ಇಂದಿನ ಯುಗದಲ್ಲಿ ತಂತ್ರಜ್ಞಾನವು ತ್ವರಿತ ಬದಲಾವಣೆ ಕಾಣುತ್ತಿದೆ. ಅದಕ್ಕನುಗುಣವಾಗಿ ಮಾಧ್ಯಮ ಘಟಕದ ಸರ್ಕಾರಿ ಅಧಿಕಾರಿಗಳು ನಿರಂತರ ವಿಕಸನ ಹೊಂದುತ್ತಿರಬೇಕು ಎಂದು ಕೇಂದ್ರೀಯ ಸೂಚನೆ ಮತ್ತು ಪ್ರಸಾರ ಮಂತ್ರಿ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಠೋರ್ ಸಲಹೆ ನೀಡಿದ್ದಾರೆ.
ಅವರು ಇಂದು ಹೊಸ ದೆಹಲಿಯಲ್ಲಿ ಮಾಧ್ಯಮ ಘಟಕಗಳ ಮೊದಲ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. “ಈಗಿನ ಕಾಲ, ಸಂದರ್ಭ ಮತ್ತು ಸನ್ನಿವೇಶಗಳಲ್ಲಿ, ಭಾರತೀಯ ಮಾಹಿತಿ ಸೇವಾ (ಐಐಎಸ್) ಅಧಿಕಾರಿಗಳ ದಕ್ಷತೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯವಾದುದು. ಎಲ್ಲರೂ ಸಹ ಒಟ್ಟು ಸೇರಿ ಸರ್ಕಾರದ ಅತ್ಯುತ್ತಮ ಸಂವಹನಕಾರರಾಗಬೇಕು” ಎಂದು ಕರ್ನಲ್ ರಾಠೋರ್ ತಮ್ಮ ಭಾಷಣದಲ್ಲಿ ಹೇಳಿದರು.
ಸೂಚನೆ ಮತ್ತು ಪ್ರಸಾರ ಕಾರ್ಯದರ್ಶಿ ಅಮಿತ್ ಖರೆ ಅವರು ತಮ್ಮ ಭಾಷಣದಲ್ಲಿ, “ರಭಸವಾಗಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವುದ ನಮ್ಮ ಇಲಾಖೆಗೆ ಬಹಳ ಮುಖ್ಯ. ಜನತೆಗೆ ಸುಲಭವಾಗಿ ಅರ್ಥವಾಗಬಲ್ಲ ಭಾಷೆಯಲ್ಲಿ ಸಂವಹಿಸಬೇಕು. ಸರ್ಕಾರದ ಹಲವು ಮಾಧ್ಯಮ ಘಟಕಗಳ ನಡುವೆ ಅತ್ಯುತ್ತಮ ಹೊಂದಾಣಿಕೆ ಕಾಯ್ದುಕೊಳ್ಳುವುದು ಬಹಳ ಮುಖ್ಯ” ಎಂದು ಹೇಳಿದರು.
ಸೂಚನಾ ಮತ್ತು ಪ್ರಸಾರ ಮಂತ್ರಾಲಯದ ಸ್ವಾಮ್ಯದಲ್ಲಿ ಈ ವಿಭಾಗಗಳು ಸೇರಿವೆ:
- ಸುದ್ದಿ ಮಾಹಿತಿ ಮಂಡಳಿ (ಪಿಐಬಿ)
- ಆಕಾಶವಾಣಿ (ಎಐಆರ್)
- ದೂರದರ್ಶನ (ಡಿಡಿ)
- ಭಾರತೀಯ ವಾರ್ತಾಪತ್ರಿಕೆ ರಿಜಿಸ್ಟ್ರಾರ್
- ಪ್ರಕಾಶನ ವಿಭಾಗ
- ಪ್ರಚಾರ ನಿರ್ದೇಶನಾಲಯ
- ಸೂಚನಾ ಮತ್ತು ಪ್ರಸಾರ ಮಂತ್ರಾಲಯದ ನವ ಮಾಧ್ಯಮ ಘಟಕ
- ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ
- ವಿದ್ಯುನ್ಮಾನ ಮಾಧ್ಯಮ ಮೇಲ್ವಿಚಾರಣಾ ಕೇಂದ್ರ
