ಬಹರೇನ್‌ನ ರಾಜಧಾನಿ ಮನಾಮದಲ್ಲಿರುವ ಹವಾಮಾನ ಇಲಾಖೆ ನಿರ್ದೇಶನಾಲಯವು ಬುಧವಾರಕ್ಕಾಗಿ (ದಿನಾಂಕ ೨೩ ಜನವರಿ ೨೦೧೯) ಈ ರೀತಿಯ ಹವಾಮಾನ ಮುನ್ಸೂಚನೆ ನೀಡಿದೆ:
ಮುಂದಿನ ೨೪ ತಾಸುಗಳ ಕಾಲ ಹೆಚ್ಚು ಆರ್ದ್ರತೆಯುಳ್ಳ ಶೀತಲ ಹವಾಮಾನವಿರಲಿದೆ.
ಮುಂಜಾನೆ ಮಂಜು ಕವಿದು, ದಿನದಂದು ಭಾಗಶಃ ಮೋಡ ಕವಿದ ವಾತಾವರಣವಿರುವುದು.
ಗಾಳಿ ಬೀಸುವಿಕೆ ೫ ರಿಂದ ೧೦ ನಿಮಿಷಗಳಲ್ಲಿ ದಿಕ್ಕು ಬದಲಾಯಿಸಬಹುದು. ಸಂಜೆಯ ವೇಳೆ ಪೂರ್ವದಿಕ್ಕಿನಿಂದ ಬೀಸಲಿದೆ.
ಉಷ್ಣಾಂಶ: ಗರಿಷ್ಠ: ೨೨ ಡಿಗ್ರಿ ಸೆಲ್ಸಿಯಸ್; ಕನಿಷ್ಠ ೧೨ ಡಿಗ್ರಿ ಸೆಲ್ಸಿಯಸ್
ಆರ್ದ್ರತೆ: ಗರಿಷ್ಠ ೧೦೦%, ಕನಿಷ್ಠ ೪೫%
ಸಮುದ್ರ ಅಲೆಗಳು ೧ ರಿಂದ ೨ ಅಡಿ ತನಕ
