, ತಾರೀಖು, ಎಲ್ಲವನ್ನೂ ನಮೂದಿಸಿ ಹಸ್ತಾಕ್ಷರ ಮಾತ್ರ ಹಾಕದಿದ್ದರೆ ಹಣ ಸಿಗುವುದಿಲ್ಲ. ಅದೇ ರೀತಿ ಬೇರೆ ಎಲ್ಲ ಓಣ್ಯ ಕೆಲಸ ಮಾಡಿದರೂ ‘’ಸಂಧ್ಯಾವಂದನೆ’’ ಮಾಡದೆ ಹೋದರೆ, ‘’ಪುಣ್ಯ’’ವಿಲ್ಲ. ಕೆಲಸ ಮಾಡದಿದ್ದರೂ ಹಾಜರಾತಿ ಕೊಡದೆ ಹೋದರೆ, ‘’ಸಂಬಳ’’ ಸಿಗುವುದಿಲ್ಲ. ಅದೇ ರೀತಿ ಎಲ್ಲ ಪುಣ್ಯ ಕೆಲಸ ಮಾಡಿದ್ದರೂ ಸಂಧ್ಯಾವಂದನೆ ರೂಪದಲ್ಲಿ ಹಾಜರಾತಿ ಕೊಡದೆ ಹೋದರೆ ಪುಣ್ಯ ಸಿಗುವುದಿಲ್ಲ.
ಪ್ರವೃತ್ತಿ ಬೆಳೆಸೋಣ
ಗುರುಗಳ ಆರಾಧನೆ, ಜಯಂತಿ, ಉತ್ಸವ ಸಭೆಗಳು, ಭಜನಾ ಮಂಡಳಿಗಲ ಶಿಬಿರ, ಕಲ್ಯಾಣೋತ್ಸವ, ಹರಿಕಥೆ, ಉಪನ್ಯಾಸ ಇತ್ಯಾದಿಗಳನ್ನು ಯಾರೇ ನಡೆಸಲಿ, ಎಲ್ಲೇ ನಡೆಯಲಿ, ಸಂಧ್ಯಾವಂದನೆ ಸಮಯಗಳಲ್ಲಿ (ಬೆಳಿಗ್ಗೆ 6, ಮಧ್ಯಾಹ್ನ 12 ಹಾಗೂ ಸಂಜೆ 6 ಘಂಟೆಗೆ ಸರಿಯಾಗಿ) ಮೂರು ನಿಮಿಷಗಳ ಬಿಡುವು ಮಾಡಿ ತಾವೂ ಮಾನಸಿಕ ಸಂಧ್ಯಾವಂದನೆ ಮಾಡಿ ಅಲ್ಲಿ ಕುಳಿತವರಿಂದಲೂ ಮಾಡಿಸುವ ಪ್ರವೃತ್ತಿಯನ್ನು ಬೆಳೆಸಬಹುದು.
ವಿದ್ವಾಂಸರು, ಅರ್ಚಕರು ಹಾಗೂ ಪುರೋಹಿತರ ಸಹಕಾರ
ಪ್ರತಿನಿತ್ಯ ತಮ್ಮ ಪ್ರವಚನದ ಕೊನೆಯಲ್ಲಿ ಭಕ್ತರಿಂದ ಮೂರು ನಿಮಿಷಗಳ ಮಾನಸಿಕ ಸಂಧ್ಯಾವಂದನೆಯನ್ನು ಮಾಡಿಸಬಹುದು. ಈ ಮೂಲಕ ವೇದವ್ಯಾಸರ ಸನ್ನಿಧಿಯಲ್ಲಿ ಗಾಯತ್ರೀ ಮಂತ್ರ ಜಪಿಸುವುದರಿಂದ ಭಕ್ತರಿಗೆ ಮಂತ್ರಸಿದ್ಧಿಯಾಗುತ್ತದೆ. ಅಕ್ಷಯ ಫಲ, ಪುಣ್ಯ ಸಿಗುತ್ತದೆ. ಮಠಗಳಲ್ಲಿ ಭಕ್ತರು ಮಧ್ಯಾಹ್ನ ಊಟಕ್ಕೆ ಕುಳಿತಿರುವಾಗ ಎಲೆ ಮುಂದೆಯೇ ಮೂರು ನಿಮಿಷಗಳ ಮಾನಸಿಕ ಸಂಧ್ಯಾವಂದನೆಯನ್ನು ಅರ್ಚಕರು ಅಥವಾ ಪುರೋಹಿತರು ಮಾಡಿಸಬಹುದು.
ವಿಶೇಷ ಸೂಚನೆ
ಇದನ್ನು ಓದುತ್ತಿರುವ ಪ್ರತಿಯೊಬ್ಬ ವಿಪ್ರರೂ ಸೇವಾ ರೂಪದಿಂದ ಕನಿಷ್ಟ ಐದು ಪ್ರತಿಗಳನ್ನಾದರೂ ಮುದ್ರಿಸಿ ತಮ್ಮ ಪರಿಚಿತ ವಿಪ್ರ ಬಾಂಧವರಿಗೆ ವಿತರಿಸಿರಿ ಹಾಗೂ ತಮ್ಮ ತಮ್ಮ ಬಂಧು ಬಳಗ ವಿಪ್ರ ಮಿತ್ರರಿಗೆ ಅಂಚೆಯ/ಇ-ಮೇಲ್ ಮೂಲಕ ಕಳುಹಿಸಿ ಕೊಡಿ. ಈ ಮೂಲಕ ಅಪೂರ್ವ ಆಪದ್ಧರ್ಮ ಮಾನಸಿಕ ತ್ರಿಕಾಲ ಸಂಧ್ಯಾವಂದನೆಯನ್ನು ಅವರಿಂದಲೂ ಮಾಡಿಸಿ ಸೂರ್ಯನಾರಾಯಣ ಹಾಗೂ ಗಾಯತ್ರೀ ಮಾತೆಯ ಕೃಪೆಗೆ ಪಾತ್ರರಾಗೋಣ ಬನ್ನಿ ದೇವರು ಎಲ್ಲರಿಗೂ ಒಳ್ಳೆಯದಾಗುವಂತೆ ಬುದ್ಧಿ ಪ್ರೇರಿಸಲಿ.
ಧೀ ಯೋ ಯೋನ: ಪ್ರಚೋದಯಾತ್ |
ನೀವು ಈ ಅಮೂಲ್ಯ ಮಾಹಿತಿಯನ್ನು ಓದಿ, ನಿಮ್ಮವರಿಗೂ ಫಾರ್ವರ್ಡ್ ಮಾಡಿ ಓದಿಸಿ. ಅಚ್ಚು ಮಾಡಿರುವ ಇದರ ಪ್ರತಿಯನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಮಂತ್ರಾಕ್ಷತೆ, ಶ್ರೀಗಂಧ, ಹೋಮದ ರಕ್ಷೆ, ಪ್ರಸಾದ, ಕುಂಕುಮ, ಕಟ್ಟಿಕೊಳ್ಳಲು ಬಳಸಬೇಡಿ. ಮಕ್ಕಳ ಕೈಯಲ್ಲಿ ರಾಕೆಟ್ – ಬೋಟ್ ಮಾಡಿಸಬೇಡಿ.
