ಇಂದು (23-07-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಅಡಿಕೆ ವರ್ತಕರ ಹಾಗೂ ಸಂಘಗಳ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರನ್ನು ಭೇಟಿಯಾಗಿ
ಎಪಿಎಂಸಿ ಕಾಯ್ದೆ ತಿದ್ದುಪಡಿ ನಂತರ ಮಾರುಕಟ್ಟೆ ಹೊರಗೆ ವ್ಯಾಪಾರ ಮಾಡುವವರಿಗೆ ಮಾರುಕಟ್ಟೆ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು. Apmc ಪ್ರಾಂಗಣದಲ್ಲಿ ವ್ಯಾಪಾರ ಮಾಡುವವರಿಗೆ ಶೇ 1 ರಂತೆ ಸೆಸ್ ಹಾಕುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಡಿಕೆ ಧರದ ಮೇಲೆ ಪರಿಣಾಮ ಬಿರುತ್ತಿದ್ದು, ಮಾರುಕಟ್ಟೆ ಸೆಸ್ ಅನ್ನು ಶೇ 0.25 ಗೆ ಇಳಿಸಲು ಮನವಿ ಮಾಡಿದರು,
ಸೂಕ್ತವಾಗಿ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಸಾಧಕ-ಭಾದಕಗಳನ್ನು ಗಮನದಲ್ಲಿಟ್ಟುಕೊಂಡು ಸೆಸ್ ಅನ್ನು ಶೇ 0.35 ಗೆ ನಿಗದಿಗೊಳಿಸಿದ್ದಾರೆ. ಇದರ ಪರಿಣಾಮ ರೈತನ ಲಾಭವಾಗುವುದರೊಂದಿಗೆ ವರ್ತಕನ ಮೇಲಿನ ಹೊರೆ ಕಡಿಮೆಯಾಗಲಿದೆ.
ಈ ನಿಯೋಗದಲ್ಲಿ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ರಾದ ಆರಗ ಜ್ಞಾನೇಂದ್ರ ರವರು, ಆರ್ಯವೈಶ್ಯ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣ್ ರವರು, ಕ್ಯಾಂಪ್ಕೋ, ಮ್ಯಾಮ್ ಕೋಸ್, ತುಮ್ ಕೋಸ್, TSS ಹಾಗೂ ವಿವಿಧ ಸಂಘಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
By Goutham K S, Sagara