Bahrain

೪ ದಶಕ ಪೂರೈಸಿದ ಕನ್ನಡ ಸಂಘ ಬಹರೇನ್ – ಬಹರೇನ್‌ನಲ್ಲಿನ ಪುಟ್ಟ ಕರ್ನಾಟಕ

ಕನ್ನಡ ಸಂಘ ಬಹರೇನ್

“ಸಂಘ ಜೀವನ ಸುಖ ಜೀವನ” ಎನ್ನುವುದು ಕನ್ನಡ ಸಂಘದ ಧ್ಯೇಯ ವಾಕ್ಯ. ವಿದೇಶದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಲ್ಲಿ  ಒಗ್ಗಟ್ಟಿನ ಭಾವನೆಯನ್ನು ಬೆಳೆಸುವುದು ಕನ್ನಡ ಸಂಘದ ಧ್ಯೇಯ. ಬಹರೇನ್ ಸಮುದಾಯಕ್ಕಾಗಿ ಕೊಡುಗೆ ನೀಡುತ್ತಲೇ, ಪ್ರತಿಯೊಬ್ಬ ಸದಸ್ಯರಲ್ಲೂ ಕನ್ನಡ ಸಂಸ್ಕೃತಿಯ ಜ್ಯೋತಿಯು ಬೆಳಗಿಸುತ್ತಿರಲು ಈ ಸಂಘವು ನೆರವಾಗುತ್ತದೆ.

ಕನ್ನಡ ಸಂಘದ ಸಾಧನೆಯು ದ್ವೀಪದಲ್ಲಿರುವ ಸುಮಾರು ೨೫೦೦೦ ಕನ್ನಡಿಗರು ಹಾಗೂ ೭೦ ದಶಲಕ್ಷ ಕನ್ನಡಿಗರಲ್ಲೂ ಹೆಮ್ಮೆಯ ಭಾವನೆ ಮೂಡಿಸುತ್ತದೆ.

ಕನ್ನಡ ಸಂಘ ಬಹರೇನ್ ೧೯೭೭ರಲ್ಲಿ ಸ್ಥಾಪನೆಯಾಯಿತು. ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಈ ಸಂಘವು ಬಹರೇನ್ ಸಾಮ್ರಾಜ್ಯದಲ್ಲಿ ಜನಪ್ರಿಯತೆ ಗಳಿಸಿತು. ಈ ಸಂಘವು ಬಹರೇನ್‌ನ ಸಾಮಾಜಿಕ ವ್ಯವಹಾರ ಮಂತ್ರಾಲಯದೊಂದಿಗೆ ನೋಂದಾಯಿತವಾಗಿದೆ. ಈ ಮಂತ್ರಾಲಯ ಹಾಗೂ ಬಹರೇನ್‌ನಲ್ಲಿರುವ ಭಾರತೀಯ ದೂತಾವಾಸದಿಂದಲೂ ಮೆಚ್ಚುಗೆ ಗಳಿಸಿದೆ. ಬಹರೇನ್‌ನಲ್ಲಿ ನಡೆಯುವಂತಹ ಯಾವುದೇ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಾಗಲಿ, ಕರ್ನಾಟಕ ಸಂಘವು ಮುಂಚೂಣಿಯಲ್ಲಿದ್ದು, ಬಹರೇನ್ನಲ್ಲಿ ಅಕ್ಷರಶಃ ಕರ್ನಾಟಕದ ಬಾವುಟವನ್ನು ಎತ್ತರಕ್ಕೆ ಹಾರಿಸುವಂತೆ ಮಾಡುತ್ತದೆ.

ಕರ್ನಾಟಕದ ಗಡಿಯಿಂದಾಚೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿದಕ್ಕಾಗಿ  ಕರ್ನಾಟಕ ಸಂಘ ಬಹರೇನ್ ೨೦೦೨ರಲ್ಲಿ ಕರ್ನಾಟಕ ಸರ್ಕಾರದ “ರಾಜ್ಯೋತ್ಸವ ಪ್ರಶಸ್ತಿ” ಗಳಿಸಿತು.

ಸಂಘದ ಚಟುವಟಿಕೆಗಳ ಪಕ್ಷಿ ನೋಟ:

ಕನ್ನಡಿಗರಿಗಾಗಿವಾರ್ಷಿಕ ಬೃಹತ್‌ ಸಮಾರಂಭಗಳು:

  • ಕನ್ನಡ ರಾಜ್ಯೋತ್ಸವ – ಕನ್ನಡ ವೈಭವ (ಕನ್ನಡ ಸಂಸ್ಕೃತಿ ಮತ್ತು ಕಲೆಯ ಪ್ರದರ್ಶನ)
  • ವಸಂತೋತ್ಸವ (ಕರ್ನಾಟಕದ ವಿವಿಧ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು)
  • ಯಕ್ಷಗಾನ (ತಂಕು ಮತ್ತು ಬಡಗು ಶೈಲಿ) – ಇತ್ತೀಚೆಗೆ ಸಂಘವು “ಕೊಲ್ಲಿ ಯಕ್ಷ ವೈಭವ” ಕಾರ್ಯಕ್ರಮ ಆಯೋಜಿಸಿತು
  • ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಾಟಕಗಳು
  • ಅಮರ ಮಧುರ ಗೀತೆಗಳು (ಹಳೆಯ ಕನ್ನಡಚಲನಚಿತ್ರ ಹಾಡುಗಳ ಸಂಗೀತ ಕಾರ್ಯಕ್ರಮ)
  • ಯೋಗಾ ದಿವಸ (ಅಂತರರಾಷ್ಟ್ರೀಯ ಯೋಗಾ ದಿವಸದ ಅಂಗವಾಗಿ)

ಸಂಘದ ಸದಸ್ಯರು ಮತ್ತು ಅವರ ಕುಟುಂಬಗಳಿಗಾಗಿ:

  • ಮಕ್ಕಳಿಗಾಗಿ ಚಿತ್ರ ರಚನೆ, ಹಾಡುಗಾರಿಕೆ, ನೃತ್ಯ, ಫ್ಯಾನ್ಸಿ ಡ್ರೆಸ್, ರಾಜಕುಮಾರ ರಾಜಕುಮಾರಿ ಇತ್ಯಾದಿ
  • ವಯಸ್ಕರಿಗಾಗಿ ರಂಗೋಲಿ, ನೃತ್ಯ, ಹಾಡುಗಾರಿಕೆ, ಶ್ರೀ – ಶ್ರೀಮತಿ, ಚರ್ಚೆ, ಫ್ಯಾನ್ಸಿ ಡ್ರೆಸ್,ಅಪೂರ್ವ ದಂಪತಿಗಳು ಇತ್ಯಾದಿ
  • ವಾರ್ಷಿಕ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು
  • ಬೇಸಿಗೆ ಕಾಲಿಕ ಒಳಾಂಗಣ ಕ್ರೀಡೆಗಳು

ಸದಸ್ಯರು ಮತ್ತು ಅವರ ಕುಟುಂಬಗಳಿಗಾಗಿ:

  • ಶ್ರೀ ಸತ್ಯನಾರಾಯಣ ಪೂಜೆ
  • ಕರೋಕೆ ಹಾಡುಗಾರಿಕೆ
  • ಹಾಸ್ಯ ಲಾಸ್ಯ (ಹಾಸ್ಯ ಕಾರ್ಯಕ್ರಮ)
  • ಯುವಕರಿಗಾಗಿ ವ್ಯಕ್ತಿತ್ವ ವಿಕಸನ
  • ಇಫ್ತಾರ್ ಕೂಟ
  • ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆ
  • ದೀಪಾವಳಿ, ಈದ್, ಕ್ರಿಸ್ಟ್ಮಸ್ ನಂತಹ ಭಾರತೀಯ ಹಬ್ಬಗಳ ಆಚರಣೆ
  • ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ
  • ದಿ|| ಸೀತಾರಾಮ್ ಭಟ್ಟ ಸ್ಮಾರಕ ಡಾರ್ಟ್ಸ್ ಪಂದ್ಯಾವಳಿ
  • ವಾರಾಂತ್ಯದಲ್ಲಿ ಕೌಟುಂಬಿಕ ಆಟಗಳು (ಡಾರ್ಟ್, ಕಾರ್ಡ್ ಆಟ, ಕ್ಯಾರಮ್ ಇತ್ಯಾದಿ)

ತರಬೇತಿ:

  • ಉಚಿತ ಕನ್ನಡ ತರಗತಿಗಳು
  • ಉಚಿತ ಯಕ್ಷಗಾನ ತರಗತಿಗಳು
  • ಉಚಿತ ಯೋಗಾ ತರಬೇತಿ
  • ಶಾಸ್ತ್ರೀಯ ನೃತ್ಯ ತರಗತಿಗಳು
  • ಸಿನಿಮೀಯ ನೃತ್ಯ ತರಗತಿಗಳು
  • ವ್ಯಕ್ತಿತ್ವ ವಿಕಸಿ (ಗ್ಯಾವಲ್ ಕ್ಲಬ್)

ಸಂಘಕ್ಕೆ ಇದುವರೆಗೂ ಭೇಟಿ ನೀಡಿದ ಗಣ್ಯರು:

  • ರಾಜಕಾರಣಿಗಳಾದ ಬಿ ಎಸ್‌ ಯಡಿಯೂರಪ್ಪ, ಆಸ್ಕರ್ ಫರ್ನಾಂಡೆಸ್, ರಮಾನಾಥ್ ರೈ, ಪ್ರಮೋದ್ ಮಾಧ್ವರಾಜ್, ಶೋಭಾ ಕರಂದ್ಲಾಜೆ, ರಾಮಚಂದ್ರ ಗೌಡ, ನಾಗರಾಜ ಶೆಟ್ಟಿ, ಅಭಯಚಂದ್ರ ಜೈನ್, ಯು ಟಿ ಖಾದರ್, ಡಾ. ಜಯಮಾಲಾ, ದಿ; ಎಂ ಪಿ ಪ್ರಕಾಶ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೊಯಿದ್ದೀನ್ ಬಾವಾ, ಗಣೇಶ್ ಕರಣಿಕ್, ಗೋಪಾಲ್ ಭಂಡಾರಿ, ಶಕುಂತಲಾ ಶೆಟ್ಟಿ, ತೇಜಸ್ವಿನಿ, ಎಚ್‌ ಹನುಮಂತಯ್ಯ,ಸುನಿಲ್ ಕುಮಾರ್ ಇತ್ಯಾದಿ
  • ಲೇಖರು ಮತ್ತು ಕವಿಗಳಾದ ದಿ. ಯು ಆರ್ ಅನಂತಮೂರ್ತಿ, ಕೆ ಎಸ್ ನಿಸಾರ್ ಅಹಮದ್, ಎಸ್‌ ಎಲ್ ಭೈರಪ್ಪ, ದೊಡ್ಡರಂಗೇಗೌಡ, ಸಿದ್ಧಲಿಂಗಯ್ಯ, ಸಿದ್ಧರಾಮಯ್ಯ, ಡುಂಡೀರಾಜ್, ಬಿ ಆರ್ ಲಕ್ಷ್ಮಣ ರಾವ್, ಎಚ್ ಎಸ್ ವೆಂಕಟೇಶ್ ಮೂರ್ತಿ, ಮನು ಬಾಳಿಗಾರ್, ಪದ್ಮರಾಜ್ ದಂಡವತಿ, ಮಲ್ಲಿಕಾ ಘಂಟಿ, ಲಲಿತಾ ನಾಯಕ್, ಟಿ ಸಿ ಪೂರ್ಣಿಮಾ,ವಿಶ್ವೇಶ್ವರ್ ಭಟ್‌, ಸಂಧ್ಯಾಪೈ, ಮನೋಹರ್ ಪ್ರಸಾದ್ ಇತ್ಯಾದಿ
  • ಸಾಮಾಜಿಕ ಮತ್ತು ಧಾರ್ಮಿಕ ಗಣ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ, ಎಡನೀರು ಸ್ವಾಮೀಜಿ, ಒಡೆಯೂರು ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ,ಡಾ. ಬಿ ಎಂ ಹೆಗಡೆ, ಎಚ್ ಆರ್‌ ನಾಗೇಂದ್ರ, ಹರೆಕಾಳ ಹಾಜಬ್ಬ ಇತ್ಯಾದಿ.
  • ಕನ್ನಡ ಚಲನಚಿತ್ರರಂಗದ ಗಣ್ಯರಾದ ದಿ. ಡಾ. ರಾಜಕುಮಾರ್, ಡಾ. ಶಿವರಾಜಕುಮಾರ್, ಪುನಿತ್ ರಾಜಕುಮಾರ್, ರವಿಚಂದ್ರನ್, ದೇವರಾಜ್, ಉಪೇಂದ್ರ, ಜಯಮಾಲಾ, ರಮೇರ್ಶ ಅರವಿಂದ್, ದಿಗಂತ್, ಐಂದ್ರಿತಾ ರೇ, ಗುರುಕಿರಣ್, ಪ್ರೇಮ್, ರವಿಶಂಕರ್‌ ಇತ್ಯಾದಿ
  • ಬುದ್ಧಿಜೀವಿಗಳು ಮತ್ತುನಿರ್ದೇಶಕರಾದ ಟಿ ಎಸ್ ನಾಗಾಭರಣ, ಪಿ ಶೇಷಾದ್ರಿ, ನಾಗತಿಹಳ್ಳಿ ಚಂದ್ರಶೇಖರ್, ಟಿ ಎನ್ ಸೀತಾರಾಮ್, ಗಿರೀಶ್ ಕಾಸರವಳ್ಳಿ ಇತ್ಯಾದಿ
  • ನಟರಾದ ಮಾಸ್ಟರ್ ಹಿರಣ್ಣಯ್ಯ, ಯಶವಂತ್ ಸರದೇಶಪಾಂಡೆ, ಕಾಸರಗೋಡು ಚಿನ್ನ, ಜಯಶ್ರೀ ರಾಜ್, ಅರುಣ್ ಸಾಗರ್ ಇತ್ಯಾದಿ
  • ಸಂಗೀತಗಾರರಾದ ಕದ್ರಿ ಗೋಪಾಲಕೃಷ್ಣ, ಪ್ರವೀಣ್ ಗೋಡ್ಖಿಂಡಿ, ಎಂ ಡಿ ಪಲ್ಲವಿ ಮತ್ತು ಅರುಣ್, ರತ್ನಮಾಲಾ ಪ್ರಕಾಶ್, ಬಿ ಆರ್ ಛಾಯಾ, ಅನೂರಾಧಾ ಭಟ್, ರಮೇಶ್ಚಂದ್ರ, ಅಜಯ್ ವಾರಿಯರ್, ವೈ ಕೆ ಮುದ್ದುಕೃಷ್ಣ ಇತ್ಯಾದಿ
  • ತೆಂಕು ಮತ್ತು ಬಡಗು ಶೈಲಿಯ ೧೦೦ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು
  • ಕಲಾವಿದರಾದ ವಿಲಾಸ್ ನಾಯಕ್, ಶಬರಿ ಗಾಣಿಗ ಇತ್ಯಾದಿ
  • ಶಾಸ್ತ್ರೀಯ ಮತ್ತು ಸಿನಿಮೀಯ ನೃತ್ಯ ಪಟುಗಳು

ಪ್ರಶಸ್ತಿಗಳು:

  • ಕರ್ನಾಟಕ ರಾಜ್ಯ ಪ್ರಶಸ್ತಿ, ೨೦೦೨
  • ಆಳ್ವಾಸ್ ನುಡಿಸಿರಿ ಪ್ರಶಸ್ತಿ
  • ಖತ್ತರ್‌ನಲ್ಲಿ ವಿಶ್ವ ಸಂಸ್ಕೃತಿ ಸಮ್ಮೇಳನದಲ್ಲಿ ಹೊರನಾಡು ಕನ್ನಡಿಗ ಸಂಸ್ಥೆ ಪ್ರಶಸ್ತಿ

 ಕನಸಿನ ಭವನ – ಕನ್ನಡ ಭವನ

ಕನ್ನಡ ಸಂಘ ಬಹರೇನ್ ಕೇವಲ ಸಂಘವಾಗಿರದೆ, ಸಮುದಾಗಳ ಕೇಂದ್ರವಾಗಿದೆ. ಕಲಾ ಪ್ರದರ್ಶನದ ಆಗರವಾಗಿದೆ. ಕಳೆದ ನಾಲ್ಕು ದಶಕಗಳಿಂದ ಅನೇಕ ಪ್ರತಿಭೆಗಳಿಗೆ ಮಟ್ಟಿಲಾಗಿದೆ ವೇದಿಕೆಯಾಗಿದೆ. ಅನೇಕರಇಗೆ ದಿನಿತ್ಯ ತಮ್ಮ ಹವ್ಯಾಸಗಳನ್ನು ಪೂರೈಸುವ, ಮಿತ್ರರನ್ನು ಭೇಟಿಯಾಗುವ ತಾಣವಾಗಿದೆ. ಒಟ್ಟಾಗಿ, ಕನ್ನಡ ಸಂಘ ಬಹರೇನ್ ಪುಟ್ಟ ಕರ್ನಾಟಕವೇ ಆಗಿದೆ. ದ್ವೀಪದಲ್ಲಿ, ಸಂಘದಲ್ಲಿ ಹೆಚ್ಚುತಿರುವ ಕನ್ನಡಿಗರ ಸಂಖ್ಯೆ, ಸದಸ್ಯರಿಗೆ ಬೇಕಾಗಿರುವ ಇನ್ನೂ ಹೆಚ್ಚಿನ ಸೌಲಭ್ಯ, ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿರುವ ಕಟ್ಟಡದ ಪರಿಣಾಮವಾಗಿ, ಸದಸ್ಯರೆಲ್ಲರೂ ಒಟ್ಟಾಗಿ ತೆಗೆದುಕೊಂಡ ನಿರ್ಧಾರ, ನಮ್ಮ ಕನಸಿನ ಸೌಧ ಕನ್ನಡ ಭವನದ ನಿರ್ಮಾಣ. ಅದಕ್ಕೆ ಪೂರಕವಾಗಿ ಈ ಕೈಂಕರ್ಯಕ್ಕೆ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರಿಂದ ಒಂದು ಕೋಟಿ ರೂಪಾಯಿಗಳ ಅನುದಾನ ದೊರೆತಿದ್ದು, ಈಗ ಕಟ್ಟಡ ನಿರ್ಮಾಣಕ್ಕೆ ಬೇಕಾದ ಪೂರ್ವಾಭಾವಿ ಕೆಲಸ ಮುಗಿದಿದ್ದು ಇನ್ನೇನು ನಿರ್ಮಾಣ ಕಾರ್ಯ ಆರಂಭವಾಗಲಿದೆ.ಈ ಕಟ್ಟಡ ಕೇವಲ ಕಟ್ಟಡವಾಗಿರದೇ, ವಿದೇಶದಲ್ಲಿ ಒಂದು ವಿಶಿಷ್ಟ ರೀತಿಯದಾದ ಭವನವಾಗಲಿದೆ. ಕೇವಲ ಬಹರೇನ್‌ನಲ್ಲಷ್ಟೇ ಅಲ್ಲದೆ ಸಮಸ್ತ ಕೊಲ್ಲಿ ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೆ ಕಲೆ ಮತ್ತು ಸಂಶೋಧನೆಯ ಕೇಂದ್ರಬಿಂದುವಾಗಲಿದೆ.

ಸೌಲಭ್ಯಗಳು:

ಈ ನಮ್ಮ ಭವನದಲ್ಲಿ ಸುಮಾರು ೪೦೦ ಪ್ರೇಕ್ಷಕರಿಗಾಗುವ ಸಾಂಸ್ಕೃತಿಕ ಸಭಾಂಗಣ, ಶಿಕ್ಷಣ ಮತ್ತು ತರಬೇತಿ ಕೊಠಡಿಗಳು, ವ್ಯಾಯಾಮ ಶಾಲೆ, ವಾಚನಾಲಯ, ಒಳಾಂಗಣ ಕ್ರೀಡಾ ಸೌಲಭ್ಯ, ಉಪಾಹಾರ ಕೇಂದ್ರ, ಸಣ್ಣ ಸಭಾಂಗಣ ಮೊದಲಾದವುಗಳ ಜೊತೆಗೆ ಮುಂದೆ ಸ್ವಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಲು ಅನುವಾಗುವಂತೆ ವಾಣಿಜ್ಯ ಕೇಂದ್ರಗಳಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ನಾಲ್ಕು ಅಂತಸ್ತಿನ ಈ ನಮ್ಮ ಭವನ ಬಹರೇನ್ ದ್ವೀಪರಾಷ್ಟ್ರದಲ್ಲಿರುವ ಕನ್ನಡಿಗರ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲಿದೆ.

ಬಹರೇನ್ ಸುದ್ದಿ ಕೇಂದ್ರ

ಸಿಸಲ್ ಪನಯಿಲ್ ಸೊಮನ್

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಧ್ಯಪ್ರಾಚ್ಯ ವಲಯ, ಇಂಡ್‌ಸಮಾಚಾರ್

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us