ಭಾರತದ ೭೦ನೆಯ ಗಣರಾಜ್ಯೋತ್ಸವದ ಅಂಗವಾಗಿ “ಇಂಡಿಯಾ ಕ್ವಿಜ್” ರಸಪ್ರಶ್ನೆಯ ಹತ್ತನೆಯ ಆವೃತ್ತಿ ಬಹರೇನ್ ಇಂಡಿಯಾ ಎಜುಕೇಷನಲ್ ಅಂಡ್ ಕಲ್ಚರಲ್ ಫೊರಮ್ ಆಯೋಜಿಸಲಿದೆ. ವೆರಿಟಾಸ್ ಪಬ್ಲಿಕ್ ರಿಲೇಷನ್ಸ್ ಮತ್ತು ಬಹರೇನ್ ಕೇರಳೀಯ ಸಮಾಜಂ ಇದರ ಸಹಭಾಗಿತ್ವ ವಹಿಸಲಿವೆ.
ರಸಪ್ರಶ್ನೆಯು ಬಹರೇನ್ ಮತ್ತು ಭಾರತವೆರಡಕ್ಕೂ ಸಂಬಂಧಿತ ವಿವಿಧ ವಿಷಯಗಳನ್ನು ಆಧರಿಸಲಿದೆ. ಆರು ತಂಡಗಳು ಕೊನೆಯ ಸುತ್ತಿಗೆ ಅರ್ಹತ ಪಡೆಯಲಿವೆ. ಪ್ರತಿ ತಂಡದಲ್ಲಿಯೂ ಮೂವರು ಸದಸ್ಯರಿದ್ದು, ಇವರಲ್ಲಿ ಒಬ್ಬರು ೧೮ ವರ್ಷಕ್ಕಿಂತ ಕಿರಿಯರಿರುತ್ತಾರೆ. ಇನ್ನೊಬ್ಬರು ೧೮ಕ್ಕಿಂತ ಹಿರಿಯ ಹಾಗೂ ಮೂರನೆಯ ಸದಸ್ಯ ಇವೆರಡರಲ್ಲಿ ಯಾವ ವಯಸ್ಸಿನವರಾದರೂ ಇರಬಹುದು.
ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ತಂಡದ ಮುಕುಟ ಹಾಗು ವ್ಯಕ್ತಿಗತ ಮುಕುಟವನ್ನೂ ನೀಡಲಾಗುವುದು. ಎರಡನೆಯ ಮತ್ತು ಮೂರನೆಯ ಬಹುಮಾನ ವಿಜೇತರಿಗೂ ಸಹ ವ್ಯಕ್ತಿಗತ ಮುಕುಟಗಳು ಮತ್ತು ನಗದು ಬಮುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸುವವರೆಲ್ಲರಿಗೂ ರಸಪ್ರಶ್ನೆ ನಡೆಸಿಕೊಡುವವರಾದ ಮಹಮ್ಮದ್ ಹನೀಷ್ (ಐಎಎಸ್) ಅವರು ಸಹಿ ಹಾಕಿರುವ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ರಸಪ್ರಶ್ನೆಯು ಶುಕ್ರವಾರ ತಾರೀಖು ೧ ಫೆಬ್ರುವರಿ ೨೦೧೯ ರಂದು ಸಂಜೆ ೭.೩೦ಗೆ ಬಹರೇನ್‌ನ ಕೇರಳೀಯ ಸಮಾಜಂ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ
International News Desk, Bahrain
Mr.Sisel Panayil Soman, COO – Middle East
