ಚೀನಾದಲ್ಲಿರುವ ಕಮ್ಯೂನಿಸ್ಟ್ ಆಡಳಿತವು “ದಿ ಗ್ರೇಟ್ ಫೈರ್ವಾಲ್” ಎನ್ನಲಾದ ಆನ್ಲೈನ್ ನಿಯಂತ್ರಣಾ ವ್ಯವಸ್ಥೆ ಚಾಲ್ತಿಯಲ್ಲಿರಿಸಿದೆ. ಇದರ ಮೂಲಕ, ಗೂಗಲ್, ಫೇಸ್ಬುಕ್, ಟ್ವಿಟರ್ ಸೇರಿದಂತೆ ವಿಶ್ವದಲ್ಲಿ ವ್ಯಾಪಕವಾಗಿ ಬಳಸಲಾದ ಸಾಮಾಜಿಕ ಜಾಲತಾಣಗಳು ಹಾಗೂ ಹಲವಾರು ವಿದೇಶೀ ಮಾಧ್ಯಮ-ಚಾಲಿತ ವಾಹಿನಿಗಳನ್ನು ಚೀನಾ ಸರ್ಕಾರವು ನಿಷೇಧಿಸಿದೆ.
ಇತ್ತೀಚೆಗೆ ಮೈಕ್ರೊಸಾಫ್ಟ್ ಸ್ವಾಮ್ಯದ ಹುಡುಕುವಿಕೆ ಸಾಧನ ಬಿಂಗ್ ಸಹ ನಿಷೇಧಕ್ಕೊಳಗಾಗಿದೆ. ಇದು ಮೈಕ್ರೊಸಾಫ್ಟ್‌ನನವರನ್ನು ಅಚ್ಚರಿಗೊಳಿಸಿದೆ. “ಬಿಂಗ್ ಚೀನಾದಲ್ಲಿ ಅಲಭ್ಯವಾಗಿರುವುದನ್ನು ನಾವು ಖಿಚಿತಪಡಿಸುತ್ತೇವೆ. ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ” ಎಂದು ಮೈಕ್ರೊಸಾಫ್ಟ್ ವಕ್ತಾರ ಸಂಕ್ಷಿಪ್ತ ಹೇಳಿಕೆ ನೀಡಿದ್ದಾರೆ.
