ಬಹರೇನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ವರ್ಷ ೯ ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಕಂಡದ್ದನ್ನು ದಾಖಲಾಗಿದೆ. ಇದು ೨೦೧೭ರ ಅಂಕಿ-ಅಂಶಕ್ಕಿಂತಲೂ ೭% ಹೆಚ್ಚುವರಿ ಎನ್ನಲಾಗಿದೆ.
ವಿಮಾನ ಸಂಚಾರ ನಿಯಂತ್ರಣಾ ಕೇಂದ್ರವು ಕಳೆದ ವರ್ಷ ೬೨೪,೦೦೦ ವಿಮಾನ ಯಾನಗಳನ್ನು ನಿರ್ವಹಿಸಿತು. ಇದು ೨೦೧೭ಕ್ಕೆ ಹೋಲಿಸಿದರೆ ೪% ಹೆಚ್ಚಾಗಿದೆ. ಈ ಮಾಹಿತಿಯನ್ನು ನಾಗರಿಕ ವಿಮಾನಯಾನ ಇಲಾಖೆಯ ಉಪಕಾರ್ಯದರ್ಶಿ ಮೊಹಮ್ಮದ್ ಥಮರ್ ಅಲ್ ಕಾಬಿ ಬಹರೇನ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದು ವರದಿಯಾಗಿದೆ.
ಸಿಬ್ಬಂದಿ ತರಬೇತಿ ಸೇರಿದಂತೆ, ವಿಮಾನ ಸಂಚಾರ ನಿಯಂತ್ರಣ ಕೇಂದ್ರವು ಒದಗಿಸುವ ಸೇವೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ವಿಮಾನ ಯಾನ ಇಲಾಖೆಯು ಹಲವಾರು ಯೋಜನೆಗಳನ್ನು ಪರಿಗಣಿಸುತ್ತಿದೆ.
ವಿಮಾನ ಯಾನ ಇಲಾಖೆಯ ಸಿಬ್ಬಂದಿ ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡಲನುಕೂಲವಾಗಿಸಲು ಅತ್ಯಾಧುನಿಕ ತಂತ್ರಜ್ಞಾನ ನೀಡಲು ಬದ್ಧರಾಗಿದ್ದೇವೆ ಎಂದು ಬಹರೇನಿ ಅಧಿಕಾರಿ ತಿಳಿಸಿದರು.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಂದ್‌ಸಮಾಚಾರ್ ಮಧ್ಯಪ್ರಾಚ್ಯ ವಲಯ
