ಭಿನ್ನಮತೀಯ ಕಾಂಗ್ರೆಸ್ ಶಾಸಕರಾದ ಎನ್ ಬಿ ನಾಗೇಂದ್ರ ಮತ್ತು ರಮೇಶ್ ಜಾರಕಿಹೊಳಿ, ಇಂದು ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಈ ಸಮಯ ಮಂತ್ರಿ ಬಿ ಝಡ್ ಜಮೀರ್ ಅಹಮದ್ ಖಾನ್ ಸಹ ಉಪಸ್ಥಿತರಿದ್ದರು.
ಭಿನ್ನಮತೀಯ ಶಾಸಕರು ಮರಳಿದರೂ ಸಹ, ತಮ್ಮ ಗೈರಿಗೆ ಪಕ್ಷದ ನಾಯಕರೇ ಹೊಣೆ ಎಂದು ಹೇಳಿದ್ದಾರೆ.
ಸೋಮವಾರ ಸಿದ್ಧರಾಮಯ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ವಿಧಾನ ಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರೊಂದಿಗೆ ಭೇಟಿಯಾಗಿ, ಭಿನ್ನಮತೀಯ ಶಾಸಕರಲ್ಲರನ್ನೂ ಅನರ್ಹಗೊಳಿಸಲು ಮನವಿ ಸಲ್ಲಿಸಿದರು. ಬಜೆಟ್ ಮಂಚೆಯ ಸಿಎಲ್‌ಪಿ ಸಭೆಗೆ ನಾಲ್ವರೂ ಭಿನ್ನಮತೀಯ ಶಾಸಕರು (ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ಮತ್ತು ಎನ್ ಬಿ ನಾಗೇಂದ್ರ) ಗೈರಾಗಿದ್ದನ್ನು ಸ್ಮರಿಸಬಹುದು.
