೨೦೧೯ರ ವಿಶ್ವ ಆರ್ಥಿಕ ವೇದಿಕೆ (ಡಬ್ಲೂಇಎಫ್) ಸ್ವಿಟ್ಜರ್ಲೆಂಡ್‌ನ ಡಾವೋಸ್‌ನ ಸ್ವಿಸ್ ಸ್ಕೀ ರೆಸಾರ್ಟ್‌ನಲ್ಲಿ ಮಂಗಳವಾರ ಆರಂಭಗೊಂಡಿತು. ಇಲ್ಲಿ ವಿಶ್ವದ ಪ್ರಮುಖ ದೇಶದ ನಾಯಕರು ಸೇರಿದರು. ಈ ವೇದಿಕೆಯ ಸಭೆಯಲ್ಲಿ ಬಹರೇನ್ ತನ್ನ ತೆರೆದ ಮತ್ತು ಉದಾರ ಚಿತ್ರಣವನ್ನು ಪರಿಚಯಿಸಲು ಆಶಿಸುತ್ತಿದೆ ಮತ್ತು ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸಲಿದೆ ಎಂದು ಬಹರೇನ್ ಆರ್ಥಿಕ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೈಮನ್ ಗಾಲ್ಪಿನ್ ಹೇಳಿದ್ದಾರೆ.
“ನಮಗೆ, ಡಬ್ಲೂಇಎಫ್ ರಾಜಕೀಯ ನಾಯಕರೊಂದಿಗೆ ಮಾತ್ರವಲ್ಲ, ಇದಲ್ಲದೆ ಉದ್ದಿಮೆ ಅಧ್ಯಕ್ಷರುಗಳೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸುತ್ತದೆ. ಬಹರೇನ್‌ನಲ್ಲಿ ಇತ್ತೀಚಿನ ಪರಿವರ್ತನೆಗಳು ಮತ್ತು ಹೊಸ ಅವಕಾಶಗಳು ಲಭಿಸಿವೆ, ಹಾಗಾಗಿ ವ್ಯಾಪಾರ ಮತ್ತು ಹೂಡಿಕೆಗಾಗಿ ಬಹರೇನ್ ಮುಕ್ತಗೊಳ್ಳುತ್ತಿದೆ” ಎಂದು ಗಾಲ್ಪಿನ್ ಹೇಳಿದರು.
ಬಹರೇನ್ ಕೊಲ್ಲಿ ಪ್ರದೇಶದಲ್ಲಿನ ಅತ್ಯಂತ ಚಿಕ್ಕ ದೇಶ ಮತ್ತು ಅರ್ಥಿಕತೆಯಾಗಿದ್ದರೂ, ಈ ವಲಯದಲ್ಲಿ ಅತ್ಯಂತ ಮುಕ್ತ ಆರ್ಥಿಕತೆ ಹೊಂದಿದೆ. ವ್ಯಾಪಾರಗಳಿಗೆ ಅತ್ಯಮೂಲ್ಯ ಅವಕಾಶಗಳು ಹಾಗೂ ಕೊಲ್ಲಿ ವಲಯದಲ್ಲಿ ಬೆಳೆಯುತ್ತಿರುವ ಆರ್ಥಿಕತೆಗಳಿಗೆ ಬಹರೇನ್ ಉತ್ತಮ ಮಾರುಕಟ್ಟೆ ಒದಗಿಸಲಿದೆ” ಎಂದು ಗಾಲ್ಪಿನ್ ಹೇಳಿದರು.
ಬಹರೇನ್ ಇಡಿಬಿ ಅಂತರಜಾಲತಾಣದ ವರದಿಯ ಪ್ರಕಾರ, ಬಹರೇನ್ ಮತ್ತು ಚೀನಾ ನಡುವೆ ತೈಲವನ್ನು ಹೊರತುಪಡಿಸಿ ವ್ಯಾಪಾರವಾದ ಇತರೆ ಸರಕುಗಳ ಮೌಲ್ಯ ೨೦೦೯ರಲ್ಲಿ ೮೭೨ ದಶಲಕ್ಷ ಅಮೆರಿಕನ್ ಡಾಲರ್ ಇದ್ದದ್ದು ೨೦೧೭ರಲ್ಲಿ ೧.೭ ಶತಕೋಟಿ ಅಮೆರಿಕನ್ ಡಾಲರ್‌ಗಳನ್ನೂ ಮೀರಿತು. ಈಗಾಗಲೇ ಬಹರೇನ್ ಹುವಾವೈ ಹಾಗೂ ಸಿಐಎಂಸಿ ಸೇರಿದಂತೆ ಚೀನಾದ ದೊಡ್ಡ ಉದ್ದಿಮೆಗಳನ್ನು ಹೂಡಿಕೆ ಮಾಡುವಂತೆ ಆಕರ್ಷಿಸಿದೆ. ಹುವಾವೈ ಕೊಲ್ಲಿ ವಲಯದ ಪ್ರಧಾನ ಕ್ಷೇತ್ರವನ್ನು ಬಹರೈನ್‌ನಲ್ಲಿ ಸ್ಥಾಪಿಸಲಿದೆ.
ಬಹರೇನ್ ಇನ್ನಷ್ಟು ಹೆಚ್ಚು ಚೀನೀ ಹೂಡಿಕೆದಾರರಿಗೆ ಆಹ್ವಾನ ನೀಡಿದೆ; ಒಟ್ಟಾರೆ ದೊಡ್ಡ ಉದ್ದಿಮೆಗಳು ಇಲ್ಲಿ ಹೂಡಿಕೆ ಮಾಡಲಿವೆ ಎಂದು ಗಾಲ್ಪಿನ್ ನಂಬುತ್ತಾರೆ.
ವಿಶ್ವ ಬ್ಯಾಂಕ್ ೨೦೧೭ರಲ್ಲಿ ಬಿಡುಗಡೆಗೊಳಿಸಿದ ಸರಾಗ ವ್ಯಾಪಾರ-ವ್ಯವಹಾರ ವರದಿಯ ಪ್ರಕಾರ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ದೇಶ (ಎಂಇಎನ್‌ಎ) ಗಳ ಪಟ್ಟಿಯಲ್ಲಿ ವ್ಯವಹಾರ-ಸ್ನೇಹಿ ವಿಚಾರದಲ್ಲಿ ಬಹರೇನ್ ಎರಡನೆಯ ಸ್ಥಾನದಲ್ಲಿದೆ. ಚೀನಾದ ಹಾಂಗ್‌ಕಾಂಗ್ ವಿಶೇಷ ಆಡಳಿತ ವಲಯದಂತೆ ಬಹರೇನ್ ಆರ್ಥಿಕ ಲಕ್ಷಣಗಳನ್ನು ಹೊಂದಿದೆ ಎಂದು ಗಾಲ್ಪಿನ್ ಅಭಿಪ್ರಾಯಪಟ್ಟಿದ್ದಾರೆ.
“ಬಹರೇನ್ ಹಾಂಗ್ ಕಾಂಗ್‌ಗಿಂತ ಚಿಕ್ಕದಾಗಿದೆ. ಆದರೆ ಬಹರೇನ್ ಒಂದು ಪ್ರಮುಖ ಆರ್ಥಿಕತೆ, ಬಹಳ ಮುಕ್ತ, ಬಹಳ ಉದಾರ, ಯಾವುದೇ ತೆರಿಗೆಯಿಲ್ಲ. ಮತ್ತು ನೀವು ಸ್ಥಳೀಯ ಪಾಲುದಾರರನ್ನು ಅಥವಾ ಸ್ಥಳೀಯ ಹೂಡಿಕೆದಾರರನ್ನೇ ಭಾಗಿಯಾಗಿಸಿಕೊಳ್ಳುವ ನಿರ್ಬಂಧಗಳಿಲ್ಲ. ನೀವು ಹಾಂಗ್ ಕಾಂಗ್ ತರಹ ೧೦೦% ಕೇಂದ್ರಗಳನ್ನು ಸ್ಥಾಪಿಸಸಬಹುದು,”ಎಂದು ಗಾಲ್ಪಿನ್ ಚಿಜಿಟಿಎನ್‌ಗೆ ಹೇಳಿದರು.
ಬಹರೇನ್ ಡಿಜಿಟಲ್ ಆರ್ಥಿಕತೆ ಮತ್ತು ಕೊಲ್ಲಿ ವಲಯದ ಫಿನ್ಟೆಕ್ ಕೇಂದ್ರವಾಗುವತ್ತ ದಾಪುಗಾಲು ಹಾಕುತ್ತಿದೆ. ಡಿಜಿಟಲ್ ಪಟ್ಟಿ ಮತ್ತು ಮಾರ್ಗ ತೊಡಗುವಿಕೆಯಲ್ಲಿ ಅವಕಾಶಗಳ ಬಗ್ಗೆ ಗಾಲ್ಪಿನ್ ವಿಶ್ವಾಸದ ಧೋರಣೆ ಹೊಂದಿದ್ದಾರೆ. “ನಾವು ಬಹರೇನ್‌ನ್ನು ಇ-ವಾಣಿಜ್ಯ, ದತ್ತಾಂಶ ಕೇಂದ್ರಗಳು, ಆಟದ ಉದ್ದಿಮೆಗಳಿಗಾಗಿ ಮುಕ್ತಗೊಳಿಸುವೆವು” ಎಂದಿದ್ದಾರೆ.
“ಬಹರೇನ್ ಒಂದು ಅತ್ಯಂತ ಉದಾರ ಮತ್ತು ಅತ್ಯಂತ ಮುಕ್ತ ಆರ್ಥಿಕತೆ ಎಂದು ನಾವು ಸ್ಪಷ್ಟಗೊಳಿಸಲು ಬಯಸುತ್ತೇವೆ. ಜೊತೆಗೆ ನಿಬಂಧನೆಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಚೀನಾ ಹಾಗೂ ವಿಶ್ವದಾದ್ಯಂತ ಉದ್ದಿಮೆದಾರರಿಗೆ ಬಹರೇನ್‌ನ್ನು ಕೇಂದ್ರವನ್ನಾಗಿಸಲು ಅನುಕೂಲ ಮಾಡಿಕೊಡುತ್ತೇವೆ” ಎಂದು ಅವರು ಒತ್ತಿ ಹೇಳಿದರು.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಇಂದ್‌ಸಮಾಚಾರ್ ಮಧ್ಯಪ್ರಾಚ್ಯ ವಲಯ
