ವಾರಕ್ಕೆ ೫೫ ತಾಸುಗಳಿಗೂ ಹೆಚ್ಚಿನ ಕಾಲ ಕೆಲಸ ಮಾಡುವ ಮಹಿಳೆಯರಲ್ಲಿ ಖಿನ್ನತೆ ಹೆಚ್ಚಾಗಿರುವುದನ್ನು ತಜ್ಞರು ಗಮನಿಸಿದ್ದಾರೆ.
ಈ ವಿಚಾರವು Journal of Epidemiology and Community Health ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ವಾರಾಂತ್ಯದಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಪುರುಷರಲ್ಲಿಯೂ ಸಹ ಖಿನ್ನತೆ ಕಾಡುತ್ತದೆ ಎಂದು ಈ ಅಧ್ಯಯನವು ಗಮನಿಸಿದೆ.
ಇತ್ತೀಚಿನ ಕಾಲದಲ್ಲಿ ಉದ್ದಿಮೆದಾರರು ಉದ್ಯೋಗಿಗಳು ಸಾಮಾನ್ಯ “ಕಾರ್ಯಾಲಯ ಅವಧಿ” ಗಿಂತಲೂ ಹೆಚ್ಚು ತಾಸು ಕೆಲಸ ಮಾಡಬೇಕು ಎಂದು ಅಪೇಕ್ಷಿಸುತ್ತಿರುವುದು ಉದ್ಯೋಗಿಗಳ ಆರೋಗ್ಯದಲ್ಲಿ ಏರುಪೇರಾಗಲು ಕಾರಣ ಎಂದೂ ಈ ಅಧ್ಯಯನವು ಹೇಳುತ್ತದೆ.
ವಾರಕ್ಕೆ ೩೫ರಿಂದ ೪೦ ತಾಸುಗಳ ಕಾರ್ಯದ ವೇಳೆಯನ್ನು ಪ್ರಮಾಣಿತ ಮಟ್ಟವಾಗಿಟ್ಟುಕೊಂಡು, ಅರೆಕಾಲಿಕ ಉದ್ಯೋಗಿಗಳು (೩೫ ತಾಸುಗಳಿಗಿಂತಲೂ ಕಡಿಮೆ), ಪೂರ್ಣಕಾಲಿಕ ಉದ್ಯೋಗಿಗಳು (೪೧-೫೫ ತಾಸುಗಳು) ಹಾಗೂ ತುಂಬ ಹೊತ್ತು ಕೆಲಸ ಮಾಡುವ ಉದ್ಯೋಗಿಗಳನ್ನು (೫೫ಕ್ಕೂ ಹೆಚ್ಚಿನ ತಾಸು ಕೆಲಸ ಮಾಡುವವರು) ಈ ರೀತಿ ವಿಂಗಡಿಸಿ ಅಧ್ಯಯನ ಮಾಡಲಾಯಿತು.
ವಯಸ್ಸು, ವೈವಾಹಿಕ ಸ್ಥಿತಿ, ಪೋಷಕಾವಸ್ಥೆ, ಸಂಪಾದನೆ, ಕೆಲಸ ಮತ್ತು ಜೀವನ ತೃಪ್ತಿ, ದೀರ್ಘಕಾಲಿಕ ಆರೋಗ್ಯ ಸ್ಥಿತಿ, ಕೆಲಸದ ರೀತಿ ಮತ್ತು ಅದರೊಂದಿಗಿನ ತೃಪ್ತಿ, ನಿಯಂತ್ರಣ ಮಟ್ಟ, ಅರ್ಹತೆ – ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡು ಅಧ್ಯಯನ ಮಾಡಲಾಯಿತು.
“ನಮ್ಮ ಅಧ್ಯಯನವು ಉದ್ದಿಮದಾರರು ಮತ್ತು ಉದ್ಯೊಗ ನೀತಿ ರಚನೆಕಾರರಿಗೆ ಸೂಕ್ತ ಮಾರ್ಗದರ್ಶನ ನೀಡಲಿ” ಎಂಬುವುದು ನಮ್ಮ ಆಶಯ ಎಂದು ನಮ್ಮ ಆಶಯ ಎಂದು ತಜ್ಞರು ಹೇಳುತ್ತಾರೆ.
