“ಬಾರತದ ಮಿಗ್-೨೧ ವಿಮಾವು, ಪಾಕಿಸ್ತಾನದ ಎಫ್-೧೬ ವಿಮಾನವನ್ನು ತಾನು ಹೊಡೆದು ಉರುಳಿಸಿರುವುದಾಗಿ ಭಾರತವು ಹೇಳಿಕೊಂಡಿದೆ. ಭಾರತದ ಈ ಸುಳ್ಳು ಹೇಳಿಕೆಯ ವಿರುದ್ಧ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಕೇಸು ದಾಖಲಿಸಲು ಮುಂದಾಗಿದೆ” ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದರು.
ಪಾಕಿಸ್ತಾನದ ಸೂಚನೆ ಮತ್ತು ಪ್ರಸಾರ ಮಂತ್ರಲಯದಲ್ಲಿ ಅಧಿಕಾರಿಯಾಗಿರುವ ದಾನ್ಯಾಲ್ ಜಿಲಾನಿ ಎಂಬವರು ಟ್ವೀಟ್ ಮೂಲಕ ಈ ರೀತಿ ಹೇಳಿಕೆ ನೀಡಿದ್ದರು.
ಅಮೆರಿಕಾದ ಪ್ತತಿಷ್ಟಿತ ಲಾಕ್ಹೀಡ್ ಮಾರ್ಟಿನ್‌ನ ಭಾರತೀಯ ಕಾರ್ಯಾಲಯವು ಈ ಹೇಳಿಕೆಯನ್ನು ತಳ್ಳಿಹಾಕಿದೆ.
ಇದಾದ ನಂತರ ಜಿಲಾನಿ ತಮ್ಮ ವಿವಾದತ್ಮಕ ಟ್ವೀಟನ್ನು ಅಳಿಸಿ, ಸ್ಪಷ್ಟನೆ ಒದಗಿಸಿದ ಲಾಕ್ಹೀಡ್ ಮಾರ್ಟಿನ್ ಇಂಡಿಯಾ ಅಧಿಕಾರಿಗಳಿಗೆ ದನ್ಯವಾದ ಅರ್ಪಿಸಿದ್ದಾರೆ. ಈ ವಿಚಾರವನ್ನು ಅಂತರಜಾಲತಾಣದಲ್ಲಿ ಅಯ್ದುಕೊಂಡೆ. ನಾನು ಅದನ್ನು ಹಿಂಪಡೆಯುವೆ ಎಂದು ಟ್ವೀಟ್ ಮಾಡಿದರು.
ಗುರುವಾರ ಮೂರೂ ಸೇನಾ ವಿಭಾಗಗಳ ಮುಖ್ಯಸ್ಥರು ಒಟ್ಟು ಸೇರಿ, ಪಾಕಿಸ್ತಾನವು ಭಾರತದ ಸೇನಾ ವ್ಯವಸ್ಥೆಗಳನ್ನು ಗುರಿಯಾಗಿಟ್ಟುಕೊಂಡಿದ್ದವು.
