Bahrain

ಗಣರಾಜ್ಯೋತ್ಸವದ ಅಂಗವಾಗಿ ಬಹರೇನ್‌ನಲ್ಲಿ ಇಂಡಿಯನ್ ಡಿಲೈಟ್ಸ್‌ – ಇಂಡಿಯಾ ಕ್ವಿಜ್ 2019

ಭಾರತದ 70 ನೇ ಗಣರಾಜ್ಯೋತ್ಸವದ ಅಂಗವಾಗಿ, ಬಹರೇನ್‌ ಭಾರತ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆಯು, ವೆರಿಟಾಸ್ ಪಬ್ಲಿಕ್ ರಿಲೇಶನ್ಸ್ ಮತ್ತು ಬಹ್ರೇನ್ ಕೇರಳೀಯ ಸಮಾಜಂ ಸಹಯೋಗದೊಂದಿಗೆ, “ಇಂಡಿಯನ್ ಡಿಲೈಟ್ಸ್‌ – ಇಂಡಿಯಾ ಕ್ವಿಜ್ 2019” ಏರ್ಪಡಿಸುತ್ತಿದೆ. ರಸಪ್ರಶ್ನೆಯು 2019ರ ಫೆಬ್ರುವರಿ 1ರಂದು ಬಹರೇನ್‌ನ ಬಹರೇನ್ ಕೇರಳೀಯ ಸಮಾಜಂ ನ ವಜ್ರಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಭಾಗವಹಿಸಬಯಸುವವರು ಸ್ಥಳದಲ್ಲೇ ನೋಂದಾಯಿಸಿಕೊಳ್ಳಲು ಅವಕಾಶವಿದೆ. “ಎಲಿಮಿನೇಷನ್” ಸುತ್ತು ಸಂಜೆ 5.30 ಗಂಟೆಗೆ ಪ್ರಾರಂಭವಾಗುತ್ತದೆ. ಭಾಗವಹಿಸುವವರೆಲ್ಲರೂ ಸಂಜೆ 4.30ಕ್ಕೆ ಸ್ಥಳಕ್ಕೆ ಹಾಜರಾಗಬೇಕು. ಅಂತಿಮ ಸುತ್ತು ಸಂಜೆ 7.30ಕ್ಕೆ ಆರಂಭವಾಗುತ್ತದೆ.

ಎಪಿಎಂ ಮೊಹಮ್ಮದ್ ಹನೀಷ್ ಎಎಸ್

ನುರಿತ ಕ್ವಿಜ್ ಮಾಸ್ಟರ್ ಹಾಗೂ ಹಿರಿಯ ಐಎಎಸ್ ಅಧಿಕಾರಿ ಶ್ರೀ ಎ ಪಿ ಎಂ ಮೊಹಮ್ಮದ್ ಹನೀಷ್ ಈ ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಕ್ಕೆ ಬಹಳಷ್ಟು ಜನರು ಬರುವ ನಿರೀಕ್ಷೆಯಿದೆ. ಬಹರೇನ್‌ನ ರಸಪ್ರಶ್ನೆ ಪ್ರೇಮಿಗಳಿಗೆ ಹನೀಷ್‌ ಚಿರಪರಿಚಿತ, ಏಕೆಂದರೆ ಇಂಡಿಯಾ ಕ್ವಿಜ್‌ನ ಹಿಂದಿನ ಮೂರು ಅವೃತ್ತಿಗಳಿಗಳಲ್ಲಿ ಇವರೇ ಕ್ವಿಜ್‌ಮಾಸ್ಟರ್ ಆಗಿದ್ದರು.

 

ಡಾ. ಇಬ್ರಾಹಿಂ ಅಲ್ ದೊಸರಿ

ಡಾ. ಇಬ್ರಾಹಿಂ ಅಲ್ ದೊಸರಿ ಇಂಡಿಯಾ ಕ್ವಿಜ್ 2019 ರ ಮುಖ್ಯ ಅತಿಥಿಯಾಗಲಿದ್ದಾರೆ. ದೊಸರಿ ಅವರು ತರಬೇತಿ ಮತ್ತು ಅಭಿವೃದ್ಧಿ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟದ (ಐಎಫ್‌ಟಿಡಿಒ) ಮುಖ್ಯಸ್ಥ, ಬಹರೇನ್ ತರಬೇತಿ ಮತ್ತು ಅಭಿವೃದ್ಧಿ ಸಂಘದ ಮುಖ್ಯ ಕಾರ್ಯದರ್ಶಿ, ಹಾಗೂ ಬಹರೇನ್ ಪ್ರಧಾನಿಯ ದರ್ಬಾರ್‌ನಲ್ಲಿ ಮಾಹಿತಿ ಇಲಾಖೆಯ ಸಹಾಯಕ ಉಪಕಾರ್ಯದರ್ಶಿಯಾಗಿದ್ದಾರೆ.

ಇಂಡಿಯನ್ ಡಿಲೈಟ್ ರೆಸ್ಟ್ರಾಂಟ್ ಶೀರ್ಷಿಕೆಯ ಪ್ರಾಯೋಜಕರು; ಮಾತಾ ಅಡ್ವರ್ಟೈಸಿಂಗ್ ಈ ಕಾರ್ಯಕ್ರಮದ ಪ್ರಾಯೋಜಕರು; ಯುಎಇ ಎಕ್ಸ್ಚೇಂಜ್ ಮತ್ತು ರೋಬೋಸ್ ಪ್ರಚಾರ ಬೆಂಬಲ ನೀಡಿದ್ದಾರೆ.

ಶ್ರೀ ಎಪಿಎಂ ಮೊಹಮ್ಮದ್ ಹನೀಶ್ ಮುಂಚೆ ಕೊಚ್ಚಿ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ವಿಶಿಷ್ಟವಾಗಿರುವ ಈ ಭಾರತೀಯ ರಸಪ್ರಶ್ನೆ ಸ್ಪರ್ಧೆ ಎಲ್ಲರಿಗೂ ಮುಕ್ತ. ಪ್ರವೇಶ ಉಚಿತವಾಗಿದೆ. 10ನೆಯ ಇಂಡಿಯಾ ಕ್ವಿಜ್‌ನ ಪ್ರಾಥಮಿಕ ಸುತ್ತಿನಲ್ಲಿ ಬಹರೇನ್‌ನಲ್ಲಿರುವ ಸುಮಾರು 200ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಯೊಂದು ತಂಡವು ಒಬ್ಬ ವಯಸ್ಕ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಬ್ಬ ವಿದ್ಯಾರ್ಥಿಯಿರುತ್ತಾರೆ. ಮೂರನೆಯವರು ವಯಸ್ಕರು ಅಥವಾ ವಿದ್ಯಾರ್ಥಿಯೂ ಆಗಿರಬಹುದು. ಭಾಗವಹಿಸುವವರೆಲ್ಲರೂ ತಮ್ಮ ಮಾತೃಭೂಮಿಯ ಬಗ್ಗೆ ತಿಳಿದುಕೊಂಡು ಅದನ್ನು ಪ್ರಶಂಸಿಸುವ ಉದ್ದೇಶದಿಂದ ಈ ರಸಪ್ರಶ್ನೆಯು ಭಾರತಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಒಳಗೊಳ್ಳುತ್ತದೆ.

1. ಮೊದಲನೆಯ ಬಹುಮಾನವು ಒಂದು ರೊಲಿಂಗ್ ಟ್ರೊಫಿ, ಮೂರು ವೈಯಕ್ತಿಕ ಟ್ರೊಫಿಗಳು, ಪ್ರಮಾಣ ಪತ್ರಗಳು ಹಾಗೂ ನಗದು ಬಹುಮಾನಗಳನ್ನು ಒಳಗೊಂಡಿರುತ್ತದೆ.
2. ಎರಡನೆಯ ಬಹುಮಾನವು 3 ವೈಯಕ್ತಿಕ ಟ್ರೋಫಿಗಳು, ಪ್ರಮಾಣಪತ್ರಗಳು ಮತ್ತು ನಗದು ಬಹುಮಾನಗಳನ್ನು ಒಳಗೊಂಡಿರುತ್ತದೆ.
3. ಮೂರನೆಯ ಬಹುಮಾನವು 3 ವೈಯಕ್ತಿಕ ಟ್ರೋಫಿಗಳು, ಪ್ರಮಾಣಪತ್ರಗಳು, ಮತ್ತು ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ರಸಪ್ರಶ್ನೆ ನಡೆದ ದಿನದಂದೇ, ಶ್ರೀ ಮೊಹಮ್ಮದ್ ಹನೀಷ್ ಐಎಎಸ್ ಸಹಿ ಹಾಕಿದ ಪ್ರಮಾಣ ಪತ್ರಗಳನ್ನು ಭಾಗವಹಿಸುವವರಿಗೆ ವಿತರಇಸಲಾಗುವುದು.

ಬಿಐಇಎಫ್ಎಫ್ ಅಧ್ಯಕ್ಷ ಶ್ರೀ ಸೋವಿಕೇನ್ ಚೆನ್ನತ್ತೂಸೆರಿ, ಸಮಾರಂಭದ ಮಹಾಸಂಚಾಲಕ ಪವಿತ್ರನ್ ನಿಲೇಶ್ವರಂ, ಕಾರ್ಯಕಾರಿ ಸದಸ್ಯರಾದ ದೇವರಾಜ್, ಶ್ರೀ ಅಜಿತ್ ಕುಮಾರ್, ಅಜಿ ಪಿ ಜಾಯ್, ಶ್ರೀ ಅನೂಪ್, ಕಾರ್ಯಕ್ರಮ ಸಂಚಾಲಕ ಕಮಾಲುದ್ದೀನ್, ಸಮಾರಂಭ ಸಂಚಾಲಕಿ ಶ್ರೀಮತಿ, ಬಾಬಿನಾ, ಬಿಐಐಎಫ್ಎಫ್ ಮಾಧ್ಯಮ ಸಂಚಾಲಕ ಸುನಿಲ್ ಥಾಮಸ್ ರನ್ನಿ ಅವರು ಇಂಡಿಯನ್ ಡಿಲೈಟ್ಸ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇಂಡಿಯಾ ಕ್ವಿಜ್ 2019ಗಾಗಿ ನೋಂದಣಿ ಪತ್ರಗಳು ನಿಗಧಿತ ರೂಪದಲ್ಲಿ ಆಯೋಜಕರಿಗೆ 2019ರ ಜನವರಿ 31ರಂದು ತಲುಪಬೇಕು.ಪತ್ರಗಳು ಬಹರೇನ್ ಕೇರಳೀಯ ಸಮಾಜಂ ಕಾರ್ಯಾಲಯದಲ್ಲಿ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿಯ ಮೂಲಕ ಸಜಿನಿ ನೆಟ್ಟೊ (3384-899) ಅಥವಾ ಶೀಜಾ ಪವಿತ್ರನ್‌ (3405-7137) ಅಥವಾ ಬಬಿನಾ ಸುನಿಲ್ (3594-4820) ಅವರನ್ನು ಸಂಪರ್ಕಿಸಿ. [email protected] ಗೆ ಮಿಂಚೆ (ಇಮೇಲ್‌) ಮಾಡಿ.

Press Release
Sovichen Chennattusserry
President, BIECF, Tel 39073783 [email protected]

 

International News Desk, Bahrain

Mr.Sisel Panayil Soman, COO – Middle East

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us